Breaking News

ಕಿರಾಣಿ ಅಂಗಡಿ ಕುಟುಂಬದ ಮೇಲೆ ದೌರ್ಜನ್ಯ ಜೀವ ಬೆದರಿಕೆ ಹುಣಶೆಟ್ಟಿ ಕೊಪ್ಪದಲ್ಲಿ ನಡೆದ ಘಟನೆ- ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲು.

ಪ್ರತಿಧ್ವನಿ ಯಲ್ಲಾಪುರ – ತಾಲ್ಲೂಕಿನ ಹುಣಶೆಟ್ಟಿಕೊಪ್ಪದಲೊಂದು ನಡೆದ ದೌರ್ಜನ್ಯ ಪ್ರಕರಣ ಯಲ್ಲಾಪುರ ಠಾಣೆ ಮೆಟ್ಟಿಲೇರಿದ್ದು 15 ಜನರ ಮೇಲೆ ದೂರು ದಾಖಲಾಗಿದೆ.
ಘಟನೆ ವಿವರ – ಹುಣಶೆಟ್ಟಿಕೊಪ್ಪ ಗ್ರಾಮದ ನಿವಾಸಿ ಚಂದ್ರಕಾಂತ ನಾರಾಯಣ ತಿನೇಕರ್ ಎಂಬುವರು ಮಡದಿ ಮಕ್ಕಳೊಂದಿಗೆ ಕಿರಾಣಿ ಅಂಗಡಿ ನಟಡಸುತ್ತಾ ಜೀವನ ಸಾಗಿಸುತ್ತಿದ್ದು ಕಳೆದರಾತ್ರಿ ದಿಡೀರನೆ ಸ್ಥಳೀಯರ ಗುಂಪೊಂದು ಅಂಗಡಿ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಪಿರ್ಯಾದಿ ಹೆಂಡತಿ ಕೆನ್ನೆಗೆ ಹೊಡೆದು ಆತನ ಮಗನ ಮೇಲು ಹಲ್ಲೆ ಮಾಡಿರುವುದಾಗಿ ಹಾಗು. ಒಟ್ಟು 27 ಸಾವಿರ ಮೌಲ್ಯದ ಸ್ವತ್ತು ಹಾನಿಯಾಗಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಚಂದ್ರಕಾಂತ ನಾರಾಯಣ ತಿನೇಕರ ತನ್ನ ಕುಟುಂಬಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಎಸಗಿದ 15 ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ದೂರಿನಲ್ಲಿರುವ 15 ಮಂದಿ : 1) ಚಂದ್ರಕಾಂತ ಸದಾನಂದ ಕಳಸೂರಕರ 2) ವಿಜಯ್ ಕುಮಾರ್ ಬರ್ಕೆಲಾ ಕಳಸೂರಕರ 3) ಈರಪ್ಪ ಬರ್ಕೆಲಾ ಕಳಸೂರಕರ 4) ಸತೀಶ್ ಹರಿಶ್ಚಂದ್ರ ತಿನೇಕರ 5)ಚಂದ್ರಕಾಂತ ವಿಠ್ಠಲ ಮಡಕರ 6)ಸುಬಾಷ್ ಗಣಪತಿ ತೊರಸ್ಕರ್ 7)ನಾಗರಾಜ್ ಗುಂಡಪ್ಪಕರ್ 8)ಸಂತೋಷ್ ನಾಗಪ್ಪ ಕಳಸೂರಕರ 9) ದೇವರಾಜ್ ನೀಲಕಂಠ ಮರಾಠಿ 10)ಶಿವಾನಂದ ಬಾಲ ಮರಾಠಿ, 11)ರಾಜಕುಮಾರ್ ತಮ್ಮು ಕೇಸರಕರ 12) ಬಾಲಾಜೀವ ಮರಾಠಿ 13) ಸಿದ್ದೇಶ್ವರ ವೆಂಕಟರಮಣ ನಾಯ್ಡು 14)ಗಣಪತಿ ನಾಗಪ್ಪ ಕೇಸರಕರ 15)ರವಿ ರಾಜೇಂದ್ರ ತಿನೇಕರ.
ಎಂಬುವರ ಮೇಲೆ ದೂರು ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಕೊಂಡ ಯಲ್ಲಾಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *