Breaking News

ಹುಟಕಮನೆ ಗುಡ್ಡ ನೆಲಸಮ ಪ್ರಕರಣ ನ್ಯಾಯಾಲಯಲ್ಲಿರುವಂತೆಯೆ ಮಾರಾಟಕ್ಕೆ ತೆರೆಮರೆಯ ಯತ್ನ.!!


ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಸದ್ದುಮಾಡಿ ಬೆಂಗಳೂರಿನ ಭೂ ವ್ಯಾಜ್ಯಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ ಹುಟಕಮನೆ ಗುಡ್ಡ ನೆಲಸಮ ಅರಣ್ಯನಾಶ ಪ್ರಕರಣಕ್ಕೆ ಸಂಬಂಧಿಸಿದ ಭೂಮಿ ಸಮತಟ್ಟಾಗಿಸಿ ನ್ಯಾಯಾಲಯಕ್ಕು ಗೊತ್ತಾಗದಂತೆ ತೆರೆಮರೆಯಲ್ಲೆ ಮಾರಾಟಕ್ಕೆ ವೇದಿಕೆ ಸಿದ್ದಗೊಂಡು ಭೂಮಿ ಮಾರಾಟಕ್ಕಿದೆ ಎಂಬ ಜಾಹಿರಾತು ಸಾಮಾಜಿಕ ಜಾಲತಾಣದಲ್ಲಿ ಖುಲ್ಲಂಖುಲ್ಲಾ ಹರಿದಾಡುತ್ತಿದೆ.


ಯಲ್ಲಾಪುರ ತಾಲೂಕು ಕೇಂದ್ರದಿಂದ ಸರಿ ಸುಮಾರು 7 ಕಿಲೋಮೀಟರ್ ಅಂತರದಲ್ಲಿರುವ ಹುಟಕಮನೆ ಗ್ರಾಮದಲ್ಲ್ಲಿ ನೈಸರ್ಗಿಕವಾಗಿ ಬೆಳೆದುನಿಂತ ಬೃಹತ್ ಬೆಟ್ಟ ನೆಲಸಮಮಾಡಿ ಸಹಸ್ರಾರು ಲೋಡ್ ಮಣ್ಣನ್ನು ಬೇರೆಡೆಗೆ ಸಾಗಿಸಿ ಅಲ್ಲಿ ಬೆಳೆದುನಿಂತ ಬೆಲೆಬಾಳುವ ಮರಗಳನ್ನು ಕಟಾವು ಮಾಡಿ ಅದೇ ಮಣ್ಣಿನಡಿ ಹಾಕಿ  ಸಮತಟ್ಟು ಮಾಡಿದ್ದು ಸರ್ಕಾರದ ಸ್ವತ್ತು,ಅರಣ್ಯ ನಾಶ ಪ್ರಕರಣವನ್ನು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಗಡೆ ಗಟ್ಟಿಯಾದ ಧ್ವನಿಯಲ್ಲಿ ಪ್ರಶ್ನಿಸಿದ್ದರು.


ನಂತರದ ದಿನಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೆ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆಕಾರ್ಯ ನಡೆಸಿ ಅರಣ್ಯ ಭೂಮಿ ಎಷ್ಟಿದೆ,ಮಾಲ್ಕಿ ಜಮೀನು ಎಷ್ಟಿದೆ ಅರಣ್ಯ ಸಂಪತ್ತು ನಾಶವಾಗಿದೆಯೆ ಇಲ್ಲವೆ ಎಂಬುದನ್ನು ಜನತೆಯ ಮುಂದಿಡುವುದಾಗಿ ಹೇಳಿತ್ತು.


ನಂತರ ಯಾವುದೆ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯದ ಕಾರಣ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಗಡೆ ನ್ಯಾಯಾಲಯದ ಮೊರೆ ಹೋಗಿದ್ದರು ಸದ್ಯ ಪ್ರಕರಣ ನ್ಯಾಯಾಲಯದಲ್ಲಿರುವಾಗಲೆ ಮತ್ತೆ ತೆರೆ ಮನರೆಯಲ್ಲಿ ಜಾಗದ ಮಾರಾಟದ ವಾಸನೆ ಬಡಿಯುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಓಡಾಡುತ್ತಿದೆ ಇದು ಅಕ್ಷಮ್ಯ ಕಾನೂನು ವಿರೋದಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಗಡೆ ಆತಂಕ ಹೊರಹಾಕಿದ್ದು ಸಂಬಂಧಿಸಿದ ಇಲಾಖೆಗಳು ಕಾನೂನು ಕ್ರಮ ಜರುಗಿಸಬೇಕಿದೆ ಎಂದು ಆಗ್ರಹಿಸಿ ಪ್ರತಿಧ್ವನಿ ಗೆ ಮಾಹಿತಿ ನೀಡಿದ್ದಾರೆ.

