Breaking News

ಪ್ರಗತಿ ವಿದ್ಯಾಲಯ ಭರತನಹಳ್ಳಿ ವಿದ್ಯಾರ್ಥಿಗಳ ಉತ್ತಮ ಕ್ರೀಡಾ ಸಾಧನೆ – ಮಂಚಿಕೇರಿ ವಲಯಕ್ಕೆ ಸಮಗ್ರ ವೀರಾಗ್ರಣಿ ಪಡೆಯಲು ಸಹಕಾರಿ

ಪ್ರತಿಧ್ವನಿ ಯಲ್ಲಾಪುರ : ತಾಲೂಕಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಕ್ರೀಡಾಕೂಟದಲ್ಲಿ ಪ್ರಗತಿ ವಿದ್ಯಾಲಯ ಭರತನಹಳ್ಳಿ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಅತಿಹೆಚ್ಚು ಅಂಕ ಗಳಿಕೆಯೊಂದಿಗೆ ಮಂಚಿಕೇರಿ ವಲಯ ಸಮಗ್ರ ವೀರಾಗ್ರಣಿಯಾಗಿ ಹೊರಹೊಮ್ಮಲು ಸಿಂಹಪಾಲು ಕೊಡುಗೆ ನೀಡಿದ್ದಾರೆ.

• 🏸 ಬಿಬಿಟಿ ಪಂದ್ಯಾವಳಿ: ಬಾಲಕರ ಮತ್ತು ಬಾಲಕಿಯರ ತಂಡ – ಪ್ರಥಮ ಸ್ಥಾನ
• 🏐 ವಾಲಿಬಾಲ್ ಪಂದ್ಯಾವಳಿ: ಬಾಲಕರ ಮತ್ತು ಬಾಲಕಿಯರ ತಂಡ – ದ್ವಿತೀಯ ಸ್ಥಾನ ತಲಾ 5 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ವೈಯಕ್ತಿಕ ವಿಭಾಗದ ಸಾಧಕರು

• ಸಂಗಮ್ ನಾಯ್ಕ್ – ಲಾಂಗ್ ಜಂಪ್ ಪ್ರಥಮ ಸ್ಥಾನ
100 ಮೀಟರ್ ಓಟ ಪ್ರಥಮ ಸ್ಥಾನ
• ರೋಹಿತ್ ಸಿದ್ದಿ – ಚಕ್ರ ಎಸೆತ ಪ್ರಥಮ ಸ್ಥಾನ

• ಸಂಗಮ್ ನಾಯ್ಕ್ – 200 ಮೀಟರ್ ಓಟ ದ್ವಿತೀಯ ಸ್ಥಾನ
• ಕಿರಣ್ ಶಳ್ಕೆ – ತ್ರಿವಿಧ ಜಿಗಿತ ದ್ವಿತೀಯ ಸ್ಥಾನ
ವಂದನ ಮರಾಠಿ – ಎತ್ತರ ಜಿಗಿತ ದ್ವಿತೀಯ ಸ್ಥಾನ

  • ಸಿಂಚನ ನಾಯ್ಕ್ – 200 ಮೀಟರ್ ಓಟ ತೃತೀಯ ಸ್ಥಾನ
    • ರೋಹಿತ್ ಸಿದ್ದಿ – ಗುಂಡು ಎಸೆತ ತೃತೀಯ ಸ್ಥಾನ
    • ಸೌಜನ್ಯ ನಾಯ್ಕ್ – 400 ಮೀಟರ್ ಓಟ ತೃತೀಯ ಸ್ಥಾನ
    • ಮೇಘನಾ ಮರಾಠಿ – ನಡಿಗೆ ಸ್ಪರ್ಧೆ ತೃತೀಯ ಸ್ಥಾನ
    • ಧನ್ಯ ನಾಯಕ್ – 400 ಮೀಟರ್ ಹರ್ಡಲ್ಸ್ ತೃತೀಯ ಸ್ಥಾನ
  • ಚೆಸ್ – ಮೇದಿನಿ ಹೆಗಡೆ ಜಿಲ್ಲಾ ಮಟ್ಟಕ್ಕೆ ಆಯ್ಕೆ
  • ಬಾಲಕಿರ ವಿಭಾಗದ ರಿಧಮಿಕ್ ಯೋಗಾದಲ್ಲಿ ಸಾನಿಕ ಮರಾಠಿ ಮತ್ತು ಪವಿತ್ರ ಮರಾಠಿ ಪ್ರಥಮ ಸ್ಥಾನ
  • ಆರ್ಟಿಸ್ಟಿಕ್ಟ್ ಯೋಗದಲ್ಲಿ ಜನನಿಗೊಂಡ ಬಾಳ ಮತ್ತು ಅದಿತಿ ದೇವಡಿಗ ದ್ವಿತೀಯ
  • ಬಾಲಕರ ರಿದಮಿಕ್ ಯೋಗದಲ್ಲಿ ದಿಗಂತ್ ನಾಯ್ಕ್ ಮತ್ತು ನವೀನ್ ನಾಯ್ಕ್ ಪ್ರಥಮ
  • ಆರ್ಟಿಸ್ಟಿಕ್ ಯೋಗದಲ್ಲಿ ದಿಗಂತ್ ನಾಯ್ಕ್ ಮತ್ತು ಮಧುಕೇಶ್ವರ್ ನಾಯ್ಕ್ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

14 ವಯೋಮಿತಿ ಒಳಗಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ

  • ತನು ದೇವಾಡಿಗ ಉದ್ದ ಜಿಗಿತ ಪ್ರಥಮ, 100 ಮೀ ಅಡೆತಡೆ ಓಟದಲ್ಲಿ ದ್ವಿತೀಯ,100 ಮೀಟರ್ ಓಟ ದ್ವಿತೀಯ,
  • ಬಾಲಕರು ಹಾಗೂ ಬಾಲಕಿಯರ ರಿಲೇ ದ್ವಿತೀಯ,
  • ದೀಪಾ ಮಡಿವಾಳ ಎತ್ತರ ಜಿಗಿತ ಪ್ರಥಮ,
  • ವಿಠ್ಠಲ ಡೋಯಿಪಡೆ 200ಮೀ ತೃತೀಯ,
  • ಜಾನು ಕೊಕ್ರೆ 400ಮೀ ದ್ವಿತೀಯ.
  • ಬಾಲಕ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ದ್ವಿತೀಯ ತಲಾ 5 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಗತಿ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಶಿಕ್ಷಕರ ಬಳಗ ಅಭಿನಂದನೆ ಹೇಳಿದ್ದಾರೆ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *