
ಪ್ರತಿಧ್ವನಿ ಯಲ್ಲಾಪುರ : ನಿವೃತ್ತ ಶಿಕ್ಷಕಿ, ಶಿಕ್ಷಣಾಭಿಮಾನಿ ಹಾಗೂ ಸಮಾಜಮುಖಿ ವ್ಯಕ್ತಿತ್ವದ ತಾಲೂಕಿನ ಮಂಚಿಕೇರೆ ಬಳಿಯ ಕುಂಬ್ರಿಗುಡ್ಡೆಯ ಭಾಗೀರಥಿ ಜನಾರ್ದನ ಹೆಗಡೆ (82) ಅವರು ಭಾನುವಾರ ನಿಧನರಾಗಿದ್ದಾರೆ.

ಮುಂಡಗೇಸರ, ಕಳಚೆ, ತೋಳಗೋಡ, ಹಾಸಣಗಿ, ಕೋಸಗುಳಿಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ವಿಶೇಷ ಆದ್ಯತೆ ನೀಡಿ ಜನಪ್ರಿಯತೆ ಗಳಿಸಿದ್ದರು. ಮೃತ ಭಾಗೀರಥಿ ಹೆಗಡೆ ಅವರು ತಮ್ಮ ಸಾವಿನಲ್ಲಿಯು ಸಾರ್ಥಕತೆ ತೋರಿದ್ದು ಸಾವಿರಾರು ವಿದ್ಯಾರ್ಥಿಗಳ ಉತ್ತಮ ಬೆಳವಣಿಗೆಯನ್ನು ಕಂಡ ತಮ್ಮ ಕಣ್ಣುಗಳನ್ನು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಮೃತರು ಪುತ್ರ, ಪುತ್ರಿ ಅಪಾರ ಬಂಧು ಬಳಗನ್ನು ಅಗಲಿದ್ದಾರೆ.
Prathidvani Yellapura