Breaking News

ಯಲ್ಲಾಪುರದ ಕಲಾ ಕಳಸಕ್ಕೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆ – ಅರುಣ್ ಬಿಕ್ಕು ಗುಡಿಗಾರಗೆ ಒಲಿದ ಶಿಲ್ಪಶ್ರೀ ಪ್ರಶಸ್ತಿ.


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಹೆಸರಾಂತ ಕರಕುಶಲ ಕಲಾವಿದರಾದ ಬಿಕ್ಕು ಗುಡಿಗಾರ ಕಲಾಕೇಂದ್ರದ ಪ್ರಮುಖ ಅರುಣ್ ಬಿಕ್ಕು ಗುಡಿಗಾರ್ ಅವರಿಗೆ 2024 ನೆ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡಮಿ ನೀಡುವ ಪ್ರತಿಷ್ಠಿತ ಶಿಲ್ಪಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಬೆಂಗಳೂರಿನ ಮಲ್ಲತ್ತಳ್ಳಿ ಕಲಾಗ್ರಾಮದಲ್ಲಿ ನಡೆದ ಕರ್ನಾಟಕ ರಾಜ್ಯ ಶಿಲ್ಪಕಲಾ ಪ್ರದರ್ಶನ ಮತ್ತು ಶಿಲ್ಪಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ವಿವಿಧ ರಾಷ್ಟ್ರಗಳಲ್ಲಿ ಅರುಣ್ ಬಿಕ್ಕು ಗುಡಿಗಾರರ ಕೆತ್ತನೆಯ ಕೈ ಚಳಕ ಅನಾವರವಾಗಿದೆ ವಿಶೇಷವಾಗಿ ಮರದ ಕೆತ್ತನೆಯ ಸುಂದರ ಮೂರ್ತಿಗಳು ದೇಶ ವಿದೇಶಗಳಲ್ಲಿ ಜೀವಕಳೆ ಪಡೆದುಕೊಂಡಿದೆ. ಹಲವು ಪ್ರತಿಷ್ಠಿತ ದೇವಸ್ಥಾನ ಮತ್ತು ಮಠಗಳಿಗೆ ರಥಗಳನ್ನು ತಯಾರು ಮಾಡಿಕೊಟ್ಟಿದ್ದು ಸಂಪೂರ್ಣ ರಾಮಾಯಣ ಮತ್ತು ಸಂಪೂರ್ಣ ಮಹಾಭಾರತ ಕೆತ್ತನೆಯ ಮಹಾಕಾವ್ಯಗಳಾಗಿ ಹೊರ ಬಂದಿದೆ. ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಹ ಇವರ ಸುಂದರ ಕೆತ್ತನೆ ಕಂಡು ಪ್ರಶಂಸಿಸಿದ್ದಾರೆ.

ಒಟ್ಟಿನಲ್ಲಿ ಎಂದಿಗೂ ತಮ್ಮ ಕಲೆಯ ಬಗ್ಗೆ ಅಥವ ಪಡೆದ ಪ್ರಶಸ್ತಿಗಳಿಂದ ಅಹಂಕಾರ ಬರದೆ ಸರಳತೆ ಮೈಗೂಡಿಸಿಕೊಂಡು ತಮ್ಮ ವಿದ್ಯೆಯನ್ನು ತಮ್ಮ ಕಲಾಕೇಂದ್ರ ದಲ್ಲಿನ ಆಸಕ್ತರಿಗೆ ಕಲಿಸಿಕೊಡುತ್ತಿದ್ದಾರೆ. ಇಂತಹ ಮಹನಿಯರಿಗೆ ಪ್ರಶಸ್ತಿ ಲಭಿಸಿದ್ದು ಯಲ್ಲಾಪುರ ತಾಲೂಕಿನ ಜನತೆಗೆ ವಿಶೇಷವಾಗಿ ಯಲ್ಲಾಪುರ ಪಟ್ಟಣದ ಜನತೆಗೆ ಸಂತಸ ವಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *