
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಹುಟಕಮನೆ ನೈಸರ್ಗಿಕ ಗುಡ್ಡ ನೆಲಸಮ,ಅರಣ್ಯ ನಾಶದ ಗಂಭೀರ ಪ್ರಕರಣದ ವಿಷಯದಲ್ಲಿ ಧ್ವನಿ ಎತ್ತಿ ಹೋರಾಟಕ್ಕಿಳಿದು ಹಿಡಿದ ಪಟ್ಟು ಬಿಡದೆ ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು ಪ್ರಕರಣ ನ್ಯಾಯಾಲಯದಲ್ಲಿ ಇರುಂತೆಯೆ ಅದೇ ಸ್ಥಳವನ್ನು ಮಾರಾಟ ಮಾಡುವ ಹುನ್ನಾರ ನಡೆದಿದ್ದು ಇದರ ವಿರುದ್ದ ಮತ್ತೆ ಹೊರಾಟಕ್ಕಿಳಿದ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಗಡೆ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಹಾಗು ಆತನ ಪತ್ನಿ ಅಂಕೋಲಾ ಠಾಣೆಯಲ್ಲಿ ಮಹಿಳಾ ಪೋಲಿಸ್ ಆಗಿ ಕಾರ್ಯ ನಿರ್ವ ಹಿಸುತ್ತಿರುವವರು ಸೇರಿ ಷಡ್ಯಂತರ ರೂಪಿಸಿ ಹತ್ತಿಕ್ಕುವ ಪ್ರಯತ್ನ ಸಾಗಿದೆ ಎಂದು ಹೋರಾಟಗಾರ ಮಂಜುನಾಥ ಹೆಗಡೆ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಅಂಕೋಲಾ ತಾಲೂಕಿನ ದೀಪಕ ಪುಂಡಲೀಕ ನಾಯ್ಕ್ ಎಂಬುವ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಆತನ ಜೊತೆ ಇನ್ನಿಬ್ಬರು ಸಹಚರರು ಸೇರಿಕೊಂಡು ಅಕ್ರಮವಾಗಿ ಸರಕಾರಿ ಭೂಮಿ ಒತ್ತುವರಿ ಮಾಡಿರುವುದನ್ನು ನಾನು ಪ್ರಶ್ನಿಸಿ ಸಂಬಂದಿಸಿದ ಅಧಿಕಾರಿಗಳಿಗೆ ಮನಿವಿ ನೀಡಿದ್ದೆ ಮತ್ತು ಮಾನ್ಯ ಸಂಬಂದಿಸಿದ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾಗಿತ್ತು. ಭೂ ವ್ಯವಹಾದಲ್ಲಿ ಸರಕಾರಕ್ಕೆ ಭರಣ ಮಾಡುವ ತೆರಿಗೆ ತಪ್ಪಿಸುವ ಸಲುವಾಗಿ ಅಕ್ರಮವಾಗಿ ಕೋಟಿಗು ಅಧಿಕ ಹಣವನ್ನು ದೀಪಕ್ಕ ನಾಯ್ಕ್ ಎಂಬಾತನ ಬ್ಯಾಂಕ್ ಖಾತೆಗೆ ವರ್ಗಾವಣೆ ಆದ ಬಗ್ಗೆ ತನಿಖೆ ನಡೆಸಲು ಸಂಬಂದಿಸಿದ ಅಧಿಕಾರಿಗಳಿಗೆ ಮನವಿ ಸಹ ನೀಡಿದ್ದೆ.

