
ಪ್ರತಿಧ್ವನಿ ಯಲ್ಲಾಪುರ : ಕ್ಷೇತ್ರದಾದ್ಯಂತ ಮಿಂಚಿನ ವೇಗದಲ್ಲಿ ಸೇವಾ ಭಾವದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಕೊಡುಗೈ ದಾನಿ, ಬಿಜೆಪಿ ಯುವ ನಾಯಕ ಬಾಲಕೃಷ್ಣ ನಾಯಕ್ ಕುಡಿಯುವ ನೀರಿನ ದಾಹ ನೀಗಿಸಿ ಗ್ರಾಮೀಣ ಭಾಗದ ಶಾಲೆಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರಿಯಾಗಲು ಶೈಕ್ಷಣಿಕ ಸೇವಾ ಕಾರ್ಯಕ್ಕೆ ಇಳಿದಿದ್ದಾರೆ.


ಕಳೆದ ಕೆಲವು ತಿಂಗಳಲ್ಲಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸ್ವಂತ ಹಣದಲ್ಲಿ ಕೊಳವೆ ಬಾವಿಗಳನ್ನು ಹಾಕಿಸಿ ದಾಹ ನೀಗಿಸಿ ಹೆಸರಾಗಿದ್ದು ಇದೀಗ ಗ್ರಾಮೀಣ ಭಾಗದ ಶಾಲೆಗಳ 2500 ಕ್ಕು ಅಧಿಕ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಬ್ಯಾಗ್, ಪರಿಕರ ವಿತರಿಸುವ ಶೈಕ್ಷಣಿಕ ಯಜ್ಞಕ್ಕೆ ಮುಂದಾಗಿದ್ದು ಅದಕ್ಕಾಗಿ ಬಾಲಕೃಷ್ಣ ನಾಯಕ್ ಅಭಿಮಾನಿ ಬಳಗ ( ಬಾಲು ಬಾಯ್ಸ್ ) ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದು. ನಾಳೆಯ ಸೋಮವಾರದಿಂದ ವಿದ್ಯುಕ್ತವಾಗಿ ಪ್ರಾರಂಭವಾಗಲಿದೆ.






Prathidvani Yellapura