Breaking News

ತ್ಯಾಗದ ಜಿಲ್ಲೆ ಎನಿಸಿಕೊಂಡ ಉತ್ತರ ಕನ್ನಡ ಇದೀಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಬೇಕಾದ ಅನಿವಾರ್ಯತೆ ನದಿ ಜೋಡಣೆ ಯೋಜನೆ ತಂದೊಡ್ಡಿದೆ.ಎಚ್ಚರ!!

ಪ್ರತಿಧ್ವನಿ ಯಲ್ಲಾಪುರ : ದೇಶದ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ಹಲವು ಯೋಜನೆಗಳಿಗೆ ತನ್ನ ಮಡಿಲು ನೀಡಿದ ಉತ್ತರ ಕನ್ನಡ ಜಿಲ್ಲೆಗೆ ನದಿಯ ಜೋಡಣೆ ಎಂಬ ಅವೈಜ್ಞಾನಿಕ ಪೆಡಂಭೂತ ಯೋಜನೆ ಕಾಡುತ್ತಿದ್ದು ಪರಿಸರ,ಪ್ರಕೃತಿ ಮತ್ತು ರೈತಾಪಿ ಜನರ ನಿತ್ಯ ಬದುಕಿನಮೇಲೆ ವಿಷ ಚೆಲ್ಲಲು ಹೊರಟಿರುವುದು ಅಕ್ಷಮ್ಯ ಮತ್ತು ಅನ್ಯಾಯವಾಗಿದೆ.

  ಸರ್ಕಾರಕ್ಕೆ ಈ ಬೇಡ್ತಿ ಯೋಜನೆ ಮಾಡುವುದಕ್ಕೆ ಬಹಳ ಅವಸರ ಮತ್ತು ಆಸಕ್ತಿ. ಆದ್ದರಿಂದನದಿಗುಂಟ ನಾವು ಗಂಗಾವಳಿ ತುದಿಯವರೆಗೂ ಜಾಗೃತಿ ನಡೆಸುವ ಕೆಲಸ ಮಾಡುತ್ತಿದ್ದೇವೆ ಸರ್ಕಾರದ ಕಣ್ಣು ತೆರೆಸಲು ಹೆದ್ದಾರಿ ತಡೆ ನಡೆಸುತ್ತಿದ್ದು ಸಮಸ್ತ ಜನತೆ ಪ್ರತಿಭಟನೆಯಲ್ಲಿ ಕೈ ಜೋಡಿಸಬೇಕಿದೆ ಇದು ಊ ನೆಲದ ಬದ್ದತೆಯಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದಿದ್ದಾರೆ.


ಬಯಲುಸೀಮೆ ಪ್ರದೇಶಗಳಲ್ಲಿ 2-3 ಬೆಳೆ ಬೆಳೆಯಲಾಗುತ್ತದೆ. ಅಲ್ಲದೇ ಪ್ರತಿ ರೈತರಿಗೂ ನೂರಾರು ಏಕರೆ ಜಮೀನಿದೆ. ಮಲೆನಾಡಿನ ರೈತರಿಗೆ 3 ಏಕರೆ ಇದ್ದರೆ ಹೆಚ್ಚು. ಈ ನೀರನ್ನು ಅದರಷ್ಟಕ್ಕೇ ಹರಿಯಬಿಡುವುದೇ ಉತ್ತಮ. ಹೋರಾಟ ನಿರಂತರ ಮುಂದುವರೆಯುತ್ತದೆ.ಹೋರಾಟದ ಯೋಜನೆಯ ಸರಪಳಿಯ ಕೊಂಡಿ ಕಳಚಿಕೊಳ್ಳದಂತೆ ಕಾದು ಸರ್ಕಾರದೊಂದಿಗಿನ ಸಂಘರ್ಷದಲ್ಲಿ ಗೆಲುವು ಸಾಧಿಸಬೇಕಿದೆ.

ಪ್ರಸ್ತಾಪಿತ ಯೋಜನೆ ಅವೈಜ್ಞಾನಿಕವಾದದ್ದು ಎಂಬುದು ಗೊತ್ತಿರುವ ಸಂಗತಿ.ಜಿಲ್ಲೆಯ ನದಿ,ಕಣಿವೆ,ಪ್ರದೇಶಗಳ ರಕ್ಷಣೆ ನಮ್ಮೆಲ್ಲರ ಹೊಣೆ.ಅತಾರ್ಕಿವಾದ ಸಂಗತಿಯಿಂದ ಭೂಕುಸಿತ ಸೇರಿದಂತೆ ಜಿಲ್ಲೆಯ ಹಲವೆಡೆ ಅವಘಡಗಳು ಹೆಚ್ಚಾಗುತ್ತಲಿವೆ ಎಂಬುದು ಆತಂಕದ ಸಂಗತಿಯಾಗಿದೆ.

ಜಿಲ್ಲೆಯ ಪರಿಸರ ಮತ್ತು ಜನ ಜೀವನ ಅಸ್ತಿತ್ವಕ್ಕೆ ಧಕ್ಕೆಯಾಗುವುದಾದರೆ ಉತ್ತರ ಕನ್ನಡ ಜನತೆ ರಾಜಕೀಯ ಮರೆತು ಧರ್ಮಬೇದ ಮರೆತು ಅಂತಸ್ತಿನ ಬೇದ ಮರೆತುವಹೋರಾಡಲೇಬೇಕಿದೆ. ಯಾರೋ ಬಂದು ಸಮಸ್ಯೆ ಸರಿಮಾಡುತ್ತಾರೆಂಬ ಭ್ರಮೆಯಲ್ಲಿರದೆ ಸಂಘಟಿತ ಹೋರಾಟದ ಶಕ್ತಿ ಪ್ರದರ್ಶನವಾಗಬೇಕಿದೆ‌. ಒಂದು ವೇಳೆ ಯೋಜನೆ ಅನುಷ್ಠಾನಕ್ಕೆ ಬಂದರೆ  ಅತಿಕ್ರಮಣದಾರರ ಬದುಕು ಬೀದಿಗೆ ಬೀಳಲಿದೆ ಈ ಎಲ್ಲಾ ವಿಚಾರಗಳನ್ನು ಮನದಲಿಟ್ಟು ಉತ್ತರ ಕನ್ನಡ ಜಿಲ್ಲೆಯಲ್ಲಿ ಜೀವಿಸುತ್ತಿರುವ ವಿಶೇಷವಾಗಿ ಈ ಸಮಸ್ಯೆ ಉದ್ಬವಿಸುವ ಪರುಸರ ವ್ಯಾಪ್ತಿಯಲ್ಲಿ ಜೀವಿಸುತ್ತಿರುವ ಪ್ರತಿ ಕುಟುಂಬದ ಸದಸ್ಯರೆಲ್ಲರು ದಿನಾಂಕ 3-11-2026 ರ ಮಂಗಳವಾರ ಯಲ್ಲಾಪುರದಲ್ಲಿ ನಡೆಯಲಿರುವ ಹೆದ್ದಾರಿ ತಡೆ ಬೃಹತ್ ಪ್ರತಿಭಟನೆಯಲ್ಲಿ ತಪ್ಪದೆ ಪಾಲ್ಗೊಳ್ಳಲು ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಕಳಕಳಿಯಾಗಿದೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇಂತಹ ಶಿಭಿರಗಳ ಆಯೋಜನೆ ಶ್ಲಾಘನೀಯ ಕಾರ್ಯ – ಹರಿಪ್ರಕಾಶ್ ಕೋಣೆಮನೆ‌.

ಪ್ರತಿಧ್ವನಿ ಯಲ್ಲಾಪುರ : ಯಾವುದೆ ವ್ಯಕ್ತಿಯು ತನ್ನ ದೇಹವನ್ನು ಆರೋಗ್ಯವಾಗಿಡಲು ರೋಗ ರುಜಿನಗಳು ಬರುವ ಮುಂಚೆಯೇ ತಪಾಸಣೆ ಮಾಡಿಕೊಳ್ಳಬೇಕು ಮತ್ತು …

Leave a Reply

Your email address will not be published. Required fields are marked *