ಪ್ರತಿಧ್ವನಿ ಯಲ್ಲಾಪುರ : ಪ್ರತಿಯೊಬ್ಬರಿಗೂ ಸುರಕ್ಷಿತ ಹಾಗೂ ಗೌರವಯುತ ವಸತಿ ಸೌಲಭ್ಯ ಒದಗಿಸುವುದು ತಮ್ಮ ಸಂಕಲ್ಪವಾಗಿದ್ದು, ಬಡವರ ಬದುಕಿನಲ್ಲಿ ನೆಮ್ಮದಿ ಮತ್ತು ಭದ್ರತೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಸೋಮವಾರ ಹೆಬ್ಬಾರ್ ನಗರದಲ್ಲಿ ವಸತಿ ರಹಿತ ಬಡ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಮಹತ್ವಾಕಾಂಕ್ಷೆಯ ಉದ್ದೇಶದೊಂದಿಗೆ ಹೆಬ್ಬಾರ್ ನಗರದಲ್ಲಿ ನಿರ್ಮಿಸಲಾಗಿರುವ ಜಿ+2 ಮಾದರಿಯ ಮನೆಗಳ …
Read More »ಯಕ್ಷಲೋಕದ ನಗಿಸುವ ಶ್ರೇಷ್ಠ ಕಲಾವಿದ “ಶ್ರೀಧರ ಭಟ್ಟ ಕಾಸರಗೋಡು “ಅವರಿಗೆ ಶ್ರದ್ಧಾಂಜಲಿ
ಪ್ರತಿಧ್ವನಿ ಯಲ್ಲಾಪುರ : ಯಕ್ಷಗಾನದ ಹಾಸ್ಯಕಲಾವಿದ ಶ್ರೀಧರ ಭಟ್ಟ ಕಾಸರಕೋಡ ಅವರಿಗೆ ಭಾನುವಾರ ಪಟ್ಟಣದ ಮೌನ ಗೃಂಥಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯ ಅರ್ಥಧಾರಿ ಸಿ ಜಿ ಹೆಗಡೆ : ದ್ವಂದ್ವಾರ್ಥ, ಅಶ್ಲೀಲ ಹಾಸ್ಯದ ಮೂಲಕ ಜನರಂಜಿಸುವರೇ ಹೆಚ್ಚಿರುವ ಸಂದರ್ಭದಲ್ಲಿ, ಅಶ್ಲೀಲವಲ್ಲದ ರಾಜ ಹಾಸ್ಯದ ಮೂಲಕ ಜನರನ್ನು ಶಿಷ್ಟವಾಗಿ,ವಿಶಿಷ್ಟವಾಗಿ ನಗಿಸುವುದರಲ್ಲಿ ಕಾಸರಕೋಡ ನಿಸ್ಸೀಮರಾಗಿದ್ದರು. ಅವರ ಆಕಸ್ಮಿಕ ಅಕಾಲಿಕ ಮರಣ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು. ತಾಲೂಕು ಹವ್ಯಕ ಸಂಘದ ಅಧ್ಯಕ್ಷ …
Read More »ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ಸಿಬ್ಬಂದಿಗಳ ಕೊರತೆ – ಪೌರ ಕಾರ್ಮಿಕರ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸಲು ಅಹಿಂದ ವೇದಿಕೆ ಆಗ್ರಹ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣ ಪಂಚಾಯತದಲ್ಲಿ ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕ ಸೇವೆಗಳ ನಿರ್ವಹಣೆಗೆ ತೊಂದರೆಯಾಗುತ್ತಿರುವುದು ಈಗಾಗಲೆ ತಿಳಿದ ಸತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಅವಕಾಶ ಪಟ್ಟಣ ಪಂಚಾಯತ್ ಗೆ ಸಿಕ್ಕರೆ ಈ ವೇಳೆ ಹಲವು ವರ್ಷಗಳಿಂದ ತಮ್ಮ ಇಲಾಖೆ ಅಡಿಯಲ್ಲೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಮಕ್ಕಳಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಮತ್ತು ಅಖಿಲ ಕರ್ನಾಟಕ ಅಹಿಂದ ವೇದಿಕೆ …
Read More »ಪರಿಸರಕ್ಕು ಪೂರಕ ಮನಸ್ಸಿಗು ನೆಮ್ಮದಿ ಹೂ ಮತ್ತು ಹಣ್ಣಿನಗಿಡಗಳ ಪೋಷಣೆ – ಹಿಮವತಿ ಭಟ್ಟ..
ಪ್ರತಿಧ್ವನಿ ಯಲ್ಲಾಪುರ : ಪ್ರತಿಯೊಬ್ಬರ ಮನೆಗಳಲ್ಲಿ ಹೂವು, ಹಣ್ಣಿನ ಗಿಡಗಳನ್ನು ಬೆಳೆಸುವ ಅಭ್ಯಾಸ ಶ್ರೇಷ್ಠವಾದದ್ದು. ಅದನ್ನು ಪ್ರತಿಯೊಬ್ಬ ಮಹಿಳೆಯರೂ ರೂಢಿಸಿಕೊಳ್ಳಬೇಕು. ಪರಿಸರಕ್ಕೂ ಪೂರಕವಾಗಿರುವುದಲ್ಲದೇ ಮಾನಸಿಕ ನೆಮ್ಮದಿಯ ಜೊತೆ ಆರ್ಥಿಕವಾಗಿ ಮಹಿಳೆಯರಿಗೆ ಸಬಲತೆಯನ್ನು ಉಂಟುಮಾಡುತ್ತದೆ ಎಂದು ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಹೇಳಿದರು. ಅವರು, ಶನಿವಾರ ಪಟ್ಟಣದ ಎ.ಪಿ.ಎಂ.ಸಿ.ಯ ಶ್ರೀಮಾತಾ ಟ್ರೇಡಿಂಗ್ ಕಂಪೆನಿ ಆವಾರದಲ್ಲಿ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಸಸ್ಯ ಸಂಭ್ರಮ …
Read More »ಕೊಟ್ಟ ಮಾತಿನಂತೆ ನಡೆದು ಡೊಮಗೇರಿ ಮಕ್ಕಳಿಗೆ ಅಂಗನವಾಡಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ : ಕಳೆದ ವರ್ಷ ಡೋಮಗೇರಿ ಗೌಳಿವಾಡ ಕ್ರಾಸ್ ಬಳಿ ದುರ್ಘಟನೆಯೊಂದು ಸಂಭವಿಸಿತ್ತು. ಡೋಮಗೇರಿ ಅಂಗನವಾಡಿಯಿಂದ ಮಕ್ಕಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಮಹಿಳೆ ಹಾಗೂ ಮಕ್ಕಳ ಮೇಲೆ ಮರ ಬಿದ್ದು, ಮಹಿಳೆ ಮತ್ತು ಮಕ್ಕಳು ಮೃತಪಟ್ಟ ಅಹಿತಕರ ಘಟನೆ ನಡೆದಿತ್ತು. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಶಿವರಾಮ ಹೆಬ್ಬಾರ್ ಅವರು, ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, “ಡೋಮಗೇರಿ ಗೌಳಿವಾಡದಲ್ಲೇ ನೂತನ ಅಂಗನವಾಡಿ …
Read More »ಪಶ್ಚಿಮಘಟ್ಟದ ಬದುಕು ಕತ್ತಿಯ ಅಲುಗಿನ ಮೇಲಿನ ನಡಿಗೆ -ಎಚ್ಚರ.. ಜನರೇ ಎಚ್ಚರ..!
ಪರಿಸರ ಸೂಕ್ಷ್ಮ ವಲಯಕ್ಕೆ ಹೊಸ ಕರಡು ಅಧಿಸೂಚನೆ 60 ದಿನಗಳ ಒಳಗಾಗಿ ಆಕ್ಷೇಪಣೆ ಮತ್ತು ಸಲಹೆಗೆ ಅಹ್ವಾನ ಜಿಲ್ಲೆ ಹಾಗೂ ತಾಲ್ಲೂಕುವಾರುಗಳಾಗಿ ಸ್ಥಳ ಹೆಸರು ಪ್ರಕಟ ಕೇಬಲ್ ನಾಗೇಶ್, ಯಲ್ಲಾಪುರ🖊🖋 ಪ್ರತಿಧ್ವನಿ ಯಲ್ಲಾಪುರ : ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವ ವಿಚಾರದ ಕುರಿತು ಹೊಸ ಕರಡು ಅಧಿಸೂಚನೆಯೊಂದನ್ನು ಪ್ರಕಟಿಸಿದೆ.ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ವ್ಯಾಪಕ ಪ್ರದೇಶವನ್ನು ಪರಿಸರ …
Read More »ಯಲ್ಲಾಪುರ ತಾಲೂಕು “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್,ಕಾರ್ಯದರ್ಶಿಯಾಗಿ ಗಣೇಶ್ ಪತ್ತಾರ್ ಆಯ್ಕೆ
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ ಮಹತ್ವದ ಹೆಜ್ಜೆಯಾಗಿದೆ. ಇಂತಹ ಸಂಘಟನೆ ವೃತ್ತಿಪರರ ಹಕ್ಕುಗಳ ರಕ್ಷಣೆ, ಕೌಶಲ್ಯಾಭಿವೃದ್ಧಿ, ಪರಸ್ಪರ ಸಹಕಾರ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ನೆರವಾಗಲಿದೆ. ನೂತನ ಅಧ್ಯಕ್ಷರಾಗಿ ಹಿರಿಯ ಛಾಯಾಗ್ರಾಹಕ ಗುರುಮೂರ್ತಿ ಗಾಂವ್ಕರ್ ಆಯ್ಕೆಯಾಗಿದ್ದು ಕ್ರಿಯಾಶೀಲ ಛಾಯಾಗ್ರಾಹಕ ಗಣೇಶ್ ಪತ್ತಾರ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಉಳಿದಂತೆ ಖಜಾಂಚಿಯಾಗಿ ಚಂದ್ರಶೇಖರ ಭಟ್ಟ,ಉಪಾಧ್ಯಕ್ಷರಾಗಿ ವಿನಾಯಕ ಗುಮ್ಮಾನಿ ಸಂಘಟನಾ ಕಾರ್ಯದರ್ಶಿ …
Read More »ಯಲ್ಲಾಪುರ ಪ್ರಥದರ್ಜೆ ಕಾಲೇಜಿನಲ್ಲಿ SIR ಕುರಿತ ಜಾಗೃತಿ ಕಾರ್ಯಕ್ರಮ.
ಪ್ರತಿಧ್ವನಿ ಯಲ್ಲಾಪುರ : ಮತದಾರರ ಪಟ್ಟಿಯ ಶುದ್ಧತೆ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಎಸ್.ಐ.ಆರ್ ಪ್ರಕ್ರಿಯೆ ಅತ್ಯಂತ ಮಹತ್ವಪೂರ್ಣ ಆಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಬೇಕೆಂದು ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ,ಆರ್.ಡಿ.ಜನಾರ್ಧನ್ ಹೇಳಿದರು. ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲ್ಲಾಪುರದ ಚುನಾವಣಾ ಸಾಕ್ಷರತಾ ಕ್ಲಬ್ (Electoral Literacy Club) ವತಿಯಿಂದ ಹಮ್ಮಿಕೊಂಡ ವಿಶೇಷ ಸಮಗ್ರ …
Read More »ಯಲ್ಲಾಪುರ ತಾಲೂಕಿನ ಕಿರವತ್ತಿ ಸರ್ಕಾರಿ ಟಿಂಬರ್ ಡಿಪೋದಲ್ಲಿ ಟಿಂಬರ್ ಹರಾಜು.
ಪ್ರತಿಧ್ವನಿ ಯಲ್ಲಾಪುರ : ಗುಣಮಟ್ಟದ ಟಿಂಬರ್ ಗೆ ರಾಜ್ಯದಲ್ಲೆ ಪ್ರಖ್ಯಾತಿ ಪಡೆದ ತಾಲ್ಲೂಕಿನ ಕಿರವತ್ತಿ ಟಿಂಬರ್ ಡಿಪೋ ದಲ್ಲಿ ಪ್ರಸಕ್ತ ಸಾಲಿನ ಟಿಂಬರ್ ಹರಾಜು ಪ್ರಕ್ರಿಯೆಯನ್ನು ಆಗಸ್ಟ್ 1, 3 ಹಾಗೂ 4 ರಂದು ನಡೆಯಲಿದೆ ಎಂದು ಪತ್ರಿಕೆ ಪ್ರಕಟಣೆ ಮೂಲಕ ತಿಳಿದು ಬಂದಿದೆ. ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ MSTC ಇ-ಹರಾಜು ವ್ಯವಸ್ಥೆಯ ಮೂಲಕ ಭಾಗವಹಿಸಿ ಗುಣಮಟ್ಟದ ಟಿಂಬರ್ ಖರೀದಿಸಬಹುದಾಗಿದೆ. ಸಾಗಾ (Teak) ,ಸೀಸಂ,ಕಿಂದಳ ಕಲಂ , ಹೆದ್ದಿ …
Read More »ಯಲ್ಲಾಪುರದಲ್ಲಿ ನಡೆದ ” ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ “
ಪ್ರತಿಧ್ವನಿ ಯಲ್ಲಾಪುರ : ಮನುಷ್ಯರನ್ನು ಮಾರಾಟ ಮಾಡುವುದು,ಖರೀದಿಸುವುದು,ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಅನಧಿಕೃತವಾಗಿ ಕದ್ದೊಯ್ಯುವುದು ಇವೆಲ್ಲವು ಸಹ ಮಹಾಪರಾಧವಾಗಿದೆ.ನಮ್ಮ ದೇಶದ ಕಾನೂನಿನಲ್ಲಿ ಮಾನವ ಕಳ್ಳಸಾಗಣಿಕೆ ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕುಮಾರ್ ಎಸ್ ಹೇಳಿದರು. ಅವರು ಪಟ್ಟಣದ ವೈಟಿಎಸ್ಎಸ್ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯಲ್ಲಾಪುರ …
Read More »
Prathidvani Yellapura