
ಪ್ರತಿಧ್ವನಿ ಯಲ್ಲಾಪುರ : 17 ವರ್ಷ ವಯೋಮಿತಿಯ ಒಳಗಿನ ಮಂಚಿಕೆರೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭರತನಹಳ್ಳಿ ಪ್ರಗತಿ ವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಲಭಿಸಿದೆ.


ವೈಯಕ್ತಿಕ ವಿಭಾಗದಲ್ಲಿ ಬಾಲಕ, ಬಾಲಕಿಯರ 100m ಓಟಗಳು ಪ್ರಥಮ
ಉದ್ದ ಜಿಗಿತಗಳು ಪ್ರಥಮ,
ಬಾಲಕಿಯರ 400m ಹರ್ಡಲ್ಸ್, ಉದ್ದ ಜಿಗಿತ, ತ್ರಿವಿಧ ಜಿಗಿತಗಳು ಪ್ರಥಮ,
ಬಾಲಕ ಬಾಲಕಿಯರ 200m ಓಟ, ರೀಲೆಗಳು ದ್ವಿತೀಯ
ಬಾಲಕರ 200m ಓಟ, ಹರ್ಡಲ್ಸ್ ,ಎತ್ತರ ಜಿಗಿತ
ಬಾಲಕ ಬಾಲಕಿಯರ ಭರ್ಜಿ ಎಸೆತದಲ್ಲಿ ತೃತೀಯ,
ನಡಿಗೆ, ಚಕ್ರ ಎಸೆತ, ಗುಂಡು ಎಸೆತದಲ್ಲಿ ತೃತೀಯ,
ಬಾಲಕಿಯರ ಚೆಸ್ ದ್ವಿತೀಯ,ಪಂಚಮ
ಬಾಲಕರ ಚೆಸ್ ದ್ವಿತೀಯ, ಪಂಚಮ ಸ್ಥಾನಗಳನ್ನು ಪಡೆದಿರುತ್ತಾರೆ.

ಗುಂಪು ವಿಭಾಗದಲ್ಲಿ ಬಾಲಕ ಬಾಲಕಿಯರ ವಾಲಿಬಾಲ್ ಪ್ರಥಮ, ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನಗಳನ್ನು ಪಡೆದು ಈ ಮೂಲಕ ಶಾಲೆಯು ಮಂಚಿಕೇರಿ ವಲಯ ಮಟ್ಟದ ಸಮಗ್ರ ವೀರಾಗ್ರಣಿ ಪಡೆದಿರುತ್ತದೆ. ಮಕ್ಕಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಗು ಪೋಷಕರು ಊರ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ














Prathidvani Yellapura