Breaking News

ಆನಗೋಡು ಮತ್ತು ದೇಹಳ್ಳಿ ಪಂಚಾಯತ್ – ನಮ್ಮ ಮನೆ‌ ನಮ್ಮ ಹಕ್ಕು- ಬಿಜೆಪಿ ಜನಾಂದೋಲನ

ಪ್ರತಿಧ್ವನಿ ಯಲ್ಲಾಪುರ : ಹಿರಿಯ ಶಾಸಕರೇ ತಮ್ಮ ‌ಕ್ಷೇತ್ರ ವನ್ನು ಬರಗಾಲ ಪೀಡಿತ ಘೋಷಣೆ ‌ಮಾಡದೇ ಇದ್ದರೇ ರಾಜಿನಾಮೆ ನೀಡುತ್ತೇನೆಂದು ಹೇಳುತ್ತಾರೆ,ಹಾಗಿದ್ದಲ್ಲಿ ಶೇಕಡಾ 70% ಮತದಾರರೇ ಸರಕಾರದ ಈಗಿನ ಸುತ್ತೋಲೆಯ ಸಮಸ್ಯೆ ಎದುರಿಸುತ್ತಿರುವಾಗ ಶಾಸಕರು ವಿಧಾನ ಸಭೆ ಯಲ್ಲಿ ತನ್ನ ರಾಜೀನಾಮೆ ‌ಪ್ರಕಟಿಸಬೇಕಿತ್ತು ಆಗ ಶಾಸಕರ ಜನಸ್ಪಂದನೆ ಬಗ್ಗೆ ಕ್ಷೇತ್ರಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿತ್ತು.ಆದರೆ ಶಾಸಕರು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ಆ ವಿಷಯ ಅಲ್ಲೇ ಬಿಟ್ಟಿರುವುದು ಮತದಾರರಿಗೆ ಮಾಡಿದ ಅನ್ಯಾಯ ಎಂದು ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದರು.

ಹಿರಿಯ ನಾಯಕ  ಉಮೇಶ್ ಭಾಗ್ವತ್ ಮಾತು.

ಮಾತನಾಡಿ ಅತಿಕ್ರಮಣ ದಾರರನ್ನು ಒಕ್ಕೆಲೆಬ್ಬಿಸುವ ಪ್ರಯತ್ನ ಈ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಇದಕ್ಕೆ ಯಲ್ಲಾಪುರ ದ ಶಾಸಕರು ಸಂಪೂರ್ಣ ಹೊಣೆ ಹೊತ್ತು ಈ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಪ್ರಮುಖ ಗಣಪತಿ ‌ಮಾನಿಗದ್ದೆ ಮಾತು

ಸರಕಾರದ‌ ಪ್ರತಿ ಆದೇಶಗಳು ಜನರಿಗೆ ಉರುಳಾಗುತ್ತಿದೆ.ಒಂದು ದಿನ ಗುಟ್ಕಾ ನಿಷೇಧ, ಒಂದು ದಿನ ಕರ ಸ್ವೀಕರಿಸಬಾರದೆಂಬ ಸರಕಾರದ ಆದೇಶಗಳು ಜನಸಾಮಾನ್ಯರ ಬಾಳಿನ ಜೊತೆಗೆ ಚೆಲ್ಲಾಟ ವಾಡುತ್ತಿವೆ ಎಂದು ಹೇಳಿದರು.

ಹಿರಿಯ ಮುಖಂಡ ಗಣಪತಿ ‌ಮುದ್ದೇಪಾಲ ಮಾತು.

ಕಾಂಗ್ರೆಸ್ ನಮಗೆಲ್ಲರಿಗೂ ಮಾರಕ,ಜನಸಾಮಾನ್ಯರ ಆಶೋತ್ತರಗಳನ್ನು ದಿಕ್ಕರಿಸಿ ತಮಗೆ ಮನಸ್ಸಿಗೆ‌ ಬಂದ ಹಾಗೆ ಆಡಳಿತ ‌ನಡೆಸುತ್ತಿರುವುದು‌ ಮುಂದಿನ‌ ದಿನಗಳಲ್ಲಿ ‌ಜನಸಾಮಾನ್ಯರು ದಂಗೆ‌ ಏಳಲು ಕಾರಣವಾಗುತ್ತದೆ ಎಂದು ಹೇಳಿದರು

ಬಿಜೆಪಿ ಪ್ರಮುಖ ವಿಶ್ವನಾಥ ಹಳೇಮನೆ ಮಾತು

ಕಸ್ತೂರಿ ರಂಗನ ವರದಿ ಸಮಸ್ಯೆ ಬಗ್ಗೆ ಮಾತನಾಡಿ,ಗಾಂವಠಾಣ ಸಮಸ್ಯೆ,ಇ ಸ್ವತ್ತು, ಸಮಸ್ಯೆ ಗಳ ಬಗ್ಗೆ ಬೆಳಕು ಚೆಲ್ಲಿದರು.

ಶ್ರೀಪತಿ ಮುದ್ದೇಪಾಲ,ರಾಮಣ್ಣ ಚಿಕ್ಯಾನಮನೆ,ರಾಮಕ್ರಷ್ಣ ಅಳ್ವಗದ್ದೆಮಾತನಾಡಿದರು

ಈ ಸಂದರ್ಭದಲ್ಲಿ ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ, ಸತ್ಯನಾರಾಯಣ ಹೆಗಡೆ, ಕೆ.ಟಿ.ಹೆಗಡೆ, ರಾಮಕೃಷ್ಣ ಅಳ್ವಗದ್ದೆ,ಗಣಪತಿ ಕೊಂಬೆ,ದತ್ತಣ್ಣ ಬೋಳಗುಡ್ಡೆ,ಕೀರ್ತಿರಾಜ ಕೋಟೆಮನೆ,ಮಹೇಶ ಕುಣಬಿ,ಕುಸುಮಾ ಸಿದ್ದಿ, ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *