Breaking News

ಅಪ್ರಾಪ್ತರ ಬೈಕ್ ಚಾಲನೆಗೆ ಬಿಸಿ ಮುಟ್ಟಿಸುತ್ತಿದೆ ಯಲ್ಲಾಪುರ ಪೊಲೀಸ್ ಇಲಾಖೆ.

ಪ್ರತಿಧ್ವನಿ ಯಲ್ಲಾಪುರ : ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್ ಚಲಾಯಿಸುವ ಹುಚ್ಚಿಗೆ ಯಲ್ಲಾಪುರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದ್ದು ಮತ್ತೆ ಮೂವರು ಬೈಕ್ ಮಾಲಿಕರ ಮೇಲೆ ಪ್ರಕರಣ ದಾಖಲಿಸಿ ಬರೋಬ್ಬರಿ 65 ಸಾವಿರ ದಂಢ ಕಟ್ಟಿಸಿದ್ದಾರೆ.

ದಂಡ ವಿಧಿಸಿದ ಮಾನ್ಯ ನ್ಯಾಯಾಲಯ :        

18 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಿಗೆ ದ್ವಿ ಚಕ್ರ ವಾಹನ ಚಾಲನೆಗೆ ನೀಡಿದ ಮಾಲೀಕರಿಗೆ 199(A) indian motor vehicle act ಅಡಿ 3 ಜನ ವಾಹನ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಿದ್ದು ಮಾನ್ಯ ನ್ಯಾಯಾಲಯ ಒಟ್ಟು 65000 ದಂಡ ವಿಧಿಸಿದೆ.

ಬಿಳಕಿ ಜಡಗಿನಕೊಪ್ಪ ನಿವಾಸಿ ಸುರೇಖ ಅಣ್ಣಪ್ಪ ಸಿದ್ದಿ  …20 ಸಾವಿರ , ಹೊಸಳ್ಳಿ ಕಾರೆವಾಡ ನಿವಾಸಿ ಜಗ್ಗು ಬಾಬು ಕೊಕರೆ…25 ಸಾವಿರ ಹಾಗು ಅಲ್ಕೇರಿ ನಿವಾಸಿ ಸಾಜು ಬಾಬು ಜೋರೆ..20 ಸಾವಿರ ನೀಡುವಂತೆ ಮಾನ್ಯ ನ್ಯಾಯಾಲಯ ದಂಡ ವಿಧಿಸಿದೆ.


ಪೋಷಕರಿಗೆ ಪಾಠ- ಇತರೆ ಪೋಷಕರಿಗೆ ಜಾಗೃತಿ : ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್ ಚಲಾಯಿಸುವ ಗೀಳು ಹೆಚ್ಚಾಗಿ ಹಚ್ಚಿಕೊಂಡಿದ್ದು ಇದರಿಂದ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿದೆ. ಇದರಿಂದ ಕಟ್ಟು ನಿಟ್ಟಿನ ಕ್ರಮ ಜರುಗಿಸುತ್ತಿರುವ ಯಲ್ಲಾಪುರ ಪೊಲೀಸರು ಅಂತಹ ಪ್ರಕರಣಗಳಲ್ಲಿ ಪೋಷಕರಿಗೆ ಬಿಸಿ ಮುಟ್ಟುವಂತೆ ದಂಡ ವಿಧಿಸಲಾಗುತ್ತಿದೆ. ಕಟ್ಟುವ ದಂಡದ ಪ್ರಮಾಣ ಚಲಾಯಿಸುವ ಬೈಕ್ ಬೆಲೆಗಿಂತ ಹೆಚ್ಚೆ ಆಗಿದ್ದರು ಕಾನೂನಿನ ಅಡಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಅನಧಿಕೃತವಾಗಿ ಚಾಲನ ಪರವಾನಗಿ ಇಲ್ಲದೆ ಬೈಕ್ ಚಲಾಯಿಸುವುದು ಶಿಕ್ಷಾರ್ಹ ಅಪರಾಧ ಎಂಬುದನ್ನು ಮನದಟ್ಟು ಮಾಡಿಕೊಳ್ಳುವ ಜೊತೆಗೆ ಈ ಪ್ರಕರಣ ತಿಳಿದ ಇತರೆ ಪೋಷಕರು ಮಕ್ಕಳ ಕೈಗೆ ಬೈಕ್ ನೀಡುವ ತಪ್ಪು ಮಾಡಲಾರರು ಎಂಬುದು ಈ ದಂಡದ ಉದ್ದೇಶವಾಗಿದೆ.
ಒಟ್ಟಿನಲ್ಲಿ ಮಕ್ಕಳ ಬೈಕ್ ಓಡಿಸುವ ಚಟಕ್ಕೆ ಪೋಷಕರ ಜೇಬಿಗೆ ಕತ್ತರಿ ಬೀಳುತ್ತಿರುವುದಂತು ಕಟು ಸತ್ಯವಾಗಿದೆ.
ಎಚ್ಚೆತ್ತುಕೊಳ್ಳಿ ನಾಗರಿಕರೆ.
ನಿಮ್ಮ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡದಿರಿ. ಇಷ್ಟೊಂದು ಪ್ರಮಾಣದ ದಂಡ ಕಟ್ಟವ ಸಂಕಷ್ಟಕ್ಕೆ ಸಿಲುಕದಿರಿ.
ಕಾನೂನನ್ನು ಗೌರವಿಸೋಣ ಮತ್ತು ಪಾಲಿಸೋಣ.
ಇದು ಪ್ರತಿಧ್ವನಿ ಕಳಕಳಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕು “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್,ಕಾರ್ಯದರ್ಶಿಯಾಗಿ ಗಣೇಶ್ ಪತ್ತಾರ್ ಆಯ್ಕೆ

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ …

Leave a Reply

Your email address will not be published. Required fields are marked *