Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರ ಖಾತೆಗೆ ಎರಡನೇ ಕಂತಿನ ಬೆಳೆ ವಿಮೆ ಜಮೆ ಆರಂಭ.

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ‘ಹವಾಮಾನ ಆಧಾರಿತ ಬೆಳೆ ವಿಮೆ’ಯ ಎರಡನೇ ಕಂತಿನ ಮೊತ್ತವು ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲು ಪ್ರಾರಂಭವಾಗಿದೆ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಬಾಕಿ ವಿಮಾ ಮೊತ್ತವು ಈಗ ಅರ್ಹ ಫಲಾನುಭವಿ ರೈತರಿಗೆ ಹಂತ ಹಂತವಾಗಿ ಬಿಡುಗಡೆಯಾಗುತ್ತಿದ್ದು, ನೇರ ನಗದು ವರ್ಗಾವಣೆ (DBT) ಮೂಲಕ ಪ್ರಕ್ರಿಯೆ ಮುಂದುವರಿಯಲಿದೆ. …

Read More »

ಯಲ್ಲಾಪುರದಲ್ಲೊಂದು ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೆ ಸಾವು- ಹಿಂಬದಿ ಸವಾರನಿಗೆ ಗಂಭೀರ ಗಾಯ.

ಪ್ರತಿಧ್ವನಿ ಯಲ್ಲಾಪುರ : ಪಟದಟಣದ ಹೊರವಲಯ ಮಗೋಡು ಕ್ರಾಸ್ ಸಮೀಪ ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದು ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು. ಲಾರಿ ನಿಲ್ಲಿಸದೆ ಸ್ಥಳದಿಂದ ಕಾಲ್ಕಿತ್ತ ಲಾರಿ ಚಾಲಕನ ಮೇಲೆ ದೂರು ದಾಖಲಾಗಿದೆ. ಅಂಕೊಲಾ ತಾಲೂಕಿನ ಹಳವಳ್ಳಿ ನಿವಾಸಿ ದೇವೇಂದ್ರ ಸೀತಾರಾಮ ಗೌಡ ( 21) ಎಂಬಾತನೆ‌ ಮೃತ ಬೈಕ್ ಸವಾರನಾಗಿದ್ದು ಕಳಚೆ ನಿವಾಸಿ ವಿಜೇತ ಪ್ರೇಮಾನಂದ ಗೌಡ‌ನೆ …

Read More »

ತೋಟಗಾರಿಕ ಇಲಾಖೆ ಪರಿಸರದಲ್ಲಿ ಮಕರಂದ ಕ್ರೂಡಿಕರಣ – ನೂರಾರು ಜೇನಿನ ಪೆಟ್ಟಿಗೆಗಳ ಅನಾವರಣ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನಾಯ್ಕನ ಕೆರೆ ಬಳಿ ಇರುವ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ,ಮಾವಿನ ತೋಟದ ನಡುವೆ ನೂರಾರು ಸಂಖ್ಯೆಯಲ್ಲಿ ಜೇನಿನ ಪೆಟ್ಟಿಗೆ ಇಟ್ಟಿದ್ದು ಮಕರಂದ ಕ್ರೂಡಿಕರಣದ ಜೇನಿನ ಕೃಷಿ ಸಾಗಿದೆ. ತಾಲೂಕಿನ ದೋಣಗಾರದ ನಿವಾಸಿ ತಿಮ್ಮಣ್ಣ ಭಟ್ ಈ ಜೇನಿನ ಕೃಷಿಯಲ್ಲಿ ತೊಡಗಿದವರಾಗಿದ್ದು ತೋಟಗಾರಿಕ ಇಲಾಖೆಗೆ ಜೇನಿನ ಗೂಡುಗಳನ್ನು ಒದಗಿಸುವ ಅಧಿಕೃತ ಸರಬರಾಜುದಾರರಾಗಿ ಕಾರ್ಯ ನಿರ್ವ ಹಿಸುತ್ತಿದ್ದಾರೆ. ಸದ್ಯ ಯಲ್ಲಾಪುರದ ತೋಟಗಾರಿಕಾ ಕ್ಷೇತ್ರದಲ್ಲಿ200 ಕ್ಕು ಅಧಿಕ ಜೇನಿನ ಪೆಟ್ಟಿಗೆ …

Read More »

ಯಲ್ಲಾಪುರದಲ್ಲಿ ಮುಗಿಲು ಮುಟ್ಟಿದ ಹಿಂದು ಧರ್ಮದ ಜಯಘೋಷ- ವಿಜ್ರಂಭಣೆಯಿಂದ ಜರುಗಿದ ಯುಗಾದಿ ಉತ್ಸವದ ಶೋಭಾಯಾತ್ರೆ.

ಪ್ರತಿಧ್ವನಿ ಯಲ್ಲಾಪುರ : ಹಿಂದು ಧರ್ಮದ ನೂತನ ವರ್ಷಾರಂಭ ಯುಗಾದಿ ಯಿಂದ ಪ್ರಾರಂಭ ಅದಕ್ಕೆ ಯಲ್ಲಾಪುರದಲ್ಲಿ ವಿಜ್ರಂಭಣೆಯ ಆಚರಣೆ ನಡೆಯುತ್ತಾ ಬಂದಿದೆ. ಅದರಂತೆ ಮಾ,19,ಗುರುವಾರ ಯುಗಾದಿ ಉತ್ಸವ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು. ಚಂಡೆಯ ಝಲಕ್ ಝಾಂಜ್ ನ ಹೊಡೆತ ಗೊಂಬೆಗಳ ಕುಣಿತ ಭಜನಾ ತಂಡದ ಭಕ್ತಿ ನೃತ್ಯ ಛದ್ಮ ವೇಷದ ಸೊಬಗು ಊರಿನ ತುಂಬಾ ಕೇಸರಿ ಕಲರವ,ಮಾವಿನ ತೋರಣ ವಿದ್ಯುತ್ ದೀಪಾಲಂಕಾರದ ವೈಭವ, ಚಂಡೆಯ ನಿನಾದ,ಡಿ.ಜೆ ಸದ್ದು,ಝಾಂಜ್,ಪತಾಕೆಗಳ ಆರ್ಭಟ ವಿವಿಧ …

Read More »

ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? ಇಲ್ಲಿದೆ ಅದಕ್ಕೆ ಸರಿಯಾದ ಮಾಹಿತಿ.

ಬೆಳಗಿನಿಂದ ಅನೇಕರದ್ದು ಒಂದೇ ಪ್ರಶ್ನೆ – ‘ಈ ಸಂವತ್ಸರಕ್ಕೆ ‘ಪರಾಭವ’ ಎಂಬ ಹೆಸರೇಕೆ ? ಪರಾಭವ ಅಂದ್ರೆ ಸೋಲು ಅಂತ ಅರ್ಥವಲ್ಲವೇ? ಯಾಕೋ ಯುಗಾದಿ ಶುಭಾಶಯ ಹೇಳುವಾಗ ಕಸಿವಿಸಿ ಆಗುತ್ತದೆ.’ ನಿಜ, ‘ಪರಾಭವ’ ಎಂದರೆ ನಮಗೆ ‘ಸೋಲು’ ಅಥವಾ ‘ಅವಮಾನ’ ಎಂಬ ಅರ್ಥವೇ ಮೊದಲು ನೆನಪಾಗುತ್ತದೆ. ಆದರೆ ಸಂಸ್ಕೃತದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದ ಈ ಹೆಸರಿನಲ್ಲಿ ಅಡಗಿರುವ ಅರ್ಥವೇ ಬೇರೆ. ಹಿಂದೂ ಕಾಲಗಣನೆಯ 60 ಸಂವತ್ಸರಗಳಲ್ಲಿ ‘ಪರಾಭವ’ ಎಂಬುದು 40ನೇ …

Read More »

ಪರಮಪೂಜ್ಯ “ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ದತ್ತ ಮಂದಿರದಲ್ಲಿ ಆಶಿರ್ವಚನ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ದತ್ತ ಮಂದಿರ ಪರಿಸರದಲ್ಲಿ ನೂರಾರು ದೇವತೆಗಳು ಆವಾಸರಾಗಿರುತ್ತಾರೆ. ದತ್ತಗುರುವಿನ ಸೇವೆ ಜನ್ಮ ಪಾವನ ಮತ್ತು ಸಾಕ್ಷಾತ್ಕಾರಕ್ಕೆ ದಾರಿದೀಪವಾಗಿದೆ. ಪರಸ್ಥಳದಿಂದ ದತ್ತನ ದರ್ಶನಕ್ಕೆ ಭಕ್ತರು ಯಲ್ಲಾಪುರದ ದತ್ತಮಂದಿರಕ್ಕೆ ಬರುವಂತಾಗಬೇಕು ಎಂದು ರಾಮಚಂದ್ರಾಪುರ ಮಠದ ಪರಮ ಪೂಜ್ಯ ರಾಘವೇಶ್ವರ ಭಾರತೀ ಸ್ವಾಮಿಗಳು ಆಶಿರ್ವಚನ ನೀಡಿದರು. ಅವರು ಪಟ್ಟಣದ ದತ್ತ ಮಂದಿರದಲ್ಲಿ ಬುಧವಾರ ನಡೆದ ಸೇವಾಶಿರ್ವಾದ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತಿ ವಹಿಸಿ ಆಶಿರ್ವಚನ ನೀಡಿದರು. ದತ್ತಮಂದಿರದ ನೂತನ ಕ್ರಿಯಾ …

Read More »

ನಾಡುಕಂಡ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರ ಜನುಮ ದಿನಕ್ಕೆ ಶುಭ ಕೋರಿದ ಅತ್ಯಾಪ್ತ  ಬಾಬು ಸಿದ್ದಿ ಮತ್ತು ತಂಡ.

ಪ್ರತಿಧ್ವನಿ ಯಲ್ಲಾಪುರ : ನಾಡಿನ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಹಳಿಯಾಳ ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಹಾಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರ ಜನುಮ ದಿನಕ್ಕೆ ಅವರ ಅತ್ಯಾಪ್ತ ಕಟ್ಟಾ ಕಾಂಗ್ರೆಸ್ಸಿಗ ಸಿದ್ದಿ ಬುಡಕಟ್ಟು ಸಮುದಾಯದ ಮುಖಂಡ ಕಿರವತ್ತಿಯ ಬಾಬು ಸಿದ್ದಿ ಮತ್ತು ತಂಡ ದೇಶಪಾಂಡೆ ಅವರ ನಿವಾಸದಲ್ಲಿ ಭೇಟಿಮಾಡಿ ಹೂಮಾಲೆ ಹಾಕಿ ಹುಟ್ಟು ಹಬ್ಬದ ಶುಭಾಶಯ ಕೋರಿ ಸಂಭ್ರಮಿಸಿದರು. ಆರ್.ವಿ.ದೇಶಪಾಂಡೆ ಅವರಿಗೆ ಯಲ್ಲಾಪುರದ ಬಾಬು …

Read More »

ಬಿಲ್ಲಿಗದ್ದೆ ಅರಣ್ಯ ಅತಿಕ್ರಮಣ ಅರಣ್ಯರೋಧನ  ಪ್ರಕರಣದ ಸುದ್ದಿಗೆ ಬಿಗ್ ಟ್ವಿಸ್ಟ್.

ಪ್ರತಿಧ್ವನಿ ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ನಲ್ಲಿ ” ಬಿಲ್ಲಿಗದ್ದೆ ಹೊಸದಾಗಿ ಅರಣ್ಯ ಅತಿಕ್ರಮಣ-ಅರಣ್ಯ ರೋಧನ” ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಸುದ್ದಿ ತಿಳಿದ ಜಾಗದ ಮೂಲ ಮಾಲಿಕರು ಶೇಷಗಿರಿ ಮುರ್ತು ಪ್ರಭು ಸ್ಥಳದಲ್ಲೆ ನಿಂತು ಸಂಪೂರ್ಣ ಮಾಹಿತಿ ನೀಡಿದ್ದು ಪ್ರಕಟವಾದ ಸುದ್ದಿಯಲ್ಲಿ ಸಂಪೂರ್ಣತೆ ಇಲ್ಲ ಮತ್ತು ಸತ್ಯಕ್ಕೆ ದೂರವಾದ ಅಂಶವಾಗಿದೆ. ಇದರ ಸಂಪೂರ್ಣ ವಿವರ ನಾನೆ ಒದಗಿಸುತ್ತೇನೆ ಎಂದು ಸ್ಥಳದ ಮಾಹಿತಿ …

Read More »

ಮಕ್ಕಳ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹ ನೀಡಲು ಸ್ವಂತ ದುಡಿಮೆಯ ಹಣದಲ್ಲಿ ಪೆನ್ನು ಪುಸ್ತಕ ವಿತರಿಸಿದ-ವಿಟ್ಟು ದೋಂಡು ಪಟಕಾರೆ.

ಪ್ರತಿಧ್ವನಿ ಯಲಾಪುರ :ಇಂದಿನ ಕಾಲಮಾನದಲ್ಲಿ ದುಡಿದ ಹಣ ದುಂದು ಮಾಡಿ ಅರ್ಥಹೀನ ಕೆಲಸಗಳಲ್ಲಿ ಪೋಲು ಮಾಡುವವರ ಮದ್ಯೆ ಸಣ್ಣ ಯಲವಳ್ಳಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕ್ರಿಯಾಶೀಲ ಯುವಕ ವಿಟ್ಟು ದೋಂಡು ಪಟಕಾರೆ ವಿಬಿನ್ನತೆ ತೋರಿದ್ದು ಕಿರವತ್ತಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಾಲೆಗಳ 410 ಕ್ಕು ಅಧಿಕ ವಿದ್ಯಾರ್ಥಿಗಳಿಗೆ ತನ್ನ ಸ್ವಂತ ದುಡಿದ ಹಣದಿಂದ ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಿ ಸಾರ್ಥಕತೆ ಮೆರೆದಿದ್ದಾರೆ. ತಾಲೂಕು ಕಿರವತ್ತಿ ಪಂಚಾಯತಿ ವ್ಯಾಪ್ತಿಯ ತೆಂಗಿನಗಿರಿ, …

Read More »

ಮಾರಿಷಸ್‌ನಲ್ಲಿ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಡಿಪ್ಲಮೋ ಮಾಡಲು ಸುವರ್ಣಾವಕಾಶ..

ಪ್ರತಿಧ್ವನಿ ಯಲ್ಲಾಪುರ ಉದ್ಯೋಗವಕಾಶದ ಮಾಹಿತಿ ಮಾರಿಷಸ್ ದೇಶದಲ್ಲಿ ಮಾರಿಷಸ್ ಸರ್ಕಾರದ ಮಾನ್ಯತೆ ಪಡೆದಿರುವ ಎಂ.ಕ್ಯೂ.ಎ ಅನುಮೋದಿತ ಒ.ಸಿ.ಇ.ಪಿ ತರಬೇತಿ ಸಂಸ್ಥೆ ಅಡಿಯಲ್ಲಿ ಎರಡು ವರ್ಷಗಳ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಡಿಪ್ಲಮೋ ಕೋರ್ಸ್ ಆರಂಬಿಸಿದ್ದು ಎಸ್.ಎಸ್.ಎಲ್.ಸಿ / ದ್ವಿತೀಯ ಪಿಯುಸಿ ಉತ್ತೀರ್ಣರಾದವರು ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆಕರ್ಷಕ ಪಾಠ, ಅದ್ಬುತ ಮಾರಿಷಸ್ ಅನ್ನು ಅನ್ವೇಷಿಸಿ ಮಾರಿಷಸ್ ಆತಿಥ್ಯ ವಲಯದಲ್ಲಿ ವ್ಯಾಪಾರ ಮತ್ತು ಉದ್ಯೋಗ ಕುರಿತಂತೆ ಹಲವು ವಿಚಾರಗಳ …

Read More »