
ಪ್ರತಿಧ್ವನಿ ಯಲ್ಲಾಪುರ : ಇತ್ತೀಚಿನ ಕೆಲ ದಿಗಳ ಹಿಂದೆ ಅಸ್ಸಾಂ ಚುನಾವಣ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಯವರು ಕೋಮು ಪ್ರಚೋದನೆ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಯಲ್ಲಾಪುರ ಬಿಜೆಪಿ ಯುವಮೋರ್ಚಾ ವತಿಯಿಂದ ಯಲ್ಲಾಪುರ ಪೋಲಿಸ್ ಠಾಣೆಗೆ ತೆರಳಿ ಎಫ್.ಐ.ಆರ್ ಹಾಕುವಂತೆ ಆಗ್ರಹಿಸಲಾಯಿತು.


ಕುರಾನ್ ನಲ್ಲಿ ಬರೆದಿರುವಂತೆ ” ನಮಾಝ್ ಮಾಡುವ ವೇಳೆ ವಿಷಸರ್ಪ ಬಂದರೆ ಕೊಲ್ಲಬೇಕು ಆರ್.ಎಸ್.ಎಸ್ ಮತ್ತು ಬಿಜೆಪಿ ಆದೇ ರೀತಿಯ ವಿಷಸರ್ಪಗಳು ಅದನ್ನು ಕೊಲ್ಲಬೇಕು ಎಂಬುದಾಗಿ ಹೇಳುವ ಮೂಲಕ ಬಿಜೆಪಿ ಮತ್ತು ಆರ್ ಎಸ್ ಎಸ್ ಸದಸ್ಯರ ಜೀವಲ್ಕೆ ಅಪಾಯ ತಂದೊಡ್ಡಿದ್ದಾರೆ ಈ ಕುರಿತಾದ ಪ್ರಚೋದನಕಾರಿ ಭಾಷಣ ಮಾಡಿದ ಮೇಲೆ ಪೊಲೀಸರು ಔಪಚಾರಿಕ ದೂರು ದಾಖಲೆಗಾಗಿ ಕಾಯದೆ ಸುಮೊಟೊ ಮೂಲಕ ಎಫ್.ಐ.ಆರ್ ದಾಖಲಿಸಲು ಅವಕಾಶವಿದೆ. ಆದರು ಏಕಿನ್ನು ಎಫ್.ಐ.ಆರ್ ಹಾಕಿಲ್ಲ ಎಂಬುದು ಯುವಮೋರ್ಚ ಪ್ರಶ್ನೆಯಾಗಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಒಂದು ರಾಷ್ಟ್ರೀಯ ಪಕ್ಷದ ಪ್ರಮುಖ ಸ್ಥಾನದಲಿದ್ದು ಇಂತಹ ಕೋಮು ಪ್ರಚೋದನ ಹೇಳಿಕೆ ಸಾಧುವಲ್ಲ. ಇದರಿಂದ ದೇಶದಲ್ಲಿ ಅಶಾಂತಿ ಮನೆ ಮಾಡಲಿದೆ ಈ ಎಲ್ಲಾ ಕಾರಣಗಳಿಂದ ಕ್ರಮ ಜರುಗಿಸಲೇಬೇಕಿದೆ ಎಂದು ಆಗ್ರಹಿಸಿ ಮನವಿ ಪತ್ರವನ್ನು ಯಲ್ಲಾಪುರ ಠಾಣೆಗೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ, ಯುವಮೋರ್ಚ ಅಧ್ಯಕ್ಷ ರಜತ್ ಬದ್ದಿ, ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್,
ಪದಾಧಿಕಾರಿಗಳಾದ ಸೋಮೇಶ್ವರ ನಾಯ್ಕ,ವಿನೋದ ತಳೇಕರ, ರವಿ ದೇವಡಿಗ, ವಿಠ್ಠು ಶೆಲ್ಕೆ,ಹಿರಿಯ ವಕೀಲರಾದ ಗಣೇಶ ಪಾಟಣಕರ, ಅರುಣ ಶೆಟ್ಟಿ,ರಾಜೇಷ ಭಟ್ಟ,ಸುಧೀರ ಆಚಾರಿ,ನಾಗಾರ್ಜುನ ಬದ್ದಿ,ಉದಯ ಮಂಡಗೋಡ್ಲಿ,ವಿಜು ಅಂಕೋಲೆಕರ ಉಪಸ್ಥಿತರಿದ್ದರು.






Prathidvani Yellapura