
ಪ್ರತಿಧ್ವನಿ ಯಲ್ಲಾಪುರ : ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣ ಹಾಗು ವಿವಿಧ ಮಾಧ್ಯಮಗಳಲ್ಲಿ ಹುಬ್ಬಳ್ಳಿ- ಅಂಕೋಲ ರೈಲ್ವೆ ಯೋಜನೆಗೆ ಇದ್ದ ಅಡೆತಡೆ ನಿವಾರಣೆಯಾಗಿದ್ದು ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಸುದ್ದಿ ಕೆಲವರಿಗೆ ಸಿಹಿ ಎನಿಸಿದರೆ ಬಹುತೇಕ ಪರಿಸರ ಪ್ರೇಮಿಗಳಿಗೆ ನೋವಾಗಿದೆ ಕಾರಣ ಅಭಿವೃದ್ಧಿ ಹೆಸರಲ್ಲಿ ಸ್ವಚ್ಛಂದ ಕಾಡು ಮತ್ತು ಅದರಲ್ಲಿರುವ ಮೂಕ ಪ್ರಾಣಿಗಳ ಒಕ್ಕಲೆಬ್ಬಿಸುವ ಕಾರ್ಯ ಆಗಲಿದೆ ಎಂಬುದೆ ದುರ್ದೈವದ ಸಂಗತಿಯಾಗಿದೆ ಎಂದು ಸಾಮಾಜೀಕ ಹೋರಾಟಗಾರ ಪರಿಸರ ಪ್ರೇಮಿ ಶಂಶುದ್ದೀನ್ ಮಾರ್ಕರ್ ಪ್ರತಿಧ್ವನಿಗೆ ಮಾಹಿತಿ ನೀಡಿದ್ದಾರೆ.


ಮಾತು ಬರುವ ಮನುಷ್ಯರಾದರೆ ಯೋಜನೆಯನ್ನು ಬಹಿಷ್ಕರಿಸಿ ಪ್ರತಿಭಟಿಸಿ ತಮ್ಮ ಅಳಲನ್ನು ಸರ್ಕಾರಕ್ಕೆ ತಲುಪಿಸುವುದು ಅಥವ ಸಾಕಷ್ಟು ಪರಿಹಾರ ಪಡೆದು ಬೇರೆಡೆಗೆ ಸ್ಥಳಾಂತರಗೊಂಡು ಹೊಸ ಜೀವನ ಪ್ರಾರಂಬಿಸಬಲ್ಲರು ಆದರೆ ಮಾತು ಬರದ ಮೂಕ ಪ್ರಾಣಿಗಳು ಸಹಸ್ರಾರು ವರ್ಷಗಳಿಂದ ಇರುವ ದಟ್ಟ ಕಾನನ ಎಲ್ಲವು ರೈಲ್ವೆ ಯೋಜನೆ ಹೆಸರಲ್ಲಿ ಆಪೋಷಣಗೊಂಡರೆ ಭವಿಷ್ಯದ ಪೀಳಿಗೆ ಚಿತ್ರ ಪಟದಲ್ಲಿ ಪ್ರಾಣಿಗಳನ್ನು ನೋಡಬೇಕಾಗುತ್ತದೆ.

ಹಾಗೆಂದು ಅಭಿವೃದ್ಧಿ ವಿಚಾರದಲ್ಲಿ ನಮ್ಮ ವಿರೋದವಿಲ್ಲ ರೈಲ್ವೆ ಯೋಜನೆಯಿಂದ ಆರ್ಥಿಕ ವಹಿವಾಟು ಹೆಚ್ಚಿ ಒಂದಷ್ಟು ವ್ಯವಹಾರಗಳಲ್ಲಿ ಸಣ್ಣ ಬದಲಾಣೆ ಕಾಣಬಹುದು ಬಿಟ್ಟರೆ ಪರಿಸರದ ನಾಶ ಖಂಡಿತ.

ಈ ಕುರಿತು ತಜ್ಞರು ಮತ್ತಷ್ಟು ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ ಅಥವ ಯೋಜನೆ ತಡೆಯಲು ಸಾದ್ಯವಿಲ್ಲ ಎನ್ನುವುದಾದರೆ ಒಂದೇಒಂದು ಮರ ಕಡಿಯದೆ, ಜಲ ಮೂಲಗಳಿಗೆ ಧಕ್ಕೆಯಾಗದಂತೆ ಹಾಗು ಪ್ರಾಣಿಗಳ ನಿತ್ಯ ಚಟುವಟಿಕೆಗೆ ಸಮಸ್ಯೆ ಆಗದಂತೆ ಅತ್ಯಂತ ಉನ್ನತ ತಂತ್ರಜ್ಞಾನ ಉಪಯೋಗಿಸಿ ಯೋಜನೆ ರೂಪಿಸಬೇಕಿದೆ. ಇಲ್ಲವಾದಲ್ಲಿ ರಾಜ್ಯದಲ್ಲಿ ಒಂದಷ್ಟು ಕಾಡು ಉಳಿದಿರುವ ಕೆಲವೆ ಜಿಲ್ಲೆ ಗಳಲ್ಲಿ ಉತ್ತರ ಕನ್ನಡ ಸಹ ಒಂದು ಆ ಪಟ್ಟ ಯಿಂದಲೇ ಹೊರಗುಳಿದು ಸ್ವಚ್ಚಂದವಾದ ಅರಣ್ಯ ಕಳೆದುಕೊಳ್ಳುವ ಸಾದ್ಯತೆ ಹೆಚ್ಚಿದೆ.

ರಾಜ್ಯದಲ್ಲಿ ಒಂದಷ್ಟು ಅರಣ್ಯ ಹೆಚ್ಚಾಗಿದೆ ಎಂಬುವ ಜಿಲ್ಲೆಗಳಲ್ಲಿ ಉತ್ತರ ಕನ್ನಡವು ಒಂದು ಅದರೆ ಇದೀಗ ರೈಲ್ವೆ ಯೋಜನೆ ಅನುಷ್ಟಾನವಾಗುವ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ನಿಜವೆ ಆದರೆ. ಮೂಕ ಪ್ರಾಣಿಗಳ ಕತೆ ಏನು ಅವನೆಲ್ಲ ಯಾವ ರಾಜಕೀಯ ನೇತಾರರ ಮನೆಗೊ,ಅಧಿಕಾರಿಗಳ ಮನೆಗೆ ಆ ಪ್ರಾಣಿಗಳನ್ನು ತಂದು ಬಿಡುವ ಕಾರ್ಯಮಾಡಬೇಕಿದೆ.
ಶಂಶುದ್ದೀನ್ ಮಾರ್ಕರ್, ಸಾಮಾಜಿಕ ಹೋರಾಟಗಾರ
ಯಲ್ಲಾಪುರ







Prathidvani Yellapura