Breaking News

ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನೆ ದಿವಾಳಿಯಾಗಿಸಿದೆ – ಪ್ರಸಾದ್ ಹೆಗಡೆ.

ಪ್ರತಿಧ್ವನಿ ಯಲ್ಲಾಪುರ :  ಗ್ಯಾರಂಟಿ ಹೆಸರನಲ್ಲಿ ಅಧಿಕಾರಕ್ಕೆ ಬಂದ‌ ಕಾಂಗ್ರೆಸ್ ‌ಸರಕಾರ ಯಲ್ಲಾಪುರ ‌ದಲ್ಲಿ ಕನ್ನಡ ಶಾಲೆಯಲ್ಲಿ ಬಿಸಿಊಟಕ್ಕೆ ಆಹಾರಧಾನ್ಯದ ಕೊರತೆಯಾಗಿದ್ದು ಶಾಲಾ ಮಕ್ಕಳ,ಶಿಕ್ಷಕರ ಪರಿಸ್ಥಿತಿ ನೋಡಿ ಅತ್ಯಂತ ದುಃಖವೆನೆಸಿದೆ.

ಈ‌ ಆಡಳಿತ ವ್ಯವಸ್ಥೆ ಜನಪರವೇ?

ಈ ಆಡಳಿತ ವ್ಯವಸ್ಥೆ ಮಾನವೀಯತೆ ಯಿಂದ ಕೂಡಿದೆಯೇ?

ಸರಕಾರದ ಅವ್ಯವಸ್ಥೆ ಗೆ ಇದೊಂದು ಕೈಗನ್ನಡಿ.

ಈ ಆಡಳಿತ ವ್ಯವಸ್ಥೆ ಗೆ ಏನನ್ನು ಹೇಳಬೇಕು

ಶಾಲಾಮಕ್ಕಳಿಗೆ ಯಲ್ಲಾಪುರ ದಲ್ಲಿ ಅಕ್ಕಿಯ ಆಹಾರ ಧಾನ್ಯ ದ ಕೊರತೆಗೆ ಕಾರಣವೇನು ಎಂಬುದನ್ನು ತಕ್ಷಣ ಸಂಬಂಧಿಸಿದ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು.

ಒಂದು ವೇಳೆ ಯಲ್ಲಾಪುರ ತಾಲ್ಲೂಕಿನಲ್ಲಿ ಶಾಲೆಯಲ್ಲಿ ಅಕ್ಕಿಯ ಸರಬರಾಜನಲ್ಲಿ ಟೆಂಡರ್ ವ್ಯವಸ್ಥೆ ಸಮಸ್ಯೆ ಆದರೆ ತಕ್ಷಣ ಅದರ ಬಗ್ಗೆ ಅವಲೋಕನ‌ಮಾಡಿ

ಇನ್ನೂ ಒಂದು ವಾರದಲ್ಲಿ ಈ ಸಮಸ್ಯೆ ಬಗೆಹರಿಸಿ ,ಕೆಲ ಶಾಲೆ ಯಲ್ಲಿ ಆಹಾರ ಧಾನ್ಯ ದ ಕೊರತೆ ಮುಂದುವರಿದರೇ ಬಿಜೆಪಿ ನಿಯೋಗ ಆ ಶಾಲೆಗಳಿಗೆ ಬೇಟಿ ನೀಡಿ ಸಂಭಂದಿಸಿದ ಅಧಿಕಾರಿಗಳನ್ನು ಆ ಶಾಲೆಗೆ ಕರೆಸುತ್ತೇವೆ.ಇಲ್ಲ ಸಮಸ್ಯೆ ಇದ್ದರೇ ತಿಳಿಸಿ,ಮಕ್ಕಳಿಗಾಗಿ ಅಕ್ಕಿ ಯನ್ನು ಪ್ರತಿಮನೆಯಿಂದ ಸಂಗ್ರಹಿಸಿ ಶಾಲೆಗೆ ನೀಡುತ್ತೇವೆ.

ತಕ್ಷಣ ಎಚ್ಚೆತ್ತುಕೊಂಡು ಟೆಂಡರ್ ಪ್ರಕ್ರಿಯೆ ಸರಿಪಡಿಸಿ ಶಾಲಾ ಮಕ್ಕಳಿಗೆ ಯಾವುದೇ ಸಮಸ್ಯೆ ಉದ್ಬವಿಸದೇ ಇರುವ ಹಾಗೆ ಕ್ರಮಕೈಗೊಳ್ಳಬೇಕಾಗಿ ಬಿಜೆಪಿ ಯಲ್ಲಾಪುರ ಮಂಡಳ ಆಗ್ರಹಿಸುತ್ತದೆ.

ಮೊಟ್ಟೆಯ ದರ ವನ್ನು ಶಿಕ್ಷಕರಿಗೆ ಸರಿಯಾಗಿ ಪಾವತಿಸಿ – ಶಾಲಾ ಶಿಕ್ಷಕರು ಕೋಳಿ ಮೊಟ್ಟೆಗೆ ಮಾರುಕಟ್ಟೆಯಲ್ಲಿ  6 ರಿಂದ 7 ರುಪಾಯಿ ನೀಡಿ ಖರೀದಿಸುತ್ತಿದ್ದು  ಸರಕಾರದಿಂದ ಕೇವಲ 4 ರುಪಾಯಿ  ನೀಡುತ್ತಿದ್ದಾರೆ. ಈ ವಿಚಾರವನ್ನು ಕೆಲ ಶಿಕ್ಷಕರು ನೊಂದುಕೊಂಡು ಮಾತನಾಡುವುದನ್ನು ಕೇಳಿದ್ದೇವೆ. ಇಂತಹ ಅವ್ಯವಸ್ಥೆ ಸರಿಪಡಿಸಿ ಎಂದು ಯಲ್ಲಾಪುರ ಬಿಜೆಪಿ ಮಂಡಳ ಆಗ್ರಹಿಸುತ್ತದೆ ಎಂದು ಮಂಡಳಾಧ್ಯಕ್ಷ ಪ್ರಸಾದ್ ಹೆಗಡೆ ಆಗ್ರಹಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬೋರ್ ಕೊರೆಸಿ ಕರಡೊಳ್ಳಿ ಗ್ರಾಮಸ್ತರ ದಾಹ ನೀಗಿಸಿದ ಬಾಲಕೃಷ್ಣ ನಾಯಕ್.ಬರೋಬ್ಬರಿ 3.5 ಇಂಚು ನೀರು.

ಪ್ರತಿಧ್ವನಿ ಯಲ್ಲಾಪುರ : ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿರುವ ಸಾಮಾಜಿಕ …

Leave a Reply

Your email address will not be published. Required fields are marked *