
ಪ್ರತಿಧ್ವನಿ ಯಲ್ಲಾಪುರ : ನವರಾತ್ರಿ ಹಬ್ಬದ ಸಂಭ್ರಮಕ್ಕೆ ಯಲ್ಲಾಪುರ ತಿಲಕ್ ಚೌಕ್ ಮೊರೆಯಾ ಬಾಯ್ಸ್ ಅಡಿಯಲ್ಲಿ ಸಮಾಜಸೇವಕ ಉದ್ಯಮಿ ಬಾಲಕೃಷ್ಣ ನಾಯಕ್ ಸಾರಥ್ಯದಲ್ಲಿ ಉತ್ತರ ಭಾರತದಲ್ಲಿ ಪ್ರಖ್ಯಾತಿ ಪಡೆದ ” ದಾಂಡಿಯಾ ನೃತ್ಯ ” ಕಾರ್ಯಕ್ರಮ ಹಮ್ಮಿಕೊಂಡಿದ್ದು ದಿನಾಂಕ 16,17 ಮತ್ತು 18 ರಂದು ನಡೆಯಲಿದೆ,ವಿಶೇಷವಾಗಿ 18 ರಂದು ಅಂತಿಮ ದಿನದ ದಾಂಡಿಯ ನೃತ್ಯ ಇದ್ದು ಸಮಸ್ತರು ಆಗಮಿಸಿ ಪಾಲ್ಗೊಳ್ಳಲು ಸಂಘಟಕರು ಕರೆ ನೀಡಿದ್ದಾರೆ.

ದಾಂಡಿಯಾ ನೃತ್ಯವು ವಿಶೇಷ ಇತಿಹಾಸ ಹೊಂದಿದೆ. ಮುಖ್ಯವಾಗಿ ಗುಜರಾತ್ ರಾಜ್ಯದ ಸಾಂಪ್ರದಾಯಿಕ ಹಾಗೂ ಅತ್ಯಂತ ಜನಪ್ರಿಯ ಜಾನಪದ ನೃತ್ಯವಾಗಿದೆ.

ಪ್ರಮುಖ ವಿವರಗಳು:

- ಮೂಲ ಮತ್ತು ಹಿನ್ನೆಲೆ: ವೃಂದಾವನದಲ್ಲಿ ಕೃಷ್ಣನಿಂದ ಹುಟ್ಟಿಕೊಂಡಿತು ಎನ್ನಲಾಗುತ್ತದೆ. ಇದನ್ನು ಹೋಳಿ ಹಬ್ಬದ ಸಂದರ್ಭದಲ್ಲಿ ಮತ್ತು ಕೃಷ್ಣ-ರಾಧೆಯರ ಲೀಲೆಗಳಿಗಾಗಿ ಆಡಲಾಗುತ್ತದೆ.
- ನವರಾತ್ರಿ ಸಂಭ್ರಮ: ನವರಾತ್ರಿ (ಶರದ್ ನವರಾತ್ರಿ) ಉತ್ಸವದ ಸಂದರ್ಭದಲ್ಲಿ ಗರ್ಭಾ ನೃತ್ಯದೊಂದಿಗೆ ರಾತ್ರಿ ವೇಳೆ ಇದನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ.
- ಕೋಲುಗಳ ಬಳಕೆ: ನೃತ್ಯಗಾರರು ತಮ್ಮ ಕೈಯಲ್ಲಿ ಸಣ್ಣದಾದ ಬಣ್ಣದ ಮರದ ಕೋಲುಗಳನ್ನು (ದಾಂಡಿಯಾ) ಹಿಡಿದುಕೊಂಡು, ಪರಸ್ಪರ ಕೋಲುಗಳನ್ನು ತಟ್ಟುತ್ತಾ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ. ಇದು ಕರ್ನಾಟಕದ ‘ಕೋಲಾಟ’ವನ್ನು ಹೋಲುತ್ತದೆ.
- ವೇಷಭೂಷಣ: ಪುರುಷರು ಮತ್ತು ಮಹಿಳೆಯರು ಸಾಂಪ್ರದಾಯಿಕ ಹಾಗೂ ವರ್ಣರಂಜಿತ ಉಡುಗೆಗಳನ್ನು (ಚಣಿಯಾ ಚೋಳಿ, ಕೇಡಿಯಾ ಇತ್ಯಾದಿ) ಧರಿಸುತ್ತಾರೆ.
- ಒಟ್ಟಿನಲ್ಲಿ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗೆ ಸಂಭಂದಿಸಿದ ನೋಡುಗರ ಕಣ್ಮನ ಸೆಳೆಯುವ ದಾಂಡಿಯಾ ನೃತ್ಯ ಸೊಬಗನ್ನು ಆಸ್ವಾದಿಸಲು, ವರ್ಣರಂಜಿತ ವಿದ್ಯುತ್ ದೀಪಾಲಂಕಾರದ ಸೊಬಗು, ಕಿವಿಗಿಂಪೆನಿಸುವ ಡಿಜೆ ಸದ್ದಿನೊಂದಿಗೆ ಕುಣಿದು ಕುಪ್ಪಳಿಸಲು ತಿಲಕ್ ಚೌಕ್ ಮೊರೆಯಾ ಬಾಯ್ಸ್ ಆಯೋಜನೆಯ ದಾಂಡಿಯಾ ನೃತ್ಯೋತ್ಸವಕ್ಕೆ ಸರ್ವರಿಗು ಸ್ವಾಗತಿಸಿದ್ದಾರೆ ಸಂಘಟಕರು.
ವಿಶೇಷ ಸೂಚನೆ :-
16-10-2026- ರಂದು ಸೀರೆ ಅಥವಾ ಸಾಮಾನ್ಯ ಲೆಹೆಂಗಾ ಧರಿಸಬೇಕು. (saree or casual lehenga)
17-10-2026- ರಂದು ಕುರ್ತಿ ಅಥವಾ ಇಂಡೊ ವೆಸ್ಟನ್೯ ದಿರಿಸು ಧರಿಸಬೇಕು (kurtis or indo western)
18-10-2026- ಲೆಹಂಗ ಮಾತ್ರ ಧರಿಸಿ ಬರಬೇಕು.(lehenga)


















Prathidvani Yellapura