Breaking News

ಯಲ್ಲಾಪುರ ತಾಲೂಕಿನ ಕಿರವತ್ತಿ ಸರ್ಕಾರಿ ಟಿಂಬರ್ ಡಿಪೋದಲ್ಲಿ ಟಿಂಬರ್ ಹರಾಜು.

ಪ್ರತಿಧ್ವನಿ ಯಲ್ಲಾಪುರ : ಗುಣಮಟ್ಟದ ಟಿಂಬರ್ ಗೆ ರಾಜ್ಯದಲ್ಲೆ ಪ್ರಖ್ಯಾತಿ ಪಡೆದ ತಾಲ್ಲೂಕಿನ ಕಿರವತ್ತಿ ಟಿಂಬರ್ ಡಿಪೋ ದಲ್ಲಿ ಪ್ರಸಕ್ತ ಸಾಲಿನ ಟಿಂಬರ್ ಹರಾಜು ಪ್ರಕ್ರಿಯೆಯನ್ನು ಆಗಸ್ಟ್ 1, 3 ಹಾಗೂ 4 ರಂದು ನಡೆಯಲಿದೆ ಎಂದು ಪತ್ರಿಕೆ ಪ್ರಕಟಣೆ ಮೂಲಕ ತಿಳಿದು ಬಂದಿದೆ.


ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ MSTC ಇ-ಹರಾಜು ವ್ಯವಸ್ಥೆಯ ಮೂಲಕ ಭಾಗವಹಿಸಿ ಗುಣಮಟ್ಟದ ಟಿಂಬರ್ ಖರೀದಿಸಬಹುದಾಗಿದೆ.

ಸಾಗಾ (Teak) ,ಸೀಸಂ,ಕಿಂದಳ ಕಲಂ , ಹೆದ್ದಿ , ನಂದಿ ,ಜಂಗ್ಲಿಸಾಫ್ಟ್
ಜಂಗ್ಲಿ ಹಾರ್ಡ್ , ಅಕೇಶಿಯಾ , ಜಂಬಾ ,ನೇರಳೆ ,ಕರಿಮತ್ತಿ ದಿಮ್ಮೆಗಳು ,ಎಳೆ ಬಿಲ್ಲೆಟ್ಸ್ , ಜಲಾವು ಹಾಗು ಇತರೆ ಮರಗಳು ಹರಾಜಿನಲ್ಲಿ ಲಭ್ಯವಿರಲಿದೆ.

🔗 ಇ-ಹರಾಜು ಪೋರ್ಟಲ್:
MSTC ಕರ್ನಾಟಕ ಅರಣ್ಯ ಇಲಾಖೆ ಇ-ಹರಾಜು

📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಡಿಪೋ ಅಧಿಕಾರಿ: 9449574286
ಡಿಪೋ ಅಧಿಕಾರಿ: 9741887022
ಕಚೇರಿ: 08419-238534

“ಗುಣಮಟ್ಟದ ಟಿಂಬರ್ ಖರೀದಿಸಲು ಇದು ಉತ್ತಮ ಅವಕಾಶ. ಆಸಕ್ತರು ಸಮಯಕ್ಕೆ ಸರಿಯಾಗಿ ನೋಂದಾಯಿಸಿಕೊಂಡು ಹರಾಜಿನಲ್ಲಿ ಭಾಗವಹಿಸಿ.” ಎಂದು ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕು “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್,ಕಾರ್ಯದರ್ಶಿಯಾಗಿ ಗಣೇಶ್ ಪತ್ತಾರ್ ಆಯ್ಕೆ

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ …

Leave a Reply

Your email address will not be published. Required fields are marked *