Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಮಹಿಳಾ ಮೀಸಲು ತ್ವರಿತವಾಗಿ ಜಾರಿಗೆ ತರಲು ಲೋಕಸಭೆಯ ಒಟ್ಟು ಸ್ಥಾನಗಳ ಹೆಚ್ಚಿಸುವಿಕೆ – ಕೇಂದ್ರ ಸರ್ಕಾರದ ಚಿಂತನೆ..

ಕೃಪೆ : ಡೈಲಿ ಹಂಟ್ ಓದಿರಿ ತಿಳಿದುಕೊಳ್ಳಿ ಪ್ರತಿಧ್ವನಿ ಯಲ್ಲಾಪುರ : ಮಹಿಳಾ ಮೀಸಲಾತಿ ಕಾಯ್ದೆಯನ್ನು (33 ಪ್ರತಿಶತ) ತ್ವರಿತವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸುತ್ತಿದೆ. 2011ರ ಜನಗಣತಿಯ ಆಧಾರದ ಮೇಲೆ, ಪ್ರಸ್ತುತ ಇರುವ 543 ಸ್ಥಾನಗಳನ್ನು ಸುಮಾರು 816ಕ್ಕೆ ಏರಿಸುವ ಸಾಧ್ಯತೆಯಿದೆ.ಈ ಪೈಕಿ ಸುಮಾರು 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಪ್ರಮಾಣಾನುಗುಣ ಏರಿಕೆ: ಏನಿದರ ಅರ್ಥ? ಸರ್ಕಾರವು ಸದ್ಯಕ್ಕೆ ರಾಜ್ಯಗಳ …

Read More »

ಹೆಬ್ಬಾರ್ ದೂರದೃಷ್ಟಿ ಪ್ರತಿ ಸರ್ಕಾರಿ ಕಟ್ಟಡಗಳಿಗು ರೂಪ್ ಟಾಪ್ ಕಡ್ಡಾಯ – ಹೆಬ್ಬಾರ್ ಕಾಲೋನಿ ಮನೆಗಳಿಗು ರೂಪ್ ಟಾಪ್ ಅಳವಡಿಕೆ ಕಾರ್ಯ.

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಹೆಬ್ಬಾರ್ ನಿರ್ದೇಶನದಂತೆ ಪ್ರತಿಯೊಂದು ಸರ್ಕಾರಿ ಕಚೇರಿ ಕಟ್ಟಡಗಳು G+2 ಮನೆಗಳ ಮೇಲು ಕಡ್ಡಾಯವಾಗಿ ಮೆಟಲ್ ರೂಪ್ ಟಾಪ್ ಅಳವಡಿಸಲೆ ಬೇಕೆಂದು ನಿರ್ದೇಶನ ನೀಡಿದಾಗಿನಿಂದ ಯಲ್ಲಾಪುರ ತಾಲೂಕಿನಾದ್ಯಂತ  ಯಾವುದೆ ಇಲಾಖೆಗಳ ಕಟ್ಟಡಗಳು ಅಥವ ಹೆಬ್ಬಾರ್ ಕಾಲೋನಿಯಲ್ಲಿ ನಿರ್ಮಾಣವಾಗಿರುವ ವಸತಿ ಸಮುಚ್ಚಯಗಳ ಮೇಲೆ ಸದೃಡವಾದ ರೂಪ್ ಟಾಪ್ ಅಳವಡಿಸಲಾಗುತ್ತಿದೆ. ಯಲ್ಲಾಪುರ ವಿಶೇಷವಾಗಿ ಮಲೆನಾಡು ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆ ಸುರಿಯುವ ಹಿನ್ನೆಲೆಯಲ್ಲಿ …

Read More »

ಮನೆಮನೆಗೆ ಗಂಗೆ ಯೋಜನೆ ನೀರಿಲ್ಲದ ಮೇಲೆ ಇದ್ದರೇನು ಪ್ರಯೋಜನ? – ಸಮಸ್ಯೆ ಹೇಳಿ ವರ್ಷ ಕಳೆದರು ನಿಷ್ಪ್ರಯೋಜನ.!

