
ಪ್ರತಿಧ್ವನಿ ಯಲ್ಲಾಪುರ : ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿರುವ ಸಾಮಾಜಿಕ ಕಾರ್ಯಕರ್ತ ಕೊಡುಗೈ ದಾನಿ ಯುವ ನಾಯಕ ಬಾಲಕೃಷ್ಣ ನಾಯಕ್ ಅವರು ಕರಡೊಳ್ಳಿಯಲ್ಲಿ ಕೊಳವೆಬಾವಿ ಕೊರೆಸಿ ಗ್ರಾಮಸ್ಥರ ದಶಕಗಳ ದಾಹ ನೀಗಿಸಿದ್ದು ಗ್ರಾಮಸ್ಥರು ಧನ್ಯತೆ ಸಮರ್ಪಿಸಿದ್ದಾರೆ.

ಬಾಲಕೃಷ್ಣ ನಾಯಕ್ ಸದ್ಯ ಯಲ್ಲಾಪುರ – ಮುಂಡಗೋಡು ವಿಧಾನಸಭಾ ಕ್ಷೇತ್ರದಾದ್ಯಂತ ಪ್ರಚಲಿತದಲ್ಲಿರುವ ಹೆಸರಾಗಿದೆ. ವಿಶೇಷವಾಗಿ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಕಡೆಗೆ ಹೆಚ್ಚಿನ ಗಮನ ಹರಿಸಿ ತಮ್ಮ ಸ್ವಂತ ಹಣದಿಂದ ಬೋರ್ ಕೊರೆಸಿ ದಣಿದ ಜೀವಗಳಿಗೆ ದಾಹ ನೀಗಿಸುತ್ತಿದ್ದಾರೆ. ಸಮಾಜಮುಖಿ ಕೆಲಸ ಕಾರ್ಯ ಮಾಡುತ್ತ ಬಹುಜನರ ವಿಶ್ವಾಸ ಗಳಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಕರಡೊಳ್ಳಿ ಗ್ರಾಮಸ್ಥರು ಸಮಾಜ ಸೇವಕ ಬಾಲಕೃಷ್ಣ ನಾಯಕ್ ಅವರನ್ನು ಭೇಟಿಯಾಗಿ ಕುಡಿಯುವ ನೀರಿನ ಸಮಸ್ಯೆ ಹೇಳಿಕೊಂಡು ಕೊಳವೆ ಬಾವಿ ಹಾಕಿಸಿ ಕೊಡುವಂತೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದರು. ಇದನ್ನು ಮನ್ನಿಸಿದ ಬಾಲು ನಾಯಕ್ ಕೊಂಚವು ತಡಮಾಡದೆ ಮೀನಾಮೇಷ ಎಣಿಸದೆ ಕೊಳವೆ ಬಾವಿ ಕೊರೆಸಿದರು.
ಪ್ರಾರಂಭದಲ್ಲಿ ಕೊರೆದ ಬೋರ್ ಯಶಸ್ವಿಯಾಗದೆ ನಿರರ್ಥಕವಾಗಿದ್ದು ನಂತರ ಕೊರೆದ ಕೊಳವೆ ಬಾವಿಯಲ್ಲಿ ಗಂಗೆ ಮಾತೆಯ ಕೃಪೆಯಿಂದ 3.5 ಇಂಚು ನೀರು ಚಿಮ್ಮಿದೆ.

ಮೊದಲು ಕೊರೆದ ಬೋರ್ ಯಶಸ್ವಿಯಾಗದಿದ್ದರು ಕೊಟ್ಟ ಭರವಸೆಗೆ ಚ್ಯುತಿ ಬಾರದಂತೆ ಕರಡೊಳ್ಳಿ ಗ್ರಾಮಸ್ಥರ ದಾಹ ನೀಗಿಸಿ ಸೈ ಎನಿಸಿಕೊಂಡು ಗ್ರಾಮಸ್ಥರ ಅಭಿಮಾನ ಗಳಿಸಿ ಗೌರವ ಸ್ವೀಕರಿಸಿದ್ದಾರೆ ಬಾಲಕೃಷ್ಣ ನಾಯಕ್.
ಗ್ರಾಮದ ಹಿರಿಯರು,ಮಹಿಳೆಯರು, ಯುವಕರು,ವಿದ್ಯಾರ್ಥಿಗಳು ಸಹ ನೀರೊದಗಿಸಿದ ಪುಣ್ಯ ಕಾರ್ಯಕ್ಕೆ ಬಾಲಕೃಷ್ಣ ನಾಯಕ್ ಅವರನ್ನು ಹರಸಿದ್ದಾರೆ.







Prathidvani Yellapura