ಇಷ್ಟೆಲ್ಲ ವಿಷಯಗಳು ನಡೆಯುವಾಗ ಆತನ ಪತ್ನಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು ಇದನ್ನೆ ದುರುಪಯೋಗ ಮಾಡಿಕೊಂಡು ನನ್ನನ್ನು ಯಲ್ಲಾಪುರ ಠಾಣೆಗೆ ಹಲುವು ಬಾರಿ ಕರೆಸಿ ನಿಮ್ಮ ಮೇಲೆ ಕಂಪ್ಲೇಂಟ್ ಇದೆ ದೀಪಕ್ ನಾಯ್ಕ್ ಎನ್ನುವವರು ದೂರು ಕೊಟ್ಟಿದ್ದಾರೆ ಎಂದು ತನ್ನ ಪ್ರಭಾವ ಬಳಸಿ ಹೆದರಿಸಿದ್ದು ಇರುತ್ತದೆ. ಆ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಠಾಣೆಯ ಹಿರಿಯ ಅಧಿಕಾರಿಗಳಿಗೆ ನೀಡಿ ಎಲ್ಲಾ ವಿಷಯವನ್ನು ಸ್ಪಷ್ಟ ವಾಗಿ ತಿಳಿಸಿದಾಗ ಮತ್ತೆ ಪದೇಪದೇ ನನ್ನನ್ನು ಅನವಶ್ಯಕ ವಾಗಿ ಠಾಣೆಗೆ ಕರೆಸುವುದು ಬಂದಾಗಿತ್ತು ಆದರೆ ಮೊನ್ನೆ ದಿನ ಇವರು ಅತಿಕ್ರಮಣ ಮಾಡಿರುವ ಹಾಗು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲೆ ಇರುವ ಹುಟಕಮನೆ ಗುಡ್ಡ ನೆಲಸಮ,ಅರಣ್ಯನಾಶ ಪ್ರಕರಣಕ್ಕೆ ಸಂಬಂಧಿಸಿದ ಜಾಗ ಮಾರಾಟ ಮಾಡಲು ಹೊರಟಾಗ ಮಾಧ್ಯಮ ಮಿತ್ರರಿಗೆ ಪ್ರೆಸ್ ನೋಟ್ ಕೊಟ್ಟು ಸಾರ್ವಜನಿಕರಿಗೆ ಎಚ್ಚರಿಸುವ ಕೆಲಸ ಮಾಡಿದ್ದೆನು ಮತ್ತೆ ರಿಯಲ್ ಎಸ್ಟೇಟ್ ಉದ್ಯಮಿ ದೀಪಕ್ ಪುಂಡಲೀಕ ನಾಯ್ಕ್ ಅಂಕೋಲಾ ಠಾಣೆಗೆ ವರ್ಗಾವಣೆ ಯಾಗಿರುವ ತನ್ನ ಪತ್ನಿ ಶೋಭಾ ನಾಯ್ಕ್ ಅವರ ಪ್ರಭಾವ ಬಳಸಿ ನನ್ನ ಮೇಲೆ ಕಂಪ್ಲೇಂಟ್ ಇದೆ ಸಂಜೆ 5 ಗಂಟೆಗೆ ಬನ್ನಿ ಎಂದು ಶನಿವಾರ ಅಂಕೋಲ ಪೊಲೀಸ್ ಠಾಣೆಗೆ ಕರೆಸಿದ್ದರು.




ನಾನು ಅಂಕೋಲ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ನಿಮ್ಮ ವಿರುದ್ದ ಕಂಪ್ಲೇಂಟ್ ಮಾಡಿರುವ ಪಾರ್ಟಿ ಬರಲಿಲ್ಲ ಎಂದು ಹೇಳಿದರು ಹಾಗಾದರೆ ನಾನು ಮತ್ತೆ ಬರುತ್ತೇನೆ ಎಂದು ಹೊರಟೆನು ಆದರೆ ರಾತ್ರಿ 7 ಗಂಟೆಯ ಸುಮಾರಿಗೆ ದೂರವಾಣಿ ಕರೆ ಮಾಡಿ ಠಾಣೆಗೆ ಬನ್ನಿ ಎಂದು ಕರೆದರೂ ಅದಕ್ಕೆ ಬಸ್ಸಿನಲ್ಲಿ ಯಲ್ಲಾಪುರಕ್ಕೆ ಹೊರಟಿದ್ದೇನೆ ಬೆಳಿಗ್ಗೆ ಬರುತ್ತೇನೆ ಎಂದು ಹೇಳಿದ್ದೇನೆ. ನಾಳೆ ರವಿವಾರ 10 ಗಂಟೆಗೆ ಮತ್ತೆ ಬರುವಂತೆ ತಾಕೀತು ಮಾಡಿದ್ದೂ ಇರುತ್ತದೆ.
ನಾನು ಇವರು ಮಾಡಿರುವ ಅಕ್ರಮ ವನ್ನು ಸಾಕ್ಷಿ ಸಮೇತ ಮಾನ್ಯ ನ್ಯಾಯಾಲಯದಲ್ಲಿ ದೂರು ಕೊಟ್ಟಿದ್ದೇನೆ ಇವರು ಅತಿಕ್ರಮಣ ಮಾಡಿರುವುದು ಯಲ್ಲಾಪುರ ತಾಲೂಕಿನ ಹುಟಕಮನೆ ಇಡಗುಂದಿ ವಲಯ ಅರಣ್ಯ ಇಲಾಖೆ ವ್ಯಾಪ್ತಿ ಯಲ್ಲಿ ಬರುತ್ತದೆ ಆದರೆ ದೀಪಕ ನಾಯ್ಕ ಅವರ ಪತ್ನಿ ನನ್ನನ್ನು ಬೇಕಂತಲೆ ಅಂಕೋಲ ಠಾಣೆಗೆ ಕರೆಸಿ ಬೇದರಿಸುವ ತಂತ್ರ ರೂಪಿಸಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ ಇದಕ್ಕೆ ಸಂಬಂದಿಸಿದ ಮೇಲಾಧಿಕಾರಿಗಳು ಗಮನಿಸಿ ಸರ್ಕಾರಿ ಸ್ವತ್ತನ್ನು ಉಳಿಸುವ ಮತ್ತು ಕಾನೂನು ಉಲ್ಲಂಘನೆ ಪ್ರಶ್ನಿಸುವ ಸಾಮಾಜಿಕ ಹೋರಾಟಗಾರನಾದ ನನಗೆ ಜೀವ ಭಯವಿದ್ದು ರಕ್ಷಣೆ ನೀಡಬೇಕಿದೆ ಎಂದು ಮಂಜುನಾಥ ಹೆಗಡೆ ಮನವಿ ಮಾಡಿದ್ದಾರೆ.
ಈ ವಿಷಯದಲ್ಲಿ ನನ್ನನ್ನು ಅನವಶ್ಯಕವಾಗಿ ಕೇಸಿನಲ್ಲಿ ಸಿಕ್ಕಿಸುವ ಸುಳ್ಳು ದೂರು ದಾಖಲಿಸುವ ಪ್ರಯತ್ನ ಮಾಡುತ್ತಿದ್ದು ಹುನ್ನಾರವಿದೆ. ಇದೆ ಕಾರಣದಿಂದ ದೀಪಕ ಪುಂಡಲೀಕ ನಾಯ್ಕ ಮತ್ತು ಈತನ ಪತ್ನಿ ಶೋಭಾ ನಾಯ್ಕ ಅಂಕೋಲಾ ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ಇವರನ್ನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸಿದರೆ ಸತ್ಯಾ ಸತ್ಯತೆ ಬಯಲಿಗೆ ಬರುವ ಸಾಧ್ಯತೆ ಇದೆ ಮತ್ತು ಇವರಿಂದ ನನಗೆ ಜೀವ ಭಯ ಉಂಟಾಗಿದ್ದು ನನ್ನ ಜೀವಕ್ಕೆ ಏನಾದರೂ ಹಾನಿ ಉಂಟಾದಲ್ಲಿ ಇವರೇ ಕಾರಣಿಕರ್ತರು ಎಂದು ಈ ಮೂಲಕ ಸಾರ್ವಜನಿಕರಿಗೆ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಗಳಲ್ಲಿ ವಿನಂತಿ ಇಂದ ತಿಳಿಸುತ್ತಿದ್ದೇನೆ ಮತ್ತು ನನಗೆ ರಕ್ಷಣೆ ಕೊಡಲು ವಿನಂತಿ ಇದೆ. ಮಂಜುನಾಥ ಹೆಗಡೆ, ಬಾಳಗಿಮನೆ, ಯಲ್ಲಾಪುರ






Prathidvani Yellapura