Breaking News

ಯಲ್ಲಾಪುರ ಅರಣ್ಯ ಇಲಾಖೆ ಭರ್ಜರಿ ಭೇಟೆ ಹವ್ಯಾಸಿ ಅರಣ್ಯ ಕಳ್ಳರ ಬಂಧನ ಶ್ರೀಗಂಧದ ತುಂಡುಗಳು ವಶಕ್ಕೆ.


ಪ್ರತಿಧ್ವನಿ ಯಲ್ಲಾಪುರ : ಇತ್ತೀಚೆಗೆ ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕಡಿದು ಅದರ ತುಂಡುಗಳನ್ನು ಕಳ್ಳತನ ಮಾಡುತ್ತ ಅರಣ್ಯ ಇಲಾಖೆ ಕಣ್ಣಿಗೆ ಕಾಣದಂತೆ ಮಾಯವಾಗಿಬಿಡುತ್ತಿದ್ದ ಶ್ರೀಗಂಧ ಚೋರರ ಹೆಡೆಮುರಿ ಕಟ್ಟಿ ಕಳ್ಳತನ ಮಾಡಿದ್ದ ಶ್ರೀಗಂಧದ ತುಂಡುಗಳ ಸಹಿತ ನಾಲ್ವರು ಹವ್ಯಾಸಿ ಅರಣ್ಯ ಕಳ್ಳರನ್ನು ಯಲ್ಲಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಸಾಹಸ ತೋರಿ ಬಂಧಿಸಿದ್ದಾರೆ.


ಪ್ರಕರಣದ ವಿವರ :- 23-09-2026 ರಂದು ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖಾ ಸಿಬಂದಿಗಳು ಯಲ್ಲಾಪುರ ಪಟ್ಟಣದ ಬಿಸಗೋಡ ರಸ್ತೆ ಮಾರ್ಗದಲ್ಲಿರುವ ಸ್ಮಶಾನದ ಪಕ್ಕದಲ್ಲಿ ಅನಧಿಕೃತವಾಗಿ ದ್ವಿಚಕ್ರ ವಾಹನದಲ್ಲಿ ಬೆಲೆ ಬಾಳುವ ಶ್ರೀಗಂಧದ ತುಂಡುಗಳನ್ನು ಸಾಗಾಣಿಕೆ ಮಾಡುವ ಕಳ್ಳರ ಮೇಲೆ  ಕಾರ್ಯಾಚರಣೆ ಮಾಡಿ ಶ್ರೀಗಂಧದ ತುಂಡುಗಳ ಸಹಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.


ಮಾಗೋಡು ನಿವಾಸಿ ನಾಗೇಂದ್ರ ಮಂಜುನಾಥ ಸಿದ್ಧಿ, ಅಂಕೋಲಾ ತಾಲೂಕಿನ ಕಮ್ಮಾಣಿ ನಿವಾಸಿ
ರವಿ ಕೃಷ್ಣ ಸಿದ್ಧಿ ,ಯಲ್ಲಾಪುರ ಪಟ್ಟಣದ ಕಾಳಮ್ಮ ನಗರ ನಿವಾಸಿಗಳಾದ ಮಂಜುನಾಥ ಪ್ರಭಾಕರ ಸಿದ್ಧಿ, ಲಕ್ಷ್ಮಣ ಪ್ರಭಾಕರ ಸಿದ್ಧಿ, ಬ ಹವ್ಯಾಸಿ ಅರಣ್ಯ ಕಳ್ಳರನ್ನು ಬಂಧಿಸಿದ್ದು ಇನ್ನೋರ್ವ ಆರೋಪಿ ವಜ್ರಳ್ಳಿ ನಿವಾಸಿ ಸತೀಶ ಸಿದ್ಧಿ, ತಲೆ ಮರೆಸಿಕೊಂಡಿರುತ್ತಾನೆ.


ಬಂಧಿತ ಆರೋಪಿಗಳು ಹವ್ಯಾಸಿ ಅರಣ್ಯ ಕಳ್ಳರಾಗಿದ್ದು, ಯಲ್ಲಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಕಟಾವಣೆ ಮಾಡಿ ತುಂಡುಗಳಾಗಿ ತಯಾರಿಸಿ ಹಣದ ಆಸೆಗಾಗಿ ಮಾರಾಟ ಮಾಡುವ ಪ್ರವೃತ್ತಿ ಹೊಂದಿದವರಾಗಿದ್ದು, ಆರೋಪಿಗಳಿಂದ ಸಿಪ್ಪೆ ಕೆತ್ತಿದ ಶ್ರೀಗಂಧ-12 ತುಂಡು 3.80 ಕೆ.ಜಿ,  ಸಿಪ್ಪೆ ಸಹಿತ-17 ತುಂಡು 55 ಕೆ.ಜಿ ಮಾಲಿನೊಂದಿಗೆ ಆರೋಪಿಗಳನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಸಂಖ್ಯೆ:-ಕೆಎ31 ಕೆ4658 ವಶಪಡಿಸಿಕೊಂಡು ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್‌ 84, 86, 87 ಹಾಗೂ 71(ಎ) ಮತ್ತು ಕರ್ನಾಟಕ ಅರಣ್ಯ ನಿಯಮ 1969 ರ ನಿಯಮ 144 ಹಾಗೂ 155 ರ  ಪ್ರಕಾರ ಅರಣ್ಯ ಮೊಕದ್ದಮೆಯನ್ನು ದಾಖಲಿಸಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.    

ಅಬ್ದುಲ್ಅಜೀಜ್‌.ಎ.ಶೇಖ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಯಲ್ಲಾಪುರ ಇವರ ಮಾರ್ಗದರ್ಶದಲ್ಲಿ ಮಂಜುನಾಥ ಹೆಚ್‌ ನಾಯ್ಕ, ವಲಯ ಅರಣ್ಯಾಧಿಕಾರಿ ಯಲ್ಲಾಪುರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ದರ್ಶನ.ವಿ.ಎಸ್‌, ಜಿ.ಸಂತೋಷ, ಶ್ರೀನಿವಾಸ ನಾಯ್ಕ, ಸಂಜಯಕುಮಾರ ಬೋರಗಲ್ಲಿ, ಪ್ರಭಾಕರ ಬಗಲಿ, ಮಂಜುನಾಥ ಗರ್ಭಗುಡಿ, ಶರಣಬಸು ದೇವರ, ಶ್ರೀಧರ ಸಜ್ಜನ, ಉಮೇಶ ಹೊಸಮನಿ ಹಾಗೂ ಗಸ್ತು ಅರಣ್ಯ ಪಾಲಕರಾದ ಶಹನವಾಜ್‌ ಮುಲ್ತಾನಿ, ಗೌಡಪ್ಪ ಗೌಡ ಸು‍ಳ್ಳದ, ರಮೇಶ ಬಡಿಗೇರ, ಬಸವರೆಡ್ಡಿ ರಡ್ಡೇರ, ಸತೀಶ ಕುಂಬಾರ, ಗೌರೀಶ ನಾಯ್ಕ, ರಾಮು ಕೊಕರೆ, ಶಿವಾನಂದ ಯಾವಗಲ್‌, ಗಣೇಶ ವಾಹನ ಚಾಲಕರಾದ ಆನಂದ, ದಿನೇಶ, ಪ್ರಶಾಂತ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಾಗಿದ್ದು ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *