
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಟಗಾರ್ ಕ್ರಾಸ್ ಸಮೀಪ ಸುನಿಲ್ ಯಲ್ಲಾಪುರಕರ್ ಎಂಬುವರ ಮನೆಯಲ್ಲಿ ನಾಗರ ಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ಲಭಿಸುತ್ತಲೆ ಅರಣ್ಯ ಇಲಾಖೆ ಸಿಬ್ಬಂದಿ ಪ್ರಶಾಂತ್ ಎಂಬುವರು ಆಗಮಿಸಿ ನಾಗರಹಾವನ್ನು ಹಿಡಿದು ರಕ್ಷಿಸಿ ಅರಣ್ಯದೊಳಗೆ ಜಾಗ್ರತೆಯಿಂದ ಬಿಟ್ಟರು.
ಆತಂಕಗೊಂಡಿದ್ದ ಸುನಿಲ್ ಯಲ್ಲಾಪುರಕರ್ ಕುಟುಂಬದವರು ತಕ್ಷಣ ಸ್ಪಂದಿಸಿ ಆತಂಕ ದೂರ ಮಾಡಿದ ಅರಣ್ಯ ಇಲಾಖೆಗು ವಿಶೇಷವಾಗಿ ಸಿಬ್ಬಂದಿ ಪ್ರಶಾಂತ ಅವರಿಗು ಕೃತಜ್ಞತೆ ಸಲ್ಲಿಸಿದರು.














Prathidvani Yellapura