
ಪ್ರತಿಧ್ವನಿ ಯಲ್ಲಾಪುರ : ಸದಾ ಇಲಾಖೆಯ ಜಂಜಾಟದ ನಡುವೆ ಬಿಡುವು ಸಿಗುವುದೇ ಕಡಿಮೆ ಅದು ಸಹ ಕುಟುಂಬದ ಕೆಲಸಕ್ಕೆ ಮೀಸಲಿಡಬೇಕು ಆದರೆ ಇಲ್ಲೊಬ್ಬ ಬಿಡುವಿಲ್ಲದ ಸರ್ಕಾರಿ ಕೆಲಸದ ನಡುವೆಯು ಬಹು ವರ್ಷಗಳಿಂದ ತಮ್ಮ ಕೈಯ್ಯಾರೆ ಗಣಪನನ್ನು ತಯಾರಿಸಿ ಪ್ರತಿಷ್ಟಾಪಸಿ ಪೂಜಿಸಿಕೊಂಡು ಬರುತ್ತಿದ್ದು ಈ ಬಾರಿ ನವಿಲಿನ ಮೇಲೆ ಕುಳಿತ ಗಣಪತಿಯನ್ನು ಮುದ್ದಾಗಿ ತಯಾರಿಸಿದ್ದಾರೆ ಡಾ,ನರೇಂದ್ರ ಪವಾರ್.

ಡಾ,ನರೇಂದ್ರ ಪವಾರ್ ಮೂಲತಃ ಶಿರಸಿಯವರಾಗಿದ್ದು ಯಲ್ಲಾಪುರ ತಾಲೂಕು ಆರೋಗ್ಯಾಧಿಕಾರಿಯಾಗಿ ಮತ್ತು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಯಾಗಿ ಕ್ರಿಯಾಶೀಲರಾಗಿ ಸೇವೆ ಸಲ್ಲಿಸುತ್ತ ತಾಲೂಕಿನ ಮನೆ ಮಾತಾಗಿರುವ ಜನಸ್ನೇಹಿ ಸರ್ಕಾರಿ ಅಧಿಕಾರಿಯಾಗಿದ್ದಾರೆ.

ಇಂತಹ ಉನ್ನತ ಹುದ್ದೆ,ಬಿಡುವಿಲ್ಲದ ಕೆಲಸ, ಅತ್ಯಂತ ಹೆಚ್ಚಿನ ಜವಾಬ್ದಾರಿ ಹೊತ್ತ ಕೆಲಸವಾಗಿದ್ದರು ಅವರಲ್ಲಿ ಅಡಗಿರುವ ಬಾಲ ಪ್ರವೃತ್ತಿ ಸುಪ್ತ ಪ್ರತಿಭೆ ಗಣಪತಿ ತಯಾರಿಸುವ ಕಲೆ ಅಳಿಸಲು ಸಾದ್ಯವಾಗದೆ ಪ್ರತಿ ವರ್ಷ ತಾವೆ ಗಣಪತಿ ತಯಾರಿಸಿ ಶ್ರದ್ದಾ ಭಕ್ತಿಯಿಂದ ಪೂಜಿಸಿ ಕುಟುಂಬ ಸಹಿತರಾಗಿ ಸಂತಸಪಡುತ್ತಾರೆ.





















Prathidvani Yellapura