
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಹೆಸ್ಕಾಂ ಕಚೇರಿ ಎದುರು ಸಾಮಾಜಿಕ ಕಾರ್ಯಕರ್ತ ತಾರಾನಾಥ ನಾಯ್ಕ್ ನೇತೃತ್ವದಲ್ಲಿ ಅಂಬೇಡ್ಕರ್ ಪರ್ವ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ವಿನಾಯಕ ಬೋವಿ ವಡ್ಡರ್, ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಪ್ರಮುಖ ಶಂಶುದ್ದೀನ್ ಮಾರ್ಕರ್, ಯೋಗೇಶ್ ನಾಯ್ಕ್ ದಿಡೀರ್ ಪ್ರತಿಭಟನೆ ನಡೆಸಿ ಸಾರ್ವಜನಿಕ ಸ್ವತ್ತಾದ ವಿದ್ಯುತ್ ಸರಬರಾಜು ಕಂಬಗಳ ಮೇಲೆ ಅನಧಿಕೃತವಾಗಿ ಹಾಕಿರುವ ಆಪ್ಟಿಕ್ ಫೈಬರ್ ಕೇಬಲ್ ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.

ಪಟ್ಟಣ ಸೇರಿದಂತೆ ತಾಲ್ಲೂಕಿನ ಸರ್ವ ವ್ಯಾಪ್ತಿಯಲ್ಲಿ ಅಂತರ್ಜಾಲ ಮತ್ತು ಟಿವಿ ಚಾನಲ್ ಬಿತ್ತರಿಸಲು ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಸಿಗ್ನಲ್ ಕೊಂಡೊಯ್ಯುತ್ತಿದ್ದು ಇದಕ್ಕಾಗಿ ಸಾರ್ವಜನಿಕರು ತೆರಿಗೆ ಭರಿಸಿ ವ್ಯವಸ್ಥೆಗೊಳಿಸಿರುವ ವಿದ್ಯುತ್ ಕಂಬಗಳನ್ನು ಬಳಸುತ್ತಿದ್ದಾರೆ ಇದು ಅಕ್ಷಮ್ಯ ಅಪರಾದವಾಗಿದೆ.
ಒಂದೆಡೆ ಅಪಾಯಕಾರಿ ರೀತಿಯಲ್ಲಿ ಕಂಬಗಳಲ್ಲಿ ಲೆಕ್ಕವಿರದಷ್ಟು ಕೇಬಲ್ ಬಂಡಲ್ ಗಳು ತೂಗುತ್ತಿದ್ದು ಹೆಸ್ಕಾಂ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅಡಚಣೆಯಾಗುತ್ತಿದೆ ಮತ್ತು ಅಪಾಯಕಾರಿಯಾಗಿದೆ. ಮತ್ತೆ ಕೆಲವೆಡೆ ರಸ್ತೆಗೆ ಅಡ್ಡಲಾಗಿ ನೇತಾಡುತ್ತಿದ್ದು ವಾಹನ ಸವಾರರಿಗು ಸವಾಲಾಗಿ ಪರಿಣಮಿಸುತ್ತಿದೆ. ಕೆಲವು ಕಂಬಗಳಂತು ಕೆಬಲ್ ಬಂಡಲ್ ಗಳನ್ನು ತನ್ನ ಮೈ ಮೇಲೆಲ್ಲಾ ಸುತ್ತಿಕೊಂಡು ಅಪಾಯಕಾರಿಯಾಗಿ ಪರುಣಮಿಸಿದೆ.

ಇಷ್ಟೆಲ್ಲಾ ಸಮಸ್ಯೆ ಎದುರಾಗುತ್ತಿದ್ದರು ಇಲಾಖೆ ಸುಮ್ಮನಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದಂತಿದೆ. ಇದನ್ನು ಘಟ್ಟಿಯಾಗಿ ಪ್ರಶ್ನಿಸಿದರೆ ಅಂತಹವರನ್ನು ಸಾರ್ವಜನಿಕ ವಿರೋದಿ ಎಂಬಂತೆ ಬಿಂಬಿಸುವ ಪ್ರಯತ್ನವು ನಡೆಯುತ್ತದೆ. ಕಾರಣ ಈ ಪೈಬರ್ ಲೈನ್ ಗಳು ಹಲವು ಸರ್ಕಾರಿ ಕಚೇರಿ, ಶಾಲಾ,ಕಾಲೇಜು, ಬ್ಯಾಂಕ್ ಗಳು ಮತ್ತು ಇನ್ನಿತರ ಉದ್ಯಮಗಳಿಗೆ ಅಂತರ್ಜಾಲ ಸಂಪರ್ಕದ ವ್ಯವಸ್ಥೆ ಕಲ್ಪಿಸುತ್ತಿದ್ದು ಅದಕ್ಕೆಲ್ಲಾ ಅಡಚಣೆ ಮಾಡಿದಂತೆ ಬಿಂಬಿಸಲಾಗುತ್ತಿದೆ.
ನಿಜವಾಗಿ ಯಾವುದೆ ಕೇಬಲ್ ಆಪರೇಟರ್ ಸಹ ವಿದ್ಯುತ್ ಕಂಬಗಳಿಗೆ ತನ್ನ ಕೇಬಲ್ ಕಟ್ಟಲು ಅನುಮತಿಯನ್ನೆ ಪಡೆಯದೆ ತನ್ನ ವರಮಾನ ಪಡೆಯುತ್ತಲೆ ಇರುತ್ತಾನೆ. ಅದರ ಭಾಗವಾಗಿ ಪ್ರತಿ ಕಂಬಕ್ಕೆ ಇಂತಿಷ್ಟು ಎಂದು ಹಣ ಕಟ್ಟಿ ಪರವಾನಗಿ ಪಡೆದು ದಂದೆ ನಡೆಸಬೇಕೆ ವಿನಹಃ ತಮಗಿಷ್ಟ ಬಂದಂತೆ ತೋಳ್ಬಲ,ಹಣ ಬಲ,ಅಧಿಕಾರ ಬಲ,ರಾಜಕೀಯ ಬಲ ಬಳಸಿಕೊಂಡು ದಂದೆ ನಡೆಸಿದರೆ ಸಾರ್ವಜನಿಕ ತೆರಿಗೆ ಹಣಕ್ಕೆ ಅಪಹಾಸ್ಯ ಮಾಡಿದಂತಾಗುತ್ತದೆ.ಮುಖ್ಯವಾಗಿ ಸಾರ್ವಜನಿಕರಿಗೆ ಸಮಸ್ಯೆ ಮಾಡುವುದು ನಮ್ಮ ಉದ್ದೇಶವಲ್ಲ ಬದಲಾಗಿ ಅಧಿಕೃತವಾಗಿ ಪರವಾನಗಿ ಪಡೆದು ವ್ಯವಹಾರ ನಡೆಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂಬುದು ಸಾಮಾಜಿಕ ಕಾರ್ಯಕರ್ತ ಸಾಮಾಹಿಕ ಹೋರಾಟಗಾರ ತಾರಾನಾಥ ನಾಯ್ಕ್ ಅವರ ಆಗ್ರಹವಾಗಿದೆ.

ಈಗಾಗಲೆ ಕೇಬಲ್ ಆಪರೇಟರ್ ಗಳಿಗೆ ಸೂಚನೆ ನೀಡಲಾಗಿದ್ದು ಎಷ್ಟು ವಿದ್ಯುತ್ ಕಂಬಗಳನ್ನು ಬಳಸಿಕೊಳ್ಳುತ್ತೀರ,ಮತ್ತು ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದರೆ ಅದನ್ನು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಕಳುಹುಸಲಾಗುವುದು. ಅಲ್ಲಿಂದ ಬರುವ ಸೂಚನೆಯಂತೆ ಕ್ರಮ ಜರುಗಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕೇಬಲ್ ಆಪರೇಟರ್ ಗಳಿಗೆ ಮಾಹಿತಿ ನೀಡಲಾಗಿದೆ. ರಮಾಕಾಂತ ನಾಯ್ಕ್,ಎಇಇ ಯಲ್ಲಾಪುರ ಉಪ ವಿಭಾಗ





Prathidvani Yellapura