
ಪ್ರತಿಧ್ವನಿ ಯಲ್ಲಾಪುರ : ವಿದ್ಯುತ್ ವಿತರಣೆಯನ್ನು ಟಾಟಾ ಪವರ್ ಕಂಪನಿಗೆ ನೀಡುವುದನ್ನು ವಿರೋಧಿಸಿ ಪಟ್ಟಣದ ಹೆಸ್ಕಾಂ ಉಪ ವಿಭಾಗದಲ್ಲಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಹಾಗೂ ಹೆಸ್ಕಾಂ ಸಿಬ್ಬಂದ್ದಿಗಳು ಪ್ರತಿಭಟನೆ ನಡೆಸಿದರು.

ಸರಕಾರದ ನಿಲುವಿನಿಂದಾಗಿ ವಿದ್ಯುತ್ ಗುತ್ತಿಗೆದಾರರಿಗೂ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ತೊಂದರೆ ಯಾಗಿ ನಿರುದ್ಯೋಗಿಗಳಾಗುತ್ತಾರೆ. ವಿದ್ಯುತ್ ಕಂಪನಿಗಳ ಅಸ್ತಿತ್ವ, ಹಿತರಕ್ಷಣೆ, ನೌಕರ ಭವಿಷ್ಯದ ದೃಷ್ಟಿಯಿಂದ ಕಾರ್ಮಿಕರ ಉದ್ಯೋಗ ಭದ್ರತೆ, ಗ್ರಾಮೀಣ ಗ್ರಾಹಕರ ಹಿತರಕ್ಷಣೆಯ ಸಲುವಾಗಿ ಟಾಟಾ ಕಂಪನಿ ಸಲ್ಲಿಸಿರುವ ವಿದ್ಯುತ್ ವಿತರಣಾ ಪರವಾನಿಗೆ ಅನುಮತಿಯನ್ನು ತಿರಸ್ಕರಿಸಬೇಕು.
ಹೆಸ್ಕಾಂ ಎಇಇ ರಮಾಕಾಂತ ನಾಯ್ಕ,ಎಇ ಹೇಮಂತ,ಎಎಒ ವಿನಾಯಕ ಶೇಟ್ ಶಾಖಾಧಿಕಾರಿಗಳಾದ ನಾಗರಾಜ್ ಆಚಾರಿ, ಲಕ್ಷ್ಮಣ್ ಜೋಗಳೇಕರ್ ವಿಶಾಲ್ ಹೈಗರ್, ರೋಹಿತ್ ಎಸ್ ಹಾಗೂ ವಿದ್ಯುತ್ ನೌಕರರ ಸಂಘ ಅಧ್ಯಕ್ಷ ಶೇಖರ್ ಯರಗೇರಿ, ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಗುತ್ತಿಗೆದಾರರಾದ ಸತೀಶ ಹೆಗಡೆ,ರಿಗನ್ ಡಿಸೋಜಾ,ಗೋಪಾಲಕೃಷ್ಣ ಕರುಮನೆ,ಮಕಬುಲ್ ಸೈಯ್ಯದ್ ಅಲಿ ಮುಂತಾದವರು ಉಪಸ್ಥಿತರಿದ್ದರು


Prathidvani Yellapura