ಸರ್ಕಾರದ ಸ್ವತ್ತು ಅನ್ಯರ ಪಾಲಾಗದಂತೆ ಕಳೆದ ಎರಡು ವರ್ಷಗಳಿಂದ ಹೋರಾಡುತ್ತಲೆ ಬಂದಿದ್ದೇನೆ. ಕೊನೆಗೆ ಇಲ್ಲಸಲ್ಲದ ಅಪಪ್ರಚಾರ ಮಾಡಿದರು ಜಗ್ಗದೆ ಈ ನೆಲದ ಕಾನೂನಿನ ಮೇಲಿನ ಗೌರವ ಮತ್ತು ವಿಶ್ವಾಸದಿಂದ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಈ ಮದ್ಯೆ ಸಾಮಾಜಿಕ ಜಾಲ ತಾಣದಲ್ಲಿ ನ್ಯಾಯಾಲಯದಲ್ಲಿರುವ ಪ್ರಕರಣದ ಜಮೀನು ಮಾರಾಟಕ್ಕಿದೆ ಎಂಬ ಜಾಹಿರಾತು ಗಮನಿಸಿದ್ದು ತಕ್ಷಣ ಅದೇ ಜಾಹಿರಾತಿಗೆ ಪ್ರತಿಕ್ರಿಯಿಸಿ ಈ ಬೂಮಿಯ ವ್ಯಾಜ್ಯ ನ್ಯಾಯಾಲಾಯದಲ್ಲಿದೆ ಎಂದು ಉತ್ತರಿಸಿದ್ದೇನೆ. ಆದರು ಪ್ರಕರಣಕ್ಕೆ ಸಂಬಂಧಿಸಿದ ಜಮೀನು ಮಾರಾಟಕ್ಕಿದೆ ಎಂದು ಜಾಹಿರಾತು ಬಿತ್ತರಿಸುವ ಮಟ್ಟಕ್ಕೆ ಹೋಗಿದ್ದಾರೆ ಎಂದರೆ ಅಕ್ಷಮ್ಯ ಅಪರಾಧ ಎನ್ನಬಹುದಾಗಿದೆ. ಸಂಬಂಧಿಸಿದ ಇಲಾಖೆಗಳು ಶೀಘ್ರವಾಗಿ ಸಮಸ್ಯೆ ಇಥ್ಯರ್ಥ ಪಡಿಸಬೇಕಿದೆ.
ಮಂಜುನಾಥ ಹೆಗಡೆ, ಸಾಮಾಜಿಕ ಹೋರಾಟಗಾರ. ಬಾಳಗಿಮನೆ,ಯಲ್ಲಾಪುರ.
ನಮ್ಮ ಇಲಾಖೆಯಿಂದ ಕಂದಾಯ ಇಲಾಖೆಗೆ ಸರ್ವೆ ಕಾರ್ಯಕ್ಕೆ ಬರೆಯಲಾಗಿದ್ದು ಇನ್ನೂ ಸಹ ಸರ್ವೆಕಾರ್ಯ ನಡೆದಿರುವುದಿಲ್ಲ. ಈ ಪ್ರಕರಣ ನ್ಯಾಯಾಲಯದ ವ್ಯಾಪ್ತಿಯಲ್ಲಿರುವುದರಿಂದ ಯಾವುದೇ ಕಾರಣಕ್ಕು ಮಾರಾಟ ಸಾದ್ಯವಿಲ್ಲ.
ಎಂ.ಹೆಚ್.ನಾಯ್ಕ್ ,ವಲಯ ಅರಣ್ಯಾಧಿಕಾರಿ,ಇಡಗುಂದಿ ವಲಯ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬೋರ್ ಕೊರೆಸಿ ಕರಡೊಳ್ಳಿ ಗ್ರಾಮಸ್ತರ ದಾಹ ನೀಗಿಸಿದ ಬಾಲಕೃಷ್ಣ ನಾಯಕ್.ಬರೋಬ್ಬರಿ 3.5 ಇಂಚು ನೀರು.

ಪ್ರತಿಧ್ವನಿ ಯಲ್ಲಾಪುರ : ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿರುವ ಸಾಮಾಜಿಕ …

Leave a Reply

Your email address will not be published. Required fields are marked *