Breaking News

ಯಲ್ಲಾಪುರ ಕಟ್ಟಿಗೆ ಡಿಪೋ ಸಾರ್ವಜನಿಕ ಗಜಾನನೋತ್ಸವ ಸಮಿತಿ ಆವಾರದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮ ಆಯೋಜನೆ.


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಟ್ಟಿಗೆ ಡಿಪೋ “ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮಿತಿ ” ಆವಾರದಲ್ಲಿ ಪ್ರಸಕ್ತ ವರ್ಷ ಚೌತಿ ಗಣಪತಿಯ ಧಾರ್ಮಿಕ ಆರಾಧನೆಯೊಂದಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆಗೊಂಡಿದೆ ಸಾರ್ವಜನಿಕರು ಭಾಗವಹಿಸಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಗಳಿಸಬಹುದಾಗಿದೆ.
ದಿನಾಂಕ 18-9-26 ರಂದು ಶುಕ್ರವಾರ ಸಂಜೆ 6-30 ಕ್ಕೆ ಸಮಿತಿ ಆವಾರದಲ್ಲಿ “ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ” ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದೆ.


ಸ್ಪರ್ಧಾ ವಿವರ.
ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆಸಲಾಗುತ್ತಿದ್ದು ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ನಡೆಯಲಿದೆ. 4 ರಿಂದ 10 ವರ್ಷ ವಯೋಮಿತಿ ಕಿರಿಯರ ವಿಭಾಗ 11 ರಿಂದ 21 ವಯೋಮಿತಿ ಹಿರಿಯರ ವಿಭಾಗ
ನಿಯಮಗಳು.
⏺ ಸ್ಪರ್ಧೆಯು ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳಿಗೆ ಮಾತ್ರ ಸೀಮಿತವಾಗಿರಬೇಕು.
⏺ ಪ್ರತಿ ಸ್ಪರ್ಧಿಗೆ 2 ನಿಮಿಷಗಳ ಕಾಲಾವಕಾಶ ಮಾತ್ರ.
⏺ ಅಪಾಯಕಾರಿ ಮತ್ತು ಹಾನಿಕಾರಕ ವಸ್ತುಗಳನ್ನು ಬಳಸುವಂತಿಲ್ಲ.
⏺ ತೀರ್ಪುಗಾರರ ತೀರ್ಮಾನವೆ ಅಂತಿಮ.
ಹಿರಿಯರ ಮತ್ತು ಕಿರಿಯರ ವಿಭಾಗಕ್ಕೆ ಪ್ರತ್ಯೇಕವಾಗಿ
ಪ್ರಥಮ ಬಹುಮಾನ – 3000
ದ್ವಿತೀಯ ಬಹುಮಾನ – 2000
ತೃತೀಯ ಬಹುಮಾನ – 1000 ನಗದು ಬಹುಮಾನ ನೀಡಲಾಗುವುದು.


ಸಂಜೆ 7-30 ಕ್ಕೆ ಯಲ್ಲಾಪುರದ ಭಾರತಿ ನೃತ್ಯ ಕಲಾ ಕೇಂದ್ರದ ಸುಮ ವೆಂಕಟರಮಣ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.
ದಿನಾಂಕ 19-9-26 ರಂದು ಶನಿವಾರ ಸಂಜೆ 6-30 ಕ್ಕೆ ಸಮಿತಿ ಆವಾರದಲ್ಲಿ “ವೈಯಕ್ತಿಕ ಕನ್ನಡ ಚಲನಚಿತ್ರ ಗೀತೆಗೆ ನೃತ್ಯ ಸ್ಪರ್ಧೆ” ಏರ್ಪಡಿಸಲಾಗಿದೆ.
ಸ್ಪರ್ಧಾ ವಿವರ.
ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆಸಲಾಗುತ್ತಿದ್ದು ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ನಡೆಯಲಿದೆ. 6 ರಿಂದ 14 ವರ್ಷ ವಯೋಮಿತಿ ಕಿರಿಯರ ವಿಭಾಗ 15 ರಿಂದ 21ವರ್ಷ ವಯೋಮಿತಿ ಹಿರಿಯರ ವಿಭಾಗ.


ನಿಯಮಗಳು.
⏺ ಪ್ರತಿಯೊಬ್ಬ ಸ್ಪರ್ಧಿಯು ಒಬ್ಬರೆ ನೃತ್ಯ ಪ್ರದರ್ಶಿಸಬೇಕು.
⏺ ಕನ್ನಡ ಚಲನ ಚಿತ್ರಗೀತೆಗಳಿಗೆ ಮಾತ್ರ ಅವಕಾಶ.
⏺ ನೃತ್ಯಕ್ಕೆ ಗರಿಷ್ಟ 5 ನಿಮಿಷಗಳ ಕಾಲಾವಕಾಶ.
⏺ ಅಶ್ಲೀಲ ಅಥವಾ ಆಕ್ಷೇಪಾರ್ಹ ಗೀತೆಗಳ ನೃತ್ಯಕ್ಕೆ ಅವಕಾಶವಿಲ್ಲ.
⏺ ನೃತ್ಯದ ಕೌಶಲ್ಯ,ಲಯ,ಹಾವಭಾವ,ವೇಷಭೂಷಣ ಮತ್ತು ವೇದಿಕೆ ನಿರ್ವಣೆಯ ಆಧಾರದ ಮೇಲೆ ತೀರ್ಪು ನೀಡಲಾಗುವುದು.
⏺ ತೀರ್ಪುಗಾರರ ತೀರ್ಮಾನವೆ ಅಂತಿಮ.
ಹಿರಿಯರ ಮತ್ತು ಕಿರಿಯರ ವಿಭಾಗಕ್ಕೆ ಪ್ರತ್ಯೇಕವಾಗಿ
ಪ್ರಥಮ ಬಹುಮಾನ – 5001
ದ್ವಿತೀಯ ಬಹುಮಾನ -3001
ತೃತೀಯ ಬಹುಮಾನ – 2001 ನೀಡಲಾಗುವುದು.
ಮೇಲಿನ ಎಲ್ಲಾ ಸ್ಪರ್ಧೆಗಳನ್ನು ಶ್ರೀಮತಿ ಜ್ಯೋತಿ ಸಂತೋಷ್ ನಾಯ್ಕ್ ನಿರ್ವಹಿಸುತ್ತಿದ್ದು ಸ್ಪರ್ಧಿಗಳು ತಮ್ಮ ಹೆಸರನ್ನು ಇವರ ಬಳಿಯಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ.
ಸಂಪರ್ಕ ಸಂಖ್ಯೆ.
7892236019-7019900957
ಕರೆಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ವಿ.ಸೂ-ಪ್ರತಿ ಸ್ಪರ್ಧೆಗು 50 ರುಪಾಯಿ ಪ್ರವೇಶ ಶುಲ್ಕ ನಿಗಧಿಪಡಿಸಲಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *