Breaking News

ಸ್ವರ್ಣ ಗೋಲ್ಡ್ ಮತ್ತು ಡೈಮಂಡ್ ಜುವೆಲ್ಲರಿ ಪ್ರದರ್ಶನ ಹಾಗು ಮಾರಾಟ ಮೇಳ ಉದ್ಘಾಟಿಸಿದ ಬಾಲಕೃಷ್ಣ ನಾಯಕ್.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವೆಂಕಟರಮಣ ಸಭಾಭವನದಲ್ಲಿ ಸ್ವರ್ಣ ಸಂಸ್ಥೆಯವರು ಹಮ್ಮಿಕೊಂಡ ಬಂಗಾರದ ಆಭರಣಗಳು ಮತ್ತು ವಜ್ರದ ಆಭರಣಗಳ ಪ್ರದರ್ಶನ ಹಾಗು ಮಾರಾಟ ಮೇಳವನ್ನು ಯುವ ಉದ್ಯಮಿ ಬಾಲಕೃಷ್ಣ ನಾಯಕ್ ಉದ್ಘಾಟಿಸಿ ಶುಭಕೋರಿದರು. 11 ರ ರವಿವಾರದಿಂದ 14 ರ ಬುಧವಾರದ ವರೆಗೆ ಉತ್ತಮ ಗುಣಮಟ್ಟದ ಮತ್ತು ನವೀನ ಶೈಲಿಯ ಬಂಗಾರದ ಆಭರಣಗಳು ಮತ್ತು ಡೈಮಂಡ್‌ ಆಭರಣಗಳ ಪ್ರದರ್ಶನ ಹಾಗು ಮಾರಾಟ ನಡೆಯಲಿದ್ದು ಯಲ್ಲಾಪುರ ತಾಲೂಕಿನ ಸುತ್ತಮುತ್ತಲಿನ ಆಭರಣ ಪ್ರಿಯರು …

Read More »

ಸರ್ಕಾರಿ, ಅರಣ್ಯ ಭೂಮಿಯಲ್ಲಿನ ಆಸ್ತಿಗಳ ತೆರಿಗೆ ವಿಚಾರ: ಇಬ್ಬರೂ ಒಟ್ಟಾಗಿ ಜನತೆಗೆ ನ್ಯಾಯ ಒದಗಿಸುವ ಕೆಲಸ ಮಾಡೋಣ” ಸಂಸದ ಕಾಗೇರಿಗೆ ಶಾಸಕ ಶಿವರಾಮ ಹೆಬ್ಬಾರ್ ಬಹಿರಂಗ ಆಹ್ವಾನ!!

ಪ್ರತಿಧ್ವನಿ ಯಲ್ಲಾಪುರ : ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಆಸ್ತಿಗಳಿಗೆ ತೆರಿಗೆ ನಿರಾಕರಣೆ ಮತ್ತು ಇ-ಸ್ವತ್ತು 2.0 ತಂತ್ರಾಂಶದಿಂದ ಆಸ್ತಿಗಳನ್ನು ಕೈಬಿಡುವ ಕುರಿತು ಕಳೆದ ಆಗಸ್ಟ್ 13ರಂದು ಹೊರಡಿಸಲಾಗಿದ್ದ ಸುತ್ತೋಲೆಗೆ ತಡೆ ನೀಡಿರುವುದನ್ನು ‘ಕೇವಲ ಕಣ್ಣೊರೆಸುವ ತಂತ್ರ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿರುವ ಹೇಳಿಕೆಯನ್ನು ಶಾಸಕ ಶಿವರಾಮ ಹೆಬ್ಬಾರ್ ಅವರು ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶಾಸಕ ಶಿವರಾಮ ಹೆಬ್ಬಾರ್ ಅವರು, “ಮುಖ್ಯಮಂತ್ರಿಗಳು …

Read More »

ಸೂರಿಲ್ಲದ ಬಡವರಿಗೆ ಸಿಗಬೇಕಾದ ಸ್ಲಂ ಬೋಡ್೯ ಮನೆಗಳು ಶ್ರೀಮಂತರ ಪಾಲಾಗಿದೆ ಸಮಗ್ರ ತನಿಖೆಯಾಗಲಿ – ಸಿಡಿದೆದ್ದ ಸೋಮೇಶ್ವರ ನಾಯ್ಕ್

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಬಡವರಿಗಾಗಿ ಸ್ವಂತ ಸೂರು ನೀಡುವ ಸದುದ್ದೇಶದಿಂದ ಸ್ಲಂ ಬೋಡ್೯ ಅಡಿಯಲ್ಲಿ G+2 ಮಾದರಿಯಲ್ಲಿ  ಹೆಬ್ಬಾರ್ ನಗರದಲ್ಲಿ ಮನೆಗಳನ್ನು ನಿರ್ಮಿಸಿದ್ದು ಮೂಲ ಉದ್ದೇಶ ಈಡೆರದೆ ಬಡವರಲ್ಲದ, ಈಗಾಗಲೆ ಸ್ವಂತ ಮನೆ ಹೊಂದಿದ್ದು ಕೆಲವು ಮನೆಗಳನ್ನು ಬಾಡಿಗೆಗೆ ನೀಡಿರುವ ಉಳ್ಳವರಿಗೆ ಮನೆ ನೀಡಿರುವುದು ಅಕ್ಷಮ್ಯ ವಾಗಿದೆ. ಚುನಾವಣಾಧಿಕಾರಿ ರಾಜಿನಾಮೆಗೆ ಆಗ್ರಹಿಸಿ ಪರಮ ಪವಿತ್ರ ಸಂವಿಧಾನ ಹಿಡಿದು ದೆಹಲಿ ರಸ್ತೆಏಲೆ ಮಲಗಿ ನಾಟಕವಾಡುವ ಕಾಂಗ್ರೆಸ್ ಬಡವರಿಗೆ ಅನ್ಯಾಯವಾಗಿದೆ ಎಂದು …

Read More »

ಸರ್ಕಾರಿ, ಅರಣ್ಯ ಭೂಮಿಯ ಆಸ್ತಿಗಳ ತೆರಿಗೆ ಕೈಬಿಡುವ ಸುತ್ತೋಲೆಗೆ ತಾತ್ಕಾಲಿಕ ತಡೆ – ಶಾಸಕ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ ಪ್ರಯತ್ನದ ಫಲ .

ಪ್ರತಿಧ್ವನಿ ಯಲ್ಲಾಪುರ : ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಆಸ್ತಿಗಳಿಗೆ ತೆರಿಗೆ ನಿರ್ಧರಣೆ ಹಾಗೂ ಇ-ಸ್ವತ್ತು 2.0 ತಂತ್ರಾಂಶದಲ್ಲಿ ಆಸ್ತಿಗಳನ್ನು ಕೈಬಿಡುವ ಕುರಿತು ಕಳೆದ ಆಗಸ್ಟ್ 13 ರಂದು ಹೊರಡಿಸಲಾಗಿದ್ದ ಸುತ್ತೋಲೆಗೆ ತಡೆ ನೀಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸ್ಪಷ್ಟಪಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಆಸ್ತಿಗಳ ತೆರಿಗೆ ಸಂಗ್ರಹಣೆಯನ್ನು ಸ್ಥಗಿತಗೊಳಿಸಿದ್ದರಿಂದ ಸಾರ್ವಜನಿಕರಿಗೆ ಎದುರಾಗುತ್ತಿದ್ದ ಸಮಸ್ಯೆಗಳ ಕುರಿತು ಶಾಸಕ ಶಿವರಾಮ …

Read More »

8 ನೆ ವರ್ಷದ ತಾಲೂಕು ಮಟ್ಟದ ರಾಮಾಯಣ – ಮಹಾಭಾರತ ಪರೀಕ್ಷೆ -2026 ಉಚಿತ ಪ್ರವೇಶ – ನಗದು ಬಹುಮಾನ.

ಪ್ರತಿಧ್ವನಿ ಯಲ್ಲಾಪುರ : ಸನಾತನ ಪದ್ದತಿ,ಪರಂಪರೆಗಳು ಹಾಗು ಮೌಲ್ಯಾಧಾರಿತ ಜೀವನ ಕ್ರಮಕ್ಕೆ ಸನ್ಮಾರ್ಗ ತೋರುವ ಹಿಂದೂ ಧರ್ಮದ ಜೀವಾಳ ದೈವ ಗ್ರಂಥಗಳಾದ ರಾಮಾಯಣ ಮತ್ತು ಮಹಾ ಭಾರತ ಕುರಿತು ಭವಿಷ್ಯದ ಪೀಳಿಗೆಗೆ ಜಾಗೃತಗೊಳಿಸುವ ನಿಟ್ಟಿನಲ್ಲಿ ಸತತ ಎಂಟು ವರ್ಷಗಳಿಂದ ಗ್ರಂಥಗಳ ಕುರಿತು ಪರೀಕ್ಷೆ ನಡೆಸಿ ಬಹುಮಾನ ನೀಡುತ್ತಾ ಬರಲಾಗಿದೆ. ಪ್ರಸಕ್ತ ವರ್ಷವು ಸಹ  “ಓಂಕಾರ ಯೋಗಾ ಕೇಂದ್ರ, ವಿಶ್ವ ದರ್ಶನ ಶಿಕ್ಷಣ ಸಮೂಹ ಹಾಗು ಥ್ಯಾಂಕ್ಯೂ ಯೂನಿವಸ್೯ ಅಕಾಡಮಿ” ಯಲ್ಲಾಪುರ …

Read More »

ವೈ.ಟಿ.ಎಸ್.ಎಸ್ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಯಲ್ಲಾಪುರ : ಹಳಿಯಾಳದ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ 14 ವರ್ಷ ವಯೋಮಿತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗಮನೀಯ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಅರ್ಷ ಶೇಖ ಹರ್ಡಲ್ಸ್ನಲ್ಲಿ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ , ನೀರಜಾ ಸಂತೋಷ ನಾಯಕ ಚಕ್ರ ಎಸೆತದಲ್ಲಿ ಪ್ರಥಮ, ಧನುಷ್ ನಾರಾಯಣ ಹೆಗಡೆ ಚೆಸ್‌ನಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ …

Read More »

ಯಲ್ಲಾಪುರದಲ್ಲಿ ಬಿಜೆಪಿ ಸೇವಾ ಜ್ಯೋತಿ ನಿಮಿತ್ತ,ವಿಕಸಿತ ಭಾರತ ಸಂಕಲ್ಪ ಸಭೆ – ಮಹಿಳಾ ಮೋರ್ಚದಿಂದ ಕಮಲದೀಪ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಿಲಕ್ ಚೌಕ್ ನಲ್ಲಿ ಬಿಜೆಪಿ ವತಿಯಿಂದ ಸೇವಾಜ್ಯೋತಿ ಕಾರ್ಯಕ್ರಮದ ನಿಮಿತ್ತ ವಿಕಸಿತ ಭಾರತ ಸಂಕಲ್ಪ ಸಭೆ ಹಾಗು ಮಹಿಳಾ ಮೊರ್ಚ ಅಡಿಯಲ್ಲಿ ಕಮಲದೀಪ ಮತ್ತು ಕಮಲ ನಮನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ದೇಶದ ಪ್ರದಾನಿ ನರೇಂದ್ರ ಮೋದೀಜೀ ಯವರ ಸಾಧನೆಗಳ ಬಗ್ಗೆ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಭಟ್ಟ,ಹಿರಿಯ ನಾಯಕಿ ಶ್ಯಾಮಿಲಿ ಪಾಟಣಕರ, ಮಾತನಾಡಿದರು. ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ …

Read More »

ಜಿಲ್ಲಾ ಮತ್ತು ತಾಲೂಕು ಪಂಚಾಯತ ಚುನಾವಣೆ ಬಳಿಕವೆ ಗ್ರಾಮ ಪಂಚಾಯಿತಿ ಚುನಾವಣೆ! ಸಚಿವ ಸಂಪುಟ ಮಹತ್ವದ ತೀರ್ಮಾನ 2 ತಿಂಗಳಷ್ಟೇ ಬಾಕಿ

ಪ್ರತಿಧ್ವನಿ ಯಲ್ಲಾಪುರ : ಹಲವು ವರ್ಷಗಳಿಂದ ಬಾಕಿಯಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಜನವರಿ ಮೊದಲ ವಾರದಲ್ಲಿ ನಡೆಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಡಿಸೆಂಬರ್‌ನಲ್ಲಿ ಪ್ರಕ್ರಿಯೆ ಆರಂಭವಾಗಲಿದ್ದು, ಇವುಗಳ ನಂತರ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ಸದ್ಯ ಮೀಸಲಾತಿ ಕರಡು ಸಿದ್ಧವಾಗಿದ್ದು, ಚುನಾವಣಾ ಆಯೋಗದ ಅನುಮತಿ ದೊರೆತರೆ ದಿನಾಂಕ ಘೋಷಣೆಯಾಗಲಿದೆ. ಚುನಾವಣಾ ಪ್ರಕ್ರಿಯೆಯನ್ನು ಶೀಘ್ರವಾಗಿ ಚುರುಕುಗೊಳಿಸಲು ಕ್ಯಾಬಿನೆಟ್ ತೀರ್ಮಾನಿಸಿರುವುದಾಗಿ ಮಾಹಿತಿ ದೊರೆತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ …

Read More »

ಹಾಲಿನದರ ಹೆಚ್ಚಳ ರೈತರಿಗೆ ವರವೊ ? – ಗ್ರಾಹಕರಿಗೆ ಶಾಪವೋ ? ಬಡ ಮದ್ಯಮವರ್ಗದ ಹೊಟ್ಟೆ ಇನ್ನೆಷ್ಟು ಹೊಡೆಯುವಿರಿ.

ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಹಾಲಿನ ದರ ಮತ್ತೊಮ್ಮೆ ಏರಿಕೆ ಕಾಣುವ ಸುಳಿವು ದೊರೆಯುತ್ತಿದ್ದು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಡವಾಗುತ್ತಿದೆ. ಹಾಲು ಉತ್ಪಾದಕ ಒಕ್ಕೂಟಗಳು ಪ್ರತಿ ಲೀಟರ್ ಗೆ 10 ರುಪಾಯಿ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದವು, ಬಲ್ಲ ಮೂಲಗಳ ಪ್ರಕಾರ  ಲೀಟರ್ ಗೆ 5 ರಿಂದ 8 ರುಪಾಯಿ ವರೆಗೆ ಹೆಚ್ಚಿಸುವ ಸಾದ್ಯತೆ ಬಗ್ಗೆ ಮಾಹಿತಿ ದೊರೆಯುತ್ತಿದೆ. ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣ ಆಯೋಗಕ್ಕೆ ಪತ್ರ …

Read More »

ಯಲ್ಲಾಪುರದಲ್ಲಿ ಕಾಂಗ್ರೆಸ್ ‘ಸಂಘಟನಾ ಸೃಜನ 2.0’ ಕಾರ್ಯಕ್ರಮದ ಪೂರ್ವಭಾವಿ ಸಭೆ – ಜಿ.ಟಿ.ನಾಯ್ಕ ಅಧ್ಯಕ್ಷತೆ

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಜಿ.ಟಿ. ನಾಯ್ಕ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ ‘ಸಂಘಟನಾ ಸೃಜನ 2.0’ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಮಂಗಳವಾರ ಯಲ್ಲಾಪುರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಟಿ. ನಾಯ್ಕ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿದ ಜಿ.ಟಿ. ನಾಯ್ಕ ಅವರು ಪಕ್ಷದ …

Read More »