
ಪ್ರತಿಧ್ವನಿ ಯಲ್ಲಾಪುರ – ಜಿಲ್ಲೆಯ ಜನತೆಗೆ ಕನಸಿನಲ್ಲಿಯು ಕಾಡುತ್ತಿರುವ ಬೇಡ್ತಿ-ವರದಾ ನದಿತ ಜೋಡಣೆ ಯೋಜನೆ ಅತ್ಯಂತ ಅಪಾಯಕಾರಿಯಾಗಿದ್ದು ಇದರ ವಿರುದ್ದ ಆಯೋಜನೆಗೊಂಡಿರುವ ಬೃಹತ್ ಪ್ರತಿಭಟನೆ ರಸ್ತೆ ತಡೆಗೆ ನನ್ನ ಮತ್ತು ನಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದು ಲಾರಿ ಚಾಲಕರ ಸಂಘ, ಶ್ರೀ ಗ್ರಾಮದೇವಿ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘ, ಬಸವೇಶ್ವರ ಗೂಡ್ಸು ರಿಕ್ಷಾ ಚಾಲಕ ಮಾಲಕರ ಸಂಘ, ಹಾಗು ವಿವಿಧ ಕನ್ನಡಪರ ಸಂಘಟನೆಗಳಲ್ಲಿ ಕ್ರಿಯಾಶೀಲರಾದ ಸಂತೋಷ ನಾಯ್ಕ್ ಪ್ರತಿಧ್ವನಿ ವೆಬ್ ನ್ಯೂಸ್ ನೊಂದಿಗೆ ಹೇಳಿದ್ದಾರೆ.
ಸ್ವರ್ಣವಲ್ಲಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ “ಪಶ್ಚಿಮ ಘಟ್ಟ ಉಳಿಸಿ – ಉತ್ತರ ಕನ್ನಡ ರಕ್ಷಿಸಿ” ಅಭಿಯಾನದ ಭಾಗವಾಗಿ ಬೆಡ್ತಿ-ವರದಾ ನದಿ ಜೋಡಣೆಯನ್ನು ವಿರೋಧಿಸಿ, ‘ಬೆಡ್ತಿ-ಅಘನಾಶಿನಿ ನದಿ ಸಂರಕ್ಷಣಾ ಸಮಿತಿ’ (ಸಿರ್ಸಿ, ಉತ್ತರ ಕನ್ನಡ) ಮತ್ತು ‘ರಸ್ತೆ ತಡೆ/ಹೋರಾಟ ಸಮಿತಿ’ (ಯಲ್ಲಾಪುರ) ವತಿಯಿಂದ 2026ರ ನವೆಂಬರ್ 3ರಂದು ಯಲ್ಲಾಪುರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆಗೆ ಬೆಂಬಲವಿದೆ ಎಂದರು.
ಜಿಲ್ಲೆಯ ಬೆಳವಣಿಗೆಯ ಅಸ್ತಿತ್ವಕ್ಕೆ ದಕ್ಕೆಯಾದಾಗ ಮತ್ತು ಜನತೆಗೆ ಸಂಕಷ್ಟ ಎದುರಾದಾಗ ತಕ್ಷಣಕ್ಕೆ ಧಾವಿಸಿ ತಮ್ಮ ಮನೆಯ ಸಮಸ್ಯೆ ಎಂಬಂತೆ ಬಗೆಹರಿಸುವತ್ತ ಧಾವಿಸುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಸಹ ಜನತೆಯೊಂದಿಗೆ ಇದ್ದು ಹೋರಾಟಕ್ಕೆ ಬೆಂಬಲ ಸೂಚಿಸಿದ್ಸು ನ್ಯಾಯಪರ ಹೋರಾಟಕ್ಕೆ ಇನ್ನಷ್ಟು ಆನೆಬಲ ಬಂದಂತಾಗಿದೆ ಅವರ ಮಾರ್ಗದರ್ಶನವನ್ನು ಗೌರವಿಸಿ ಹೋರಾಟದಲ್ಲಿ ನಾನು ಮತ್ತು ನಮ್ಮ ಸಂಘಟನೆಗಳು ಬೆಂಬಲಕ್ಕೆ ನಿಂತಿದ್ದೇವೆ.
ಸಂತೋಷ ನಾಯ್ಕ್ ಲಾರಿ ಚಾಲಕರ ಸಂಘ, ಶ್ರೀ ಗ್ರಾಮದೇವಿ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘ, ಬಸವೇಶ್ವರ ಗೂಡ್ಸು ರಿಕ್ಷಾ ಚಾಲಕ ಮಾಲಕರ ಸಂಘ, ಹಾಗು ವಿವಿಧ ಕನ್ನಡಪರ ಸಂಘಟನೆಗಳಲ್ಲಿ ಕ್ರಿಯಾಶೀಲರಾದ ಸಂತೋಷ ನಾಯ್ಕ್



















Prathidvani Yellapura