
ಪ್ರತಿಧ್ವನಿ ಯಲ್ಲಾಪುರ : ಹಲವು ದಶಕಗಳ ಹಿಂದಿನ ಯಲ್ಲಾಪುರದ ಮೂಲ ಕುಟುಂಬಗಳಲ್ಲಿ ಒಂದೆನಿಸಿಕೊಂಡ ಕುದಲೆ ಕುಟುಂಬದ ನಂದಕಿಶೋರ ಕುದಲೆ ಅವರಿಗೆ “ವಿಶ್ವಕರ್ಮ ರಾಷ್ಟ್ರೀಯ ಪ್ರಶಸ್ತಿ ” ಲಭಿಸಿದ್ದು ಕುದಲೆ ಕುಟುಂಬದ ನಿಕಟವರ್ತಿಗಳಿಗೆ ವಿಶೇಷವಾಗಿ ತಿಲಕ್ ಚೌಕ್ ಸಮಸ್ತ ಕುಟುಂಬಗಳಿಗೆ ಸಂತಸ ತಂದಿದೆ.

ರಾಷ್ಟ್ರ ಪ್ರಶಸ್ತಿ ಪಡೆದ ನಂದಕಿಶೋರ ಕುದಲೆ ಹುಟ್ಟಿದ್ದು ಬೆಳೆದಿದ್ದು ಪ್ರಾಥಮಿಕ ಹಾಗು ಪ್ರೌಡ ಶಿಕ್ಷಣ ಪಡೆದದ್ದು ಸಹ ಇದೇ ಯಲ್ಲಾಪುರದ ನೆಲದಲ್ಲೆ. ಕುದಲೆ ಕುಟುಂಬದ ವಿಶೇಷತೆ ಎಂದರೆ ಅವರು ಎಂದಿಗು ಹಿಗ್ಗಲಿಲ್ಲ,ಅಹಂಕಾರ ಪಡಲಿಲ್ಲ ಹುಟ್ಟಿದ ಊರನ್ನು ಎಂದಿಗು ನಿರ್ಲಕ್ಷಿಸಲಿಲ್ಲ ಅದು ಆ ಕುಟುಂಬದ ದೊಡ್ಡತನ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. ನಂದಕಿಶೋರ ಕುದಲೆ ದೇಶದ ಪ್ರತಿಷ್ಠಿತ ಶಿರ್ಕೆ ಅಂಡ್ ಶಿರ್ಕೆ ಕಂಪನಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು ಬೆಳಗಾವಿಯ ಸುವರ್ಣಸೌಧ ಕಟ್ಟಿಸಿದ ಉಸ್ತುವಾರಿ ಪ್ರಮುಖ ಅಭಿಯಂತರರಲ್ಲಿ ನಮ್ಮೂರಿನ ಮಗ ನಂದಕಿಶೋರ ಕುದಲೆ ಸಹ ಒಬ್ಬರು.ಅವರ ನೇತೃತ್ವದಲ್ಲಿ ಹಲವು ದೊಡ್ಡ ದೊಡ್ಡ ನಿರ್ಮಾಣಗಳು ನಡೆದಿದೆ ನಡೆಯುತ್ತಲಿದೆ ಆ ಎಲ್ಲಾ ಶ್ರೇಯದಲ್ಲಿ ನಂದಕಿಶೋರ ಕುದಲೆ ಹೆಸರಿದೆ ಎಂಬುದೆ ಯಲ್ಲಾಪುರಕ್ಕೆ ಹೆಮ್ಮೆ ತರುವ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಶ್ವಕರ್ಮ ಪ್ರಶಸ್ತಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತಿಯಲ್ಲಿ ಪಡೆದು ಅಭಿನಂದನೆಗೆ ಪಾತ್ರರಾಗಿದ್ದಾರೆ.

ನಂದಕಿಶೋರ ಕುದಲೆ ತನ್ನ ಬಳಿಗೆ ಸಹಾಯ ಎಂದು ಬಂದವರಿಗೆ ಇಲ್ಲ ಎನ್ನದೆ ಕೈಲಾದ ಸಹಾಯ ಮಾಡುತ್ತಲೆ ಜನಮಾನಸದಲ್ಲಿ ಹೆಸರಾದ ಅತ್ಯಂತ ಹೆಮ್ಮೆಯ ಸಂಗತಿ
ಹುಟ್ಟೂರಿನ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಇಂದಿಗು ಹಲವು ಬಡ ಮತ್ತು ಪ್ರತಭಾವಂತ ಯಲ್ಲಾಪುರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ, ಧಾರ್ಮಿಕ ಸೇವೆಯಲ್ಲಿಯು ಮುಂದಿರುವ ಕುದಲೆ ಕುಟುಂಬ ದೇವಸ್ಥಾನಗಳಿಗೆ ತಮ್ಮಿಂದಾದ ಆರ್ಥಿಕ ದೇಣಿಗೆ ನೀಡುತ್ತಾ ಬಂದಿದ್ದಾರೆ, ವಿಶೇಷವಾಗಿ ತಿಲಕ್ ಚೌಕ್ ಸಭಾಭವನಕ್ಕೆ ಹೆಚ್ಚಿನ ಧನಸಹಾಯ ನೀಡಿದ ಕುಟುಂಬ ಎಂದರೆ ಕುದಲೆ ಕುಟುಂಬ, ಪುರಾತನ ಈಶ್ವರ ದೇವಸ್ಥಾನಕ್ಕೆ ನಂದಿ ವಿಗ್ರಹ ನೀಡಿ ಭಕ್ತಿ ಸಮರ್ಪಿಸಿದ್ದಾರೆ, ಬಹು ಮುಖ್ಯವಾಗಿ ಯಲ್ಲಾಪುರದ ಗ್ರಾಮದೇವಿಯರಿಗೆ ಅರ್ಪಿಸಿದ ಬಂಗಾರದ ಕಿರೀಟಕ್ಕೆ ಹೆಚ್ಚಿನ ಬಂಗಾರ ನೀಡಿ ಯಲ್ಲಾಪುರ ಜನತೆಯ ಹೃದಯ ಗೆದ್ದಿದ್ದಾರೆ ಬಹಳ ಅಪರೂಪದ ವ್ಯಕ್ತಿತ್ವದ ಕುದಲೆ ಕುಟುಂಬದ ಎಲ್ಲಾ ಸದಸ್ಯರು ಯಲ್ಲಾಪುರದ ಜನಮಾನಸದಲ್ಲಿ ಉನ್ನತ ಸ್ಥಾನ ಸಂಪಾದಿಸಿದ್ದಾರೆ. ಎಂದಿಗು ಅಂತಸ್ತಿನ ಅಹಂ ಅವರನ್ನು ಹಾಳು ಮಾಡಲಿಲ್ಲ ಮತ್ತು ಬಲಗೈಯಲ್ಲಿ ಮಾಡುದ ದಾನ ಎಡಗೈಗು ತಿಳಿಯದಂತೆ ಎಲೆಮರೆಕಾಯಿಯಂತೆ ಉಳಿದರೆ ವಿನಹಃ ಎಲ್ಲಿಯು ಪ್ರಚಾರ ಪಡೆಯಲಿಲ್ಲ ಅಂತಹ ಮೇರು ಕುಟುಂಬ ಕುದಲೆ ಕುಟುಂಬ ಅಂತಹ ಕುಟುಂಬದ ನಂದಕಿಶೋರ ಕುದಲೆ ರಾಷ್ಟ್ರ ಪ್ರಶಸ್ತಿ ಗಳಿಸಿದ ಹಿನ್ನೆಲೆಯಲ್ಲಿ ಯಲ್ಲಾಪುರದ ಸಮಸ್ತ ಕುಟುಂಬಗಳು ಶುಭಕೋರಿದ್ದು ತಾಯಿ ಗ್ರಾಮದೇವಿಯ ಅನುಗ್ರಹ ಸದಾ ಅವರಿಗಿರಲಿ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಲಿ ರಾಷ್ಟ್ರ ಮಟ್ಟದಲ್ಲಿ ಯಲ್ಲಾಪುರದ ಹೆಸರು ಚಿರಸ್ಥಾಯಿಯಾಗಿಸಲಿ ಎಂದು ಅಭಿನಂದಿಸಿದ್ದಾರೆ..







Prathidvani Yellapura