Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಯಲ್ಲಾಪುರದ ಕಣ್ಣೀಗೆರೆಯಲ್ಲಿ ