Breaking News

ಸರ್ಕಾರದ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ರೈತ ಸಮೂಹ – ಬಳ್ಳಾರಿ ಕಾರವಾರ ರಾಷ್ಟ್ರೀಯ ಹೆದ್ದಾರಿ ತಡೆದು ಕಿರವತ್ತಿಯಲ್ಲಿ ಭಾರಿ ಪ್ರತಿಭಟನೆ.


ಪ್ರತಿಧ್ವನಿ ಯಲ್ಲಾಪುರ : ದೇಶಕ್ಕೆ ಅನ್ನನೀಡಿ ಹಸಿವು ನೀಗಿಸುವ ಪುಣ್ಯಾತ್ಮ ರೈತನ ಬದುಕು ಇಂದು ಬೀದಿಯಲ್ಲಿ ನಿಂತು ತನ್ನ ಬೆವರಿನ ಶ್ರಮದ ಪ್ರತಿಫಲವನ್ನು ಬಿಕ್ಷೆರೂಪದಲ್ಲಿ ಬೇಡುವ ಪರಿಸ್ಥಿತಿಯನ್ನು ನಮ್.ನ್ನಾಳುವ ಸರ್ಕಾರ ತಂದಿರುವುದು ವ್ಯವಸ್ಥೆಯ ದುರಂತವಾಗಿದೆ. ಕೇಂದ್ರ ಸರ್ಕಾರದ ಎಫ್.ಆರ್.ಪಿ ಕಬ್ಬು ಬೆಳೆಗಾರರ ಬದುಕಿನ ಮೇಲೆ ಬರೆ ಎಳೆವ ಕೆಲಸ ಮಾಡಿದ್ದು ತಕ್ಷಣ ಮರು ಪರಿಶೀಲಿಸಿ ಕನಿಷ್ಟ ಟನ್ ಕಬ್ಬಿಗೆ 6000 ರುಪಾಯಿಗಳನ್ನು ನೀಡಬೇಕಿದೆ. ಕಾರ್ಖಾನೆ ಮಾಲಿಕರಿಗೆ, ಜನಪ್ರತಿನಿಧಿಗಳಿಗೆ,ಅಧಿಕಾರಿ ಕಾರ್ಪೊರೇಟ್ ಕಂಪನಿಗಳಿಗೆ ಲಾಭವಾಗುವ ಕಬ್ಬು ಬೆಳೆಯುವ ರೈತನಿಗೇಕೆ ನಷ್ಟವಾಗುತ್ತಿದೆ ಎಂದು ರೈತ ಸಂಘಟನೆ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಗೊಗಾಟಿ ಆಕ್ರೋಶ ವ್ಯಕ್ತಪಡಿಸಿದರು.


ಅವರು ತಾಲ್ಲೂಕಿನ ಕಿರವತ್ತಿಯಲ್ಲಿ ರೈತ ಸಂಘಟನೆ ವತಿಯಿಂದ ಕಬ್ಬು ಬೆಳೆಗೆ ಬೆಲೆ ಹೆಚ್ಚಳ ಮಾಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.


ಇತ್ತೀಚಿನ ದಿನಗಳಲ್ಲಿ ಕಬ್ಬು ಬೆಳೆಯಲು ಅಗತ್ಯವಿರುವ ಗೊಬ್ಬರ, ಬೀಜ, ಕೂಲಿ ಕಾರ್ಮಿಕರ ವೇತನ, ನೀರಾವರಿ ಹಾಗೂ ಸಾಗಾಣಿಕೆ ವೆಚ್ಚಗಳು ಬಹಳಷ್ಟು ಹೆಚ್ಚಾಗಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ. ಆದ್ದರಿಂದ ಕಬ್ಬಿನ ದರವನ್ನು ಪ್ರತಿ ಟನ್‌ಗೆ ₹6,000 ನಿಗದಿಪಡಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಮನವಿಪತ್ರದಲ್ಲಿ ಉಲ್ಲೇಖಿಸಿದ್ದಾರೆ.


ಪ್ರತಿಭಟನೆಯಲ್ಲಿ ದಾರವಾಡ ಜಿಲ್ಲಾ ರೈತ ಸಂಘಟನೆ ಜಿಲ್ಲಾಧ್ಯಕ್ಷ ಮಹೇಶ್ ಬೆಳಗಾಂಕರ್ ಕಲಘಟಗಿ,ಹುಬ್ಬಳ್ಳಿ ಮತ್ತಿತರಕಡೆಗಳ ಸಂಘಟನೆ ಪ್ರಮುಖರು, ಸ್ಥಳೀಯ ಮುಖಂಡರು, ನೂರಾರು ರೈತರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಮನವಿ ಪತ್ರ ಸ್ವೀಕರಿಸಲು ತಹಶಿಲ್ದಾರರು ಬಂದರೆ ಮನವಿ ನೀಡುವುದಿಲ್ಲ ಜಿಲ್ಲಾಧಿಕಾರಿಗಳೆ ಬಂದು ಮನವಿ ಸ್ವೀಕರಿಸಬೇಕು ಎಂದು ಜಿಲ್ಲಾಧ್ಯಕ್ಷ ಪ್ರವೀಣ ಕುಮಾರ್ ಗುಗಾಟಿ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರು.


ರೈತರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಲೆ ಮದ್ಯಾಹ್ನದ ಊಟಕ್ಕೆ ತರಕಾರಿ ಹೆಚ್ಚುವ ಕೆಲಸ ರಸ್ತೆಯಲ್ಲೆ ಮಾಡಿದರು.


ಹೆದ್ದಾರಿ ತಡೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಮೇಲೆ ಸಾವಿರಾರು ವಾಹನಗಳು  ರಸ್ತೆ ಮೇಲೆ ಗಂಟೆಗಟ್ಟಲೆ ನಿಂತ ಪರಿಣಾಮ ವಾಹನಸವಾರರು ಹೈರಾಣಾದರು.


ಯಾವುದೆ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.


ಪ್ರತಿಭಟನೆ ನಡುವೆಯು ತುರ್ತು ಚಿಕಿತ್ಸೆಗಾಗಿ ಹುಬ್ಬಳ್ಳಿ ಅಥವ ಹುಬ್ಬಳ್ಳಿ ಕಡೆಯಿಂದ ಕಾರವಾರದಕಡೆಗೆ ಸಂಚರಿಸುವ ಆಂಬುಲೆನ್ಸ್ ಗಳಿಗೆ ದಾರಿಮಾಡಿಕೊಟ್ಟು ರೈತರು ಮಾನವೀಯತೆ ಮೆರೆದರು.


ಒಟ್ಟಿನಲ್ಲಿ ರೈತರ ಪ್ರತಿಭಟನೆ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಂತು ಸುಳ್ಳಲ್ಲ. ಬಹು ಸಮಯದ ಬಳಿಕ ಪ್ರತಿಭಟನೆ ರೂಪದಲ್ಲಿ ಇಷ್ಟು ದೀರ್ಘ ಸಮಯ ಹೆದ್ದಾರಿ ಸಂಚಾರ ಸ್ಥಬ್ದವಾಗಿದ್ದು ಸರ್ಕಾರದ ಪ್ರತಿಕ್ರಿಯೆ ಏನೆಂಬುದನ್ನು ಕಾದು ನೋಡಬೇಕಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *