
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ -ಕಾರವಾರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಪಾಯಕಾರಿಯಾಗಿ ದಡೂತಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದ್ದು ಸಣ್ಣಪುಟ್ಟ ವಾಹನಗಳು ದ್ವಿಚಕ್ರ ವಾಹನಗಳು ಹಾಗು ಪಾದಚಾರಿಗಳಿಗೆ ಈ ಸ್ಥಳ ಯಮಪುರಿಗೆ ಕರೆದೊಯ್ಯಬಲ್ಲ ಸ್ಥಳಗಳಾಗಿ ಮಾರ್ಪಟ್ಟಿರುವುದು ದುರಂತವಾಗಿದೆ.

ಈ ಹಿಂದೆ ಪ್ರತಿಧ್ವನಿ ವೆಬ್ ನ್ಯೂಸ್ ಎಚ್ಚರಿಸಿ ಸುದ್ದಿ ಪ್ರಕಟಿಸಿತ್ತು ಆದರು ಗಂಭೀರವಾಗಿ ಪರಿಗಣುಸದ ಸಂಬಂಧಿಸಿದ ಇಲಾಖೆಗಳು ಪ್ರಾಣ ಬಲಿಗಾಗಿ ಕಾಯುತ್ತಿರುವರೇನೊ ಎಂಬ ಅನುಮಾನ ಕಾಡುತ್ತಿದೆ. ಎಲ್ಲಿಯಾದರು ಅಪಘಾತವಾದಾಗ ಆ ರಸ್ತೆಯಲ್ಲಿ ಅಪಾಯದ ಮುನ್ಸೂಚನೆ ಫಲಕ,ಹುಬ್ಬುಗಳನ್ನು ನಿರ್ಮಿಸುವ ಭಾರತೀಯ ಪುರಾತನ ಪದ್ದತಿಗೆ ಇನ್ನಾದರು ಇತಿಶ್ರೀ ಹೇಳಿ ಈ ಕೂಡಲೆ ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವ ಪದ್ದತಿಗೆ ಕೊನೆ ಹೇಳಬೇಕು ಹಾಗೊಂದು ವೇಳೆ ಎಚ್ಚರಿಸಿದ ಮೇಲು ವಾಹನಗಳನ್ನು ನಿಲ್ಲಿಸುಸರೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಬೇಕು.

ಪ್ರತಿಯೊಬ್ಬರ ಜೀವವು ಅಮೂಲ್ಯವಾದುದು ಇಂತಹ ಅಸಂಬದ್ದ ಘಟನೆಗಳಿಂದ ಅಪಘಾತ ಸಂಭವಿಸಿ ಜೀವ ಹಾನಿ ಸಂಭವಿಸಿದರೆ ಸಂಬಂಧಿಸಿದ ಇಲಾಖೆಗಳನ್ನೆ ಹೊಣೆಗಾರರನ್ನಾಗಿಸಿ ದಂಡ ವಸೂಲಿ ಆಗಬೇಕು ಅಥವ ಆ ಇಲಾಖೆಯ ಮೇಲೆ ಕೊಲೆ ಪ್ರಕರಣ ದಾಖಲಾಗಬೇಕು ಎನ್ನುತ್ತಾರೆ ಪ್ರಜ್ಞಾವಂತರು.

ವಿಶೇಷವಾಗಿ ಯಲ್ಲಾಪುರದ ಟಿ.ಎಂ.ಎಸ್ ಪೆಟ್ರೋಲ್ ಬಂಕ್ ಸಮೀಪ, ಹಿಂದು ರುಧ್ರಭೂಮಿ ಎದುರು, ಹುಬ್ಬಳ್ಳಿ ರಸ್ತೆ ಕಾಮಾಕ್ಷಿ ಬಂಕ್ ಸಮೀಪ, ಸಂಕಲ್ಪ ಹೊಟೆಲ್ ಮುಂದಿನ ರಸ್ತೆಯಲ್ಲಿ, ಆದಿತ್ಯ ಬಾರ್ ಎದುರು,ಕೃಷಿ ಇಲಾಖೆ ಎದುರು, ಹೋಲಿ ರೋಜರಿ ಚಚ್೯ ಮುಂಭಾಗ ಹಾಗು ಇನ್ನೂ ಇತರೆಡೆಗಳಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದರಿಂದ ಬಹುತೇಕ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ.






Prathidvani Yellapura