Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಕೆ.ಎಸ್.ಈಶ್ವರಪ್ಪನವರದ್ದು ಮಾನಸಿಕ ಸ್ಥಿಮಿತ ಕಳೆದುಕೊಂಡ ಹೇಳಿಕೆಯಾಗಿದೆ – ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ, ವಿವಾದಾತ್ಮಕ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣ ರಾಜಕೀಯ ದಿವಾಳಿತನಕ್ಕೆ ತಲುಪಿರುವುದು ಅವರ ಇತ್ತೀಚಿನ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ ಹಾಯ ಅವರು ತಮ್ಮ ಮಾನಸಿಕ ಸಿಮೀತವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಅವರನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎಂದು ಶಾಸಕ ಶಿವರಾಮ್ ಹೆಬ್ಬಾರ್ ಅವರು ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು 17 ಕಾಂಗ್ರೆಸ್ ಶಾಸಕರನ್ನು …

Read More »

Infuenza A ( H1 N1) ವೈರಲ್ ಜ್ವರಕ್ಕೆ ಯಲ್ಲಾಪುರ ತಾಲ್ಲೂಕಿನಲ್ಲಿ ಮೊದಲ ಬಲಿ.!!

ಪ್ರತಿಧ್ವನಿ ಯಲ್ಲಾಪುರ :  ತಾಲೂಕಿನ ಚವತಿ ಗ್ರಾಮದ ನಿವಾಸಿಯಾಗಿದ್ದ 41 ವರ್ಷದ ಪುರುಷ, ಇವರಿಗೆ ದಿನಾಂಕ 17-06-2026 ರಂದು Infuenza A ವೈರಲ್ ಜ್ವರ/ ಶೀತ ಜ್ವರ/ ಫ್ಲೂ ಎಂದು ಖಚಿತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 21-06-2026 ಮರಣ ಹೊಂದಿರುತ್ತಾರೆ. ಇವರು ದಿನಾಂಕ 10-06-2026 ರಂದು ಜ್ವರ ಕಾಣಿಸಿಕೊಂಡ ಕಾರಣ ಉಮ್ಮಚಗಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿರುತ್ತಾರೆ ಮತ್ತೆ 12-06-2026 ಜ್ವರ ಕಾಣಿಸಿಕೊಂಡ ಕಾರಣ ಮಂಚಿಕೆರಿ ಖಾಸಗಿ …

Read More »

ಭರಣಿ ಶ್ರೀ ಕಾಶಿ ವಿಶ್ವನಾಥ ಮಂದಿರದಲ್ಲಿ ಜೂ, 22 ಸೋಮವಾರ   ವಿಶೇಷ ಪೂಜೆ ಅನ್ನಸಂತರ್ಪಣೆ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಶಿವ ಶಕ್ತಿ ಪೀಠಗಳಲ್ಲಿ ಒಂದಾದ ” ಭರಣಿ ಶ್ರೀ ಕಾಶಿ ವಿಶ್ವನಾಥ ” ದೇಗುಲದಲ್ಲಿ ದಿನಾಂಕ 22 ರ ಸೋಮವಾರ ಸತ್ಸಂಗ ಭಜನೆ ವಿಶೇಷ ಪೂಜೆ ಹಾಗು ಅನ್ನ ಸಂತರ್ಪಣೆ ನೆರವೇರುತ್ತಿದ್ದು ಶ್ರೀಮತಿ ಲತಾ ಮತ್ತು ಶ್ರೀ ಸಂತೋಷ ಎನ್ ನಾಯ್ಕ ತೋಟಗದ್ದೆ ಇವರ ಸೇವಾರ್ಥದಲ್ಲಿ ಜರುಗಲಿದೆ. ಸಂಜೆ 7-30 ರಿಂದ ಶ್ರೀ ಕಾಶಿ ವಿಶ್ವನಾಥ ಭಜನಾ ಮಂಡಳಿ ಭರಣಿ ಇವರಿಂದ ಭಜನೆ ನೆಡೆಯಲಿದೆ …

Read More »

ಸಮಾಜಮುಖಿ ಚಿಂತನೆಯ ನಾಯಕ  “ಪ್ರಸಾದ್ ಪ್ರಮೋದ್ ಹೆಗಡೆ ” ಹುಟ್ಟು ಹಬ್ಬದ ಶುಭಾಶಯಗಳು.

ಪ್ರತಿಧ್ವನಿ ಯಲ್ಲಾಪುರ : ಸಂಕಲ್ಪ ಉತ್ಸವದ ಯುವ ರೂವಾರಿ, ಸಮಾಜಮುಖಿ ಚಿಂತನೆಯ ನಾಯಕ, ನಗುಮುಖದ ಸ್ನೇಹಜೀವಿ ಪ್ರಸಾದ ಪ್ರಮೋದ ಹೆಗಡೆ ಅವರಿಗೆ ಜನ್ಮದಿನದ ಶುಭಾಶಯಗಳು. ಜನಸೇವೆಯೇ ನಿಮ್ಮ ಜೀವನದ ಧ್ಯೇಯವಾಗಲಿ. ಭಗವಂತ ನಿಮಗೆ ಉತ್ತರೋತ್ತರ ಅಭಿವೃದ್ಧಿ ಹಾಗೂ ಉತ್ತಮ ಆರೋಗ್ಯವನ್ನು ಕರುಣಿಸಲಿ. ನಿಮ್ಮ ಸೇವಾ ಕಾರ್ಯಗಳು ಸಮಾಜಕ್ಕೆ ನಿರಂತರ ಸ್ಫೂರ್ತಿಯಾಗಲಿ..

Read More »

ಮಕ್ಕಳಿಗೆ ಕಾನೂನು ಜಾಗೃತಿ ಯಲ್ಲಾಪುರ ಠಾಣೆ ಮೆಟ್ಟಿಲು ಹತ್ತಿದ ಸಬಗೆರಿ ಶಾಲೆ ವಿದ್ಯಾರ್ಥಿಗಳು.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪೊಲೀಸ್ ಠಾಣೆಗೆ ಸಬಗೇರಿ ಜಡ್ಡಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ದಂಡು ಬೇಟಿ ನೀಡಿ ಕಾನೂನಿನ ಕೆಲವು ಪ್ರಮುಖ ವಿಚಾರಗಳನ್ನು ತಿಳಿದುಕೊಂಡರು. ಮಂಗಳವಾರದಂದು  ತೆರೆದ ಮನೆ ಸಲುವಾಗಿ ಯಲ್ಲಾಪುರ ಪಟ್ಟಣದ ಸಬಗೇರಿ ಜಡ್ಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳನ್ನು ಠಾಣೆಗೆ ಕರೆತಂದು ಮಕ್ಕಳಿಗೆ ” ಪೊಕ್ಸೊ ಕಾಯ್ದೆ, 112 ತುರ್ತು ಕರೆ, ಮಾದಕ ದ್ರವ್ಯಗಳ ದುಷ್ಪರಿಣಾಮ, ಸೈಬರ್ ಅಪರಾಧಗಳು, ಸಂಚಾರಿ ನಿಯಮಗಳ ಪಾಲನೆ ಬಗ್ಗೆ …

Read More »

ಯಲ್ಲಾಪುರ ಹೆಸ್ಕಾಂ ಎದುರು ಸಾಮಾಜಿಕ ಕಾರ್ಯಕರ್ತ ತಾರನಾಥ್ ನಾಯ್ಕ್ ಮತ್ತು ತಂಡದಿಂದ ದಿಡೀರ್ ಪ್ರತಿಭಟನೆ.

ಪ್ರತಿಧ್ವನಿ ಯಲ್ಲಾಪುರ :  ಪಟ್ಟಣದ ಹೆಸ್ಕಾಂ ಕಚೇರಿ ಎದುರು ಸಾಮಾಜಿಕ ಕಾರ್ಯಕರ್ತ ತಾರಾನಾಥ ನಾಯ್ಕ್ ನೇತೃತ್ವದಲ್ಲಿ ಅಂಬೇಡ್ಕರ್ ಪರ್ವ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ವಿನಾಯಕ ಬೋವಿ ವಡ್ಡರ್, ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಪ್ರಮುಖ ಶಂಶುದ್ದೀನ್ ಮಾರ್ಕರ್, ಯೋಗೇಶ್ ನಾಯ್ಕ್ ದಿಡೀರ್ ಪ್ರತಿಭಟನೆ ನಡೆಸಿ ಸಾರ್ವಜನಿಕ ಸ್ವತ್ತಾದ ವಿದ್ಯುತ್ ಸರಬರಾಜು ಕಂಬಗಳ ಮೇಲೆ ಅನಧಿಕೃತವಾಗಿ ಹಾಕಿರುವ ಆಪ್ಟಿಕ್ ಫೈಬರ್ ಕೇಬಲ್ ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದರು. ಪಟ್ಟಣ ಸೇರಿದಂತೆ ತಾಲ್ಲೂಕಿನ …

Read More »

ಅಪ್ರಾಪ್ತರ ಬೈಕ್ ಚಾಲನೆಗೆ ಬಿಸಿ ಮುಟ್ಟಿಸುತ್ತಿದೆ ಯಲ್ಲಾಪುರ ಪೊಲೀಸ್ ಇಲಾಖೆ.

ಪ್ರತಿಧ್ವನಿ ಯಲ್ಲಾಪುರ : ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್ ಚಲಾಯಿಸುವ ಹುಚ್ಚಿಗೆ ಯಲ್ಲಾಪುರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದ್ದು ಮತ್ತೆ ಮೂವರು ಬೈಕ್ ಮಾಲಿಕರ ಮೇಲೆ ಪ್ರಕರಣ ದಾಖಲಿಸಿ ಬರೋಬ್ಬರಿ 65 ಸಾವಿರ ದಂಢ ಕಟ್ಟಿಸಿದ್ದಾರೆ. ದಂಡ ವಿಧಿಸಿದ ಮಾನ್ಯ ನ್ಯಾಯಾಲಯ :         18 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಿಗೆ ದ್ವಿ ಚಕ್ರ ವಾಹನ ಚಾಲನೆಗೆ ನೀಡಿದ ಮಾಲೀಕರಿಗೆ 199(A) indian motor vehicle act ಅಡಿ 3 ಜನ ವಾಹನ …

Read More »

ಯಲ್ಲಾಪುರ ಬಸ್ ನಿಲ್ದಾಣದ ಎಜುಕೇಶನ್ ಸ್ಪಾಟ್ ನಲ್ಲಿ “ಅಬಾಕಸ್ ಕ್ಲಾಸ್ ಪ್ರಾರಂಭೋತ್ಸವ “

ಪ್ರತಿಧ್ವನಿ ಯಲ್ಲಾಪುರ : ನಿಮ್ಮ ಮಕ್ಕಳ ಬುದ್ದಿ ಚುರುಕಾಗಿಸಲು ಶೈಕ್ಷಣಿಕ ಚಟುವಟಿಕೆಯಲ್ಲಿ ಉನ್ನತ ಸ್ಥಾನಕ್ಕೇರಲು “ಅಬಾಕಸ್” ಸಂಪೂರ್ಣ ಸಹಕಾರಿಯಾಗಿದ್ದು 2026-27 ನೆ ಶೈಕ್ಷಣಿಕ ವರ್ಷದ ಕ್ಲಾಸಸ್ ಪ್ರಾರಂಭಗೊಂಡಿದೆ. ಕಳೆದ ಹಲವು ವರ್ಷಗಳಿಂದ ಅಬಾಕಸ್ ಕ್ಷೇತ್ರದಲ್ಲಿ ಉತ್ತಮ ಹೆಸರಾಗಿ ನೂರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟು ಹೆಸರಾದ ” ಪ್ರೊಪಾಥ್ ಅಕಾಡೆಮಿ ” ಯಲ್ಲಾಪುರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮಹಡಿಯ ಮೇಲೆ ಶುಭಾರಂಭಗೊಂಡಿದೆ. “ಪ್ರೊಪಾಥ್ ಅಕಾಡೆಮಿ ಕೋ-ಡೈರೆಕ್ಟರ್ …

Read More »

ಕಿರಾಣಿ ಅಂಗಡಿ ಕುಟುಂಬದ ಮೇಲೆ ದೌರ್ಜನ್ಯ ಜೀವ ಬೆದರಿಕೆ ಹುಣಶೆಟ್ಟಿ ಕೊಪ್ಪದಲ್ಲಿ ನಡೆದ ಘಟನೆ- ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲು.

ಪ್ರತಿಧ್ವನಿ ಯಲ್ಲಾಪುರ – ತಾಲ್ಲೂಕಿನ ಹುಣಶೆಟ್ಟಿಕೊಪ್ಪದಲೊಂದು ನಡೆದ ದೌರ್ಜನ್ಯ ಪ್ರಕರಣ ಯಲ್ಲಾಪುರ ಠಾಣೆ ಮೆಟ್ಟಿಲೇರಿದ್ದು 15 ಜನರ ಮೇಲೆ ದೂರು ದಾಖಲಾಗಿದೆ.ಘಟನೆ ವಿವರ – ಹುಣಶೆಟ್ಟಿಕೊಪ್ಪ ಗ್ರಾಮದ ನಿವಾಸಿ ಚಂದ್ರಕಾಂತ ನಾರಾಯಣ ತಿನೇಕರ್ ಎಂಬುವರು ಮಡದಿ ಮಕ್ಕಳೊಂದಿಗೆ ಕಿರಾಣಿ ಅಂಗಡಿ ನಟಡಸುತ್ತಾ ಜೀವನ ಸಾಗಿಸುತ್ತಿದ್ದು ಕಳೆದರಾತ್ರಿ ದಿಡೀರನೆ ಸ್ಥಳೀಯರ ಗುಂಪೊಂದು ಅಂಗಡಿ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಪಿರ್ಯಾದಿ ಹೆಂಡತಿ ಕೆನ್ನೆಗೆ ಹೊಡೆದು ಆತನ ಮಗನ ಮೇಲು ಹಲ್ಲೆ …

Read More »

ರಾಜ್ಯದಲ್ಲಿ ವಿದ್ಯುತ್ ವಿತರಣೆ ಕಾರ್ಯ ಟಾಟಾ ಪವರ್ ಗೆ ನೀಡುವ ಹುನ್ನಾರ – ಯಲ್ಲಾಪುರ ಹೆಸ್ಕಾಂನಿಂದ ಪ್ರತಿಭಟನೆ

ಪ್ರತಿಧ್ವನಿ ಯಲ್ಲಾಪುರ : ವಿದ್ಯುತ್ ವಿತರಣೆಯನ್ನು ಟಾಟಾ ಪವರ್ ಕಂಪನಿಗೆ ನೀಡುವುದನ್ನು ವಿರೋಧಿಸಿ ಪಟ್ಟಣದ ಹೆಸ್ಕಾಂ ಉಪ ವಿಭಾಗದಲ್ಲಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಹಾಗೂ ಹೆಸ್ಕಾಂ ಸಿಬ್ಬಂದ್ದಿಗಳು ಪ್ರತಿಭಟನೆ ನಡೆಸಿದರು. ಸರಕಾರದ ನಿಲುವಿನಿಂದಾಗಿ ವಿದ್ಯುತ್ ಗುತ್ತಿಗೆದಾರರಿಗೂ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ತೊಂದರೆ ಯಾಗಿ ನಿರುದ್ಯೋಗಿಗಳಾಗುತ್ತಾರೆ. ವಿದ್ಯುತ್ ಕಂಪನಿಗಳ ಅಸ್ತಿತ್ವ, ಹಿತರಕ್ಷಣೆ, ನೌಕರ ಭವಿಷ್ಯದ ದೃಷ್ಟಿಯಿಂದ ಕಾರ್ಮಿಕರ ಉದ್ಯೋಗ ಭದ್ರತೆ, ಗ್ರಾಮೀಣ ಗ್ರಾಹಕರ ಹಿತರಕ್ಷಣೆಯ ಸಲುವಾಗಿ ಟಾಟಾ …

Read More »