Breaking News

ಯಲ್ಲಾಪುರ ಠಾಣೆ ನೂತನ ಪಿ.ಐ ಆಗಿ ಅಧಿಕಾರ ಸ್ವೀಕರಿಸಿದ ಸುರೇಶ್ ಜಿ ಕುಂಬಾರ.

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ಪೊಲೀಸ್ ಠಾಣೆ ನೂತನ ಪಿಐ ಆಗಿ ಸುರೇಶ್ ಜಿ ಕುಂಬಾರ್ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.ಈ ಹಿಂದೆ ಇದೇ ಠಾಣೆಯಲ್ಲಿ ಪಿಐ ಆಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ಹಾನಾಪುರ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಹುಬ್ಬಳ್ಳಿ ರೈಲ್ವೆ ನಿಲ್ದಾಣ ವ್ಯಾಪ್ತಿಯ ಠಾಣೆಯಲ್ಲಿ ಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಜಿ ಕುಂಬಾರ್ ಯಲ್ಲಾಪುರ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದಾರೆ. ಮೂಲತಃ ಗದಗ ದವರಾಗಿದ್ದು ಕರ್ತವ್ಯದಲ್ಲಿ …

Read More »

ಯಲ್ಲಾಪುರ ತಾಲೂಕಿನ ಪ್ರವಾಸಿ ತಾಣಗಳ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಿ – ವಸೂಲಿ ನಿಲ್ಲಿಸಿ – ಶಂಶು ಮಾರ್ಕರ್.

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಎಂದರೆ ಪ್ರವಾಸಿ ತಾಣಗಳ ತವರು. ಇಲ್ಲಿ ಸುಂದರ ಸಮುದ್ರತೀರ, ಹಚ್ಚ ಹಸಿರಾದ ಪ್ರಕೃತಿ, ಬೋರ್ಗರೆದು ದುಮ್ಮಿಕ್ಕುವ ಜಲಪಾತಗಳು, ಪುರಾತನ ಇತಿಹಾಸ ಸಾರುವ ನೂರಾರು ದೇವಾಲಯಗಳು, ವಿಶಿಷ್ಟ ಸಂಸ್ಕೃತಿ ಪರಂಪರೆ ಹೊಂದಿದ ಬುಡಕಟ್ಟು ಸಮುದಾಯಗಳು ಇನ್ನು ಹಲವು ವೈಶಿಷ್ಟ್ಯ ಹೊಂದಿ ಪ್ರವಾಸಿಗರ ಪ್ರವಾಸಕ್ಕೆ ಕೈ ಬೀಸಿ ಕರೆವ ಜಿಲ್ಲೆಯಾಗಿದೆ. ವಿಶೇಷವಾಗಿ ಯಲ್ಲಾಪುರ ತಾಲೂಕು ಜಲಪಾತಗಳ ಆಗರವಾಗಿದೆ. ಇಲ್ಲಿನ ಸಾತೊಡ್ಡಿ ಮತ್ತು ಮಾಗೋಡು ಪ್ರವಾಸಿಗರ ನೆಚ್ಚಿನ …

Read More »

ಸೆ,6 ರಂದು ಯಲ್ಲಾಪುರದಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಹಾಗು “ಉತ್ತಮ ಸೇವಾ ಸಂಸ್ಥೆ”, “ಕಾಯಕ ರತ್ನ” ಪ್ರಶಸ್ತಿ ಪ್ರಧಾನ ಸಮಾರಂಭ.

ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕ ರಾಜ್ಯ ಸರ್ಕಾರದ ನೌಕರರ ಸಂಘ ಹಾಗೂ ಸಾಹಿತ್ಯ ಪರಿಷತ್ತು, ಬೆಂಗಳೂರು – ಉತ್ತರ ಕನ್ನಡ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ದಿನಾಂಕ “ಸಾಂಸ್ಕೃತಿಕ ವೈಭವ – ಉತ್ತಮ ಸೇವಾ ಸಂಸ್ಥೆ” ಕಾರ್ಯಕ್ರಮಕ್ಕೆ 6-9-2026 ರ ರವಿವಾರದಂದು ಯಲ್ಲಾಪುರದ ಅಡಿಕೆ ಭವನದಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರುಗಲಿದ್ದು ವೇದಿಕೆಯಲ್ಲಿ ಉತ್ತಮ ಸೇವಾ ಸಂಸ್ಥೆ ಹಾಗು ಕಾಯಕ ರತ್ನ ಪ್ರಶಸ್ತಿ ಪ್ರಧಾನ ನೆರವೇರಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ …

Read More »

ಮಾಜಿ ಪ್ರಧಾನಿ ದಿ, ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಯಲ್ಲಾಪುರ ಶಿಕ್ಷಕ ಸುಧಾಕರ ನಾಯ್ಕ್ ಆಯ್ಕೆ.

ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಘಟಕದ ವತಿಯಿಂದ ಪ್ರಧಾನ ಮಾಡಲಾಗುವ ಮಾಜಿ ಪ್ರಧಾನಿ ದು,ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಯಲ್ಲಾಪುರ ತಾಲೂಕಿನ ಕಂಚನಳ್ಳಿ ಸ.ಹಿ‌.ಪ್ರಾ ಶಾಲೆಯ ಕ್ರಿಯಾಶೀಲ ಶಿಕ್ಷಕ ಸುಧಾಕರ್ ಜಿ ನಾಯ್ಕ್ ಆಯ್ಕೆಯಾಗಿದ್ದು ಸೆ,5 ರಂದು ಬೆಂಗಳೂರಿನ ಕ್ವಿನ್ಸ್ ರಸ್ತೆಯಲ್ಲಿನ “ಭಾರತ್ ಜೋಡೋ ಭವನ” ದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕೆಪಿಸಿಸಿ ಶಿಕ್ಷಕ ಘಟಕದ …

Read More »

ಮಚಿಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭರತನಹಳ್ಳಿ ಪ್ರಗತಿ ವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ.

ಪ್ರತಿಧ್ವನಿ ಯಲ್ಲಾಪುರ : 17 ವರ್ಷ ವಯೋಮಿತಿಯ ಒಳಗಿನ ಮಂಚಿಕೆರೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭರತನಹಳ್ಳಿ ಪ್ರಗತಿ ವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಲಭಿಸಿದೆ. ವೈಯಕ್ತಿಕ ವಿಭಾಗದಲ್ಲಿ ಬಾಲಕ, ಬಾಲಕಿಯರ 100m ಓಟಗಳು ಪ್ರಥಮಉದ್ದ ಜಿಗಿತಗಳು ಪ್ರಥಮ,ಬಾಲಕಿಯರ 400m ಹರ್ಡಲ್ಸ್, ಉದ್ದ ಜಿಗಿತ, ತ್ರಿವಿಧ ಜಿಗಿತಗಳು ಪ್ರಥಮ,ಬಾಲಕ ಬಾಲಕಿಯರ 200m ಓಟ, ರೀಲೆಗಳು ದ್ವಿತೀಯಬಾಲಕರ 200m ಓಟ, ಹರ್ಡಲ್ಸ್ ,ಎತ್ತರ ಜಿಗಿತಬಾಲಕ ಬಾಲಕಿಯರ ಭರ್ಜಿ ಎಸೆತದಲ್ಲಿ ತೃತೀಯ,ನಡಿಗೆ, ಚಕ್ರ ಎಸೆತ, …

Read More »

ಗ್ರಾಮ ಮಟ್ಟದಿಂದಲೆ  “ಭಾರತ್ ಜೋಡೋ” ಬಲಿಷ್ಠವಾಗಿಸಲು ಯುವಕರನ್ನು ಹೆಚ್ಚಾಗಿ ತೊಡಗಿಸಿ – ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಭಾರತ್ ಜೋಡೋ ಹಾಗೂ ಎಸ್‌ಐಆರ್‌ನ 2ನೇ ಹಂತದ ಕಾರ್ಯಚಟುವಟಿಕೆಗಳ ಕುರಿತು ಮಾನ್ಯ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಇಂದು ಯಲ್ಲಾಪುರ ಪಟ್ಟಣದ ಕಾರ್ಯಾಲಯದಲ್ಲಿ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗದ ಪ್ರಮುಖರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು,ಭಾರತ್ ಜೋಡೋ ಯುವ ಸಂಘದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಸಂಘಟನೆಯೊಂದಿಗೆ ಸಂಪರ್ಕಿಸಿ, ಗ್ರಾಮ ಮಟ್ಟದಿಂದಲೇ ಸಂಘಟನೆಯನ್ನು ಪರಿಣಾಮಕಾರಿಯಾಗಿ ಕಟ್ಟುವ ಅಗತ್ಯವನ್ನು ತಿಳಿಸಿದರು ಹಾಗೂ ಸದಸ್ಯರ …

Read More »

ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಶಾಸಕ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡ ತಾಲ್ಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ಬುಧವಾರ ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ, ಬಸ್ ಚಾಲಕ ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡು ಯಲ್ಲಾಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕೆಲವು ಪ್ರಯಾಣಿಕರನ್ನು ಶಾಸಕರಾದ ಶಿವರಾಮ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್ ಅವರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ …

Read More »

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು ಹೊರಡಿಸಲಾದ ಅಧಿಸೂಚನೆಗೆ ನಮ್ಮ ಆಕ್ಷೇಪಣೆಯನ್ನು ಪರಿಗಣಿಸಿ, ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಜಿಲ್ಲಾ ಅರಣ್ಯ ಸಾಗುವಳಿದಾರರ ಜಿಲ್ಲಾ ವೇದಿಕೆ ಅಧ್ಯಕ್ಷ ಚಂದ್ರಕಾಂತ ಕೋಚರೆಕರ್ ಅವರುಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಭಾರತ ಸರ್ಕಾರ, ನವದೆಹಲಿಯ ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ಪತ್ರ ಬರೆದಿದ್ದಾರೆ.    ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ …

Read More »

ಯಲ್ಲಾಪುರದಲ್ಲಿ ಅತ್ಯಂತ ಸಂಭ್ರಮದಿ ಆಚರಿಸಿದ ಈದ್-ಮಿಲಾದ್ ಪೊಲೀಸರ ಬಿಗಿ ಬಂದೋಬಸ್ತ್.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಪವಿತ್ರ ಈದ್ ಮಿಲಾದ್ ಆಚರಣೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ಪಟ್ಟಣದ ಮೂಲೆ ಮೂಲೆಯಲ್ಲು ಅಲಂಕಾರ ಜೋರಾಗಿತ್ತು. ಮುಸ್ಲಿಂ ಸಮುದಾಯದ ಮಕ್ಕಳು,ಹಿರಿಯರು ಸಹ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅಲ್ಲಲ್ಲಿ ತಂಪು ಪಾನಿಯದ ಸೇವೆ ಬಲು ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು.ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಯಲ್ಲಾಪುರ ಪೊಲೀಸರ ಬಂದೋಬಸ್ತ್ ಬಿಗಿಯಾಗಿತ್ತು.

Read More »

ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಒಪ್ಪಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದವರಿಗೆ ಅಭಿನಂದನೆ – ವಿವೇಕ್ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ  : ಹನುಮಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಅರ್ಜುನ ಬಂಡಿವಡ್ಡರ್ ಹಾಗೂ ಹುನಗುಂದದ ಬಿಜೆಪಿ ಮುಖಂಡರಾದ ಧರಣೇಂದ್ರ ಹೊಂಡದಗಟ್ಟಿ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕೆಪಿಸಿಸಿ ಸದಸ್ಯರಾದ ವಿವೇಕ್ ಹೆಬ್ಬಾರ್ ಅವರು ಅರ್ಜುನ ಬಂಡಿವಡ್ಡರ್ ಹಾಗೂ ಧರಣೇಂದ್ರ ಹೊಂಡದಗಟ್ಟಿ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ, ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ವಿವೇಕ್ ಹೆಬ್ಬಾರ್ ಅವರು, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ …

Read More »