
ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ
ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುತ್ತ ಹಂತಹಂತವಾಗಿ ಮೇಲಕ್ಕೇರಿ ಸದ್ಯ ದೀರ್ಘ ಸಮಯದಿಂದ ಯಲ್ಲಾಪುರ ಅರಣ್ಯ ಇಲಾಖೆಯಲ್ಲಿ ಜನಸ್ನೇಹಿ ಸಹಾಯಕ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿಮಾವತಿ ಭಟ್ ತಮ್ಮ ಕರ್ತವ್ಯ ನಿಷ್ಟೆಯಿಂದ ಪದೋನ್ನತಿ ಪಡೆದು ಬೆಂಗಳೂರಿಗೆ ವರ್ಗಾವಣೆಯಾಗಿದ್ದು ಭವಿಷ್ಯದ ದಿನಗಳಲ್ಲಿ ಮತ್ತಷ್ಟು ಕೀರ್ತಿ ಸಂಪಾದಿಸಲಿ ಎಂದು ವಿಧಾನಪರಿಷತ್ ಮಾಜಿ ಸದಸ್ಯರು ಶಾಂತರಾಮ್ ಸಿದ್ದಿ ತಮ್ಮ ಲೇಖನಿಯಲ್ಲಿ ಉಲ್ಲೇಖಿಸಿದ್ದಾರೆ.

ಇಂದು ಸರಕಾರಿ ಅಧಿಕಾರಿಗಳು ಬಹಳಷ್ಟು ಗೊಂದಲ ಮತ್ತು ಸಮಸ್ಯೆಯಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೂಡ ಕೆಲವು ಅಧಿಕಾರಿಗಳು ತಮ್ಮ ಕರ್ತವ್ಯ ನಿಷ್ಠೆಯಿಂದ ಜನಪ್ರಿಯರಾಗುತ್ತಾರೆ. ಅಂಥವರಲ್ಲಿ ಅರಣ್ಯ ಇಲಾಖೆಯ ಯಲ್ಲಾಪುರ ಉಪ ವಿಭಾಗದಲ್ಲಿ ಅನೇಕ ವರ್ಷ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿಭಾಯಿಸಿ ಇತ್ತೀಚೆಗೆ ಪದೋನ್ನತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಯಾಗಿರುವ ಶ್ರೀಮತಿ ಹಿಮಾವತಿ ಭಟ್ ಅವರು ಒಬ್ಬರು. ಅವರ ಕಾರ್ಯಶೈಲಿ ಅವರನ್ನು ಇಷ್ಟು ಎತ್ತರಕ್ಕೆತಂದು ನಿಲ್ಲಿಸಿದೆ.

ಕೆನರಾ ವೃತ್ತದಲ್ಲಿ ಅರಣ್ಯ ಇಲಾಖೆಯ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಹಂತದ ಅಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರ ಶೈಲಿ ವಿಶಿಷ್ಟವಾದದ್ದು. ಒಬ್ಬ ಮಹಿಳೆಯಾಗಿದ್ದರೂ ಅರಣ್ಯ ರಕ್ಷಣೆಯ ಪ್ರಶ್ನೆ ಬಂದಾಗ ಧೈರ್ಯದಿಂದ ಹಗಲು ರಾತ್ರಿ ಎನ್ನದೆ ತಮ್ಮ ಸಿಬ್ಬಂದಿಗಳೊಂದಿಗೆ ಕಾಡಿನಲ್ಲಿ ಓಡಾಡುವುದು ಸುಲಭದ ಕೆಲಸವೇನಲ್ಲ. ಜೊತೆಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಗೌರವಾಧಾರಗಳೊಂಗೆ ಮತ್ತು ಕಿರಿಯ ಸಿಬ್ಬಂದಿಗಳೊಂದಿಗೆ ಆತ್ಮೀಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದ ಅವರ ಶೈಲಿ ವಿಶಿಷ್ಟವಾದದ್ದು. ಜೊತೆಗೆ ರೈತರು ಸಾಮಾನ್ಯ ಜನರು ವನವಾಸಿಗಳು ಬಡವರು ಹಿಂದುಳಿದವರೊಂದಿನ ಅವರ ವ್ಯವಹಾರ ಮತ್ತು ಸಂಬಂಧ ಅನುಕರಣೀಯವಾಗಿತ್ತು.

ಅರಣ್ಯ ಮತ್ತು ಪರಿಸರ ಅವರ ಅತ್ಯಂತ ಆಸಕ್ತ ವಿಷಯವಾಗಿರುವುದರಿಂದ ಯಾರು ಯಾವ ಸಂದರ್ಭದಲ್ಲಿ ಆ ವಿಷಯದ ಸಭೆ ಸಮಾರಂಭಗಳಿಗೆ ಕರೆದರೂ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಪಶ್ಚಿಮ ಘಟ್ಟದ ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಹೋರಾಟಗಾರರೊಂದಿಗೆ ಅವರ ಸಂಬಂಧ ಅತ್ಯಂತ ಗಟ್ಟಿಯಾಗಿತ್ತು.

ಆಘಾದ ವಾದ ಸಾಮಾಜಿಕ ಕಳಕಳಿ ಹೊಂದಿದ ಹಿಮವತಿ ಭಟ್ ಅವರು ಅನೇಕ ಸಲ ಸಮಾಜಮುಖಿ ಕಾರ್ಯಗಳಿಗೆ ಶಕ್ತಿಯಾಗಿ ನಿಲ್ಲುತ್ತಿದ್ದರು.

ಒಟ್ಟಾರೆಯಾಗಿ ಕರ್ತವ್ಯದ ದೃಷ್ಟಿಯಿಂದ ಅವರಿಗಿರುವ ಜ್ಞಾನ, ಪ್ರಾಮಾಣಿಕತೆ, ಸಮರ್ಪಣ ಭಾವ, ನಿರಂತರ ಶ್ರಮ, ಎಲ್ಲರೊಂದಿಗೆ ಆತ್ಮೀಯ ವ್ಯವಹಾರ, ಧೈರ್ಯದಿಂದ ಮುನ್ನುಗ್ಗುವಿಕೆ,ಸರಳತೆ ಮತ್ತು ಸೇವಾ ಭಾವನೆ ಅವರಿಗೆ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಬೇರೆ ಬೇರೆ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಇಂಥವರನ್ನು ನೋಡಿ ಕಲಿತರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು ಎಂಬ ಆಸೆ ನಮ್ಮದು.

ಏನೇ ಇರಲಿ ಶ್ರೀಮತಿ ಹಿಮಾವತಿ ಭಟ್ ಅವರ ಮುಂದಿನ ದಿನಗಳು ಆರೋಗ್ಯ ಮತ್ತು ಸುಖ ಶಾಂತಿಯಿಂದ ಕೂಡಿದ್ದು ಅವರು ಉನ್ನತ ಹುದ್ದೆಗೆ ಪದೋನ್ನತಿ ಪಡೆಯುತ್ತಲಿರಲಿ ಎಂಬುದೇ ನಮ್ಮ ಹಾರೈಕೆ.

ಸದಾ ಹಸನ್ಮುಖಿಯಾಗಿ ಮಾನವೀಯ ಮೌಲ್ಯದೊಂದಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿವರೆಗು ಗೌರವದ ನಡೆ ತೋರುತ್ತ ಯಲ್ಲಾಪುರ ವಿಭಾಗದ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಲೆ ಯಲ್ಲಾಪುರ ತಾಲೂಕಿನ ಬುಡಕಟ್ಟು, ವನವಾಸಿ,ರೈತರು ಹಾಗು ಪರಿಸರ ಸ್ನೇಹಿಗಳ ಮನಃ ಗೆದ್ದಿರುವ ಉತ್ತಮ ಮಹಿಳಾ ಅಧಿಕಾರಿಯಾಗಿ ಹಲವು ಪ್ರಶಸ್ತಿ ಪುರಸ್ಕಾರ ಹಾಗು ಸನ್ಮಾನಗಳಿಗೆ ಭಾಜನರಾದ ಹಿಮವತಿ ಭಟ್ ಅವರ ಅರಣ್ಯ ಇಲಾಖೆಯಲ್ಲಿನ ಕರ್ತವ್ಯ ನಿಷ್ಟೆಗೆ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಅಭಿನಂದನೆ ಸಲ್ಲಿಸುತ್ತದೆ ಮತ್ತು ಪದೋನ್ನತಿ ವರ್ಗಾವಣೆಯಾಗಿರುವ ಅವರು ಭವಿಷ್ಯದಲ್ಲಿ ಮತ್ತಷ್ಟು ಉನ್ನತ ಸ್ಥಾಯಿಗೇರಲಿ ಎಂದು ಶುಭಹಾರೈಸುತ್ತದೆ.























Prathidvani Yellapura