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮದನೂರು ಪಂಚಾಯತ್ ಮತ್ತು ಕಿರವತ್ತಿ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆಗೆ ಗಂಗೆ ಜಲಜೀವನ್ ಮಿಷನ್ ಯೋಜನೆ ನಿಷ್ಪ್ರಯೋಜನವಾಗಿದೆ. ಅಲ್ಕೇರಿ ಗೌಳಿವಾಡ ಎಂಬಲ್ಲಿ  ಮನೆಮನೆಗೆ ಗಂಗೆ‌ ಎಂಬ ಕಲ್ಪನೆಯಲ್ಲಿ ನಿರ್ಮಿಸಿದ ಬೃಹತ್ ನೀರಿನ ಟ್ಯಾಂಕ್ ಕಟ್ಟಿದಂದಿನಿಂದ ಇಂದಿಗು ನೀರನ್ನೆ ಕಾಣದೆ ಖಾಲಿಖಾಲಿ ನಿಂತಿದೆ.ಅಂದಿ‌ನ ಕಾಲಕ್ಕೆ ಈ ಗ್ರಾಮ 82 ಮನೆಗಳಿಗೆ ನಳ ಕಲ್ಪಿಸುವ ಉದ್ದೇಶ ಹೊಂದಿತ್ತು ಇಂದಿಗು ನೀರು ಕೊಡದೆ ಅಪ್ರಯೋಜನವಾಗಿದೆ. ಸುಮಾರು 30 ಲಕ್ಷದಲ್ಲಿ ಟ್ಯಾಂಕ್ …

Read More »

ತಾತ್ಕಾಲಿಕ ಸಭಾಪತಿಯಾಗಿ ಶಾಂತಾರಾಮ ಸಿದ್ದಿ ಕಾರ್ಯನಿರ್ವಹಣೆ

ಪ್ರತಿಧ್ವನಿ ಯಲ್ಲಾಪುರ : ರಾಜ್ಯದ ವಿಧಾನಪರಿಷತ್ ಅತ್ಯುನ್ನತ ಸ್ಥಾನವಾದ ಸಭಾಪತಿ ಸ್ಥಾನ ಅಲಂಕರಿಸಿ ಕೆಲಕಾಲ ಸದನ ನಡೆಸುವ ಮೂಲಕ ಬುಡಕಟ್ಟು ಸಿದ್ದಿ ಸಮುದಾಯದ ಶಾಂತಾರಾಮ್ ಸಿದ್ದಿ ರಾಜ್ಯದ ವಿಧಾನಪರಿಷತ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ  ಹಿತ್ಲಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಗ್ರಾಮ ಪುರ್ಲೆಮನೆ ನಿವಾಸಿಯಾದ. ಅತ್ಯಂತ ಸರಳ ಮತ್ತು ಬುಡಕಟ್ಟು ಸಿದ್ದಿ ಸಮುದಾಯದ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಂಡು ವನವಾಸಿ ವಿಭಾಗದಲ್ಲಿ ಮತ್ತು …

Read More »

ಏಳನೆ ತರಗತಿ ಮಕ್ಕಳ ಬೀಳ್ಕೊಡುಗೆ- ದಾನಿಗಳಿಗೆ ಅಭಿನಂದನೆ – ವನಶ್ರೀ ಪತ್ರಿಕೆ ಬಿಡುಗಡೆ.

ಪ್ರತಿಧ್ವನಿ ಯಲ್ಲಾಪುರ : ಶಾಲೆಯ ಸೌಂದರ್ಯ ಮೂಲಭೂತ ಸೌಕರ್ಯವೂ ಮಕ್ಕಳಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ್ ಹೇಳಿದರು. ಅವರು ಹುತ್ಕಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯ ಮಕ್ಕಳ ಬಿಳ್ಕೊಡುಗೆ ಹಾಗೂ ದಾನಿಗಳಿಗೆ ಅಭಿನಂದನಾ ಸಮಾರಂಭ ಉಧ್ಘಾಟಿಸಿ ಇಕೋ ಕ್ಲಬ್ ಹೊರತಂದ ವನಶ್ರೀ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು . ಶಿಕ್ಷಕರು,ಪಾಲಕರು ಪೋಷಕರು ಮಾಜಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಸಹಭಾಗಿತ್ವ ಬೇಕು.ಈ ಮೂಲಕ ಇಲ್ಲಿಯ ಎಸ್ …

Read More »

ವಿಶ್ವದರ್ಶನ ಆಯೋಜನೆಯ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಶಿರಸಿ ಪ್ರಥಮ.🏏

ಪ್ರತಿಧ್ವನಿ ಯಲ್ಲಾಪುರ :ಇತ್ತೀಚೆಗೆ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಬಿಸಿಎ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಮಂಗಳವಾರ ಮುಕ್ತಾಯ ಕಂಡಿದೆ. ಸರ್ಕಾರಿ ಪದವಿಪೂರ್ವ ಕಾಲೇಜು ಶಿರಸಿ ತಂಡ ಪ್ರಥಮ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯ ತಂಡ ದ್ವಿತೀಯ ಪಂದ್ಯಾವಲಿಯಲ್ಲಿ ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ 24 ಸಾವಿರ ನಗದು ಹಾಗು ವಿಶೇಷ ಪಾರಿತೋಷಕ ಬಹುಮಾನ ಪಡೆದರೆ ವಿಶ್ವದರ್ಶನ ಶಿಕ್ಷಣ …

Read More »

ಜಿಟಿಜಿಟಿ ಮಳೆಗೆ ರೋಡಿಗೆ ಬಂದ ಜೋಡುಕೆರೆ ಮೊಸಳೆ- ಸ್ವಚ್ಚಂದ ಸಂಚಾರ – ಪಾದಚಾರಿಗಳಿಗೆ ಸಂಚಕಾರ.

ಪ್ರತಿಧ್ವನಿ ಯಲ್ಲಾಪುರ: ಪಟ್ಟಣದಲ್ಲಿ ಸೋಮವಾರ ಸಂಜೆ ಕೆಲ ಸಮಯ ಸಣ್ಣದಾಗಿ ಸುರಿದ ಮಳೆಗೆ ಜೋಡುಕೆರೆಯಲ್ಲಿ ಅಡಗಿರುವ ಮೊಸಳೆ ರಸ್ತೆ ಮೇಲೆ ಸಂಚರಿಸಿದೆ.ಜಿಟಿಜಿಟಿ ಮಳೆಯ ನಡುವೆ ರಸ್ತೆ ಮೇಲೆ ಓಡಾಟ ನಡೆಸಿರುವುದು ಸ್ಥಳಿಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ.ದಿನದಿಂದ ದಿನಕ್ಕೆ ಮೊಸಳೆ ಸುದ್ದಿಯಾಗುತ್ತಿದ್ದು ಅರಣ್ಯ ಇಲಾಖೆ ಗಂಭೀರವಾಗಿ ಗಮನ ಹರಿಸಿ ಮೊಸಳೆ ಹಿಡಿಯುವ ಕಾರ್ಯವಾಗಬೇಕಿದೆ ಇಲ್ಲವಾದಲ್ಲಿ ಎರಡು ಕೆರೆಗಳಿಗು ಭದ್ರವಾದ ಫೆನ್ಸಿಂಗ್ ಅಳವಡಿಸಬೇಕಿದೆ. ಆಗೊಮ್ಮೆ ಈಗೊಮ್ಮೆ ಮೊಸಳೆ ಸಾರ್ವಜನಿಕರಿಗೆ ಕಾಣಿಸುತ್ತಿದ್ದು ಈ ರಸ್ತೆಯಲ್ಲಿ …

Read More »

ಕ್ಷೇತ್ರದ ವಿದ್ಯುತ್ ಸಂಕಷ್ಟಕ್ಕೆ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಹೆಬ್ಬಾರ್- ಸಕರಾತ್ಮಕವಾಗಿ ಸ್ಪಂದಿಸಿದ ಇಂಧನ ಸಚಿವರು.

ಪ್ರತಿಧ್ವನಿ ಯಲ್ಲಾಪುರ (ಬೆಂಗಳೂರು, ಮಾರ್ಚ್ 23) :  ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಶಾಸಕ  ಶಿವರಾಮ ಹೆಬ್ಬಾರ್ ಅವರು ಸೋಮವಾರ ವಿಧಾನಸಭೆಯ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯಾಗಿ ಮುಂಡಗೋಡ ತಾಲೂಕಿನ ಮಳಗಿ, ಪಾಳಾ ಹಾಗೂ ಬನವಾಸಿ ಹೋಬಳಿ ವ್ಯಾಪ್ತಿಯ ಬದನಗೋಡ ಭಾಗದಲ್ಲಿ ಉಂಟಾಗುತ್ತಿರುವ ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಸದನದ ಗಮನ ಸೆಳೆದರು. ಸದನದಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಬ್ಯಾಡಗಿ ಹಾಗೂ ಸವಣೂರಿನಲ್ಲಿ ರೈಲ್ವೆ ಟ್ರ್ಯಾಕ್ಷನ್ …

Read More »

ಹೆದ್ದಾರಿ ಪಕ್ಕದಲ್ಲಿ ನಿಂತ  ವಾಹನಗಳೇ ಅಪಾಯ-ಎಚ್ಚರ..ಎಚ್ಚರ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ರಾತ್ರಿ ವೇಳೆಯಲ್ಲಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದು ಅದಕ್ಕೆ ಪ್ರಮುಖ ಕಾರಣ ರಸ್ತೆ ಪಕ್ಕದಲ್ಲೆ ನಿಲ್ಲಸುವ ಬೃಹತ್ ಗಾತ್ರದ ವಾಹನಗಳಾಗಿವೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬೃಹತ್ ಗಾತ್ರದ ವಾಹನಗಳು ನಿಲ್ಲಿಸುವುದರಿಂದ ಸಂಚರಿಸುವ ವಾಹನಗಳಿಗೆ ಅಪಾಯ ತಪ್ಪಿದ್ದಲ್ಲ. ಗಾಡಿಗಳ ಲೈಟ್ ಎಷ್ಟೆ ಪ್ರಖರವಾದ ಬೆಳಕು ಹೊಂದಿದ್ದರು ಎದುರಿನಿಂದ ಬರುವ ವಾಹನದ ಬೆಳಕು ಕಣ್ಣಿಗೆ ಬೀಳುತ್ತಲೆ ಎದುರಿನ ದೃಶ್ಯ ಮಂದವಾಗಿ ರಸ್ತೆ ಪಕ್ಕದಲ್ಲೆ …

Read More »

ಸಂಸ್ಕೃತಿಯ ಉಳಿವು ನಮ್ಮೆಲ್ಲರ ಹೊಣೆ: ಯಲ್ಲಾಪುರದಲ್ಲಿ ಬಂಜಾರ ಸಾಧಕರಿಗೆ “ಗೌರವ ಸಮರ್ಪಣೆ”

ಪ್ರತಿಧ್ವನಿ ಯಲ್ಲಾಪುರ: “ನಾಗರಿಕತೆಯ ಓಟದಲ್ಲಿ ನಮ್ಮ ಮೂಲ ಸಂಸ್ಕೃತಿ, ಭಾಷೆ ಮತ್ತು ಉಡುಗೆ-ತೊಡುಗೆಗಳನ್ನು ಮರೆಯಬಾರದು. ಸಮಾಜ ನಮಗೇನು ನೀಡಿದೆ ಎನ್ನುವುದಕ್ಕಿಂತ, ಸಮಾಜದ ಋಣ ತೀರಿಸಲು ನಮ್ಮ ಕೊಡುಗೆ ಏನು ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು,” ಎಂದು ಶಿರಸಿ ಎ.ಸಿ.ಎಫ್  ಅಮೀತ ಚವ್ಹಾಣ ಅವರು ಕರೆ ನೀಡಿದರು.ಇಲ್ಲಿನ ನಿಸರ್ಗ ಮನೆಯಲ್ಲಿ ‘ಬಂಜಾರ ಸೇವಾ ಪ್ರತಿಷ್ಠಾನ (ರಿ) ಯಲ್ಲಾಪುರ’ ಇತ್ತೀಚೆಗೆ ಆಯೋಜಿಸಿದ್ದ ಬಂಜಾರ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಹಮ್ಮಿಕೊಂಡಿದ್ದ “ಗೌರವ ಸಮರ್ಪಣಾ” …

Read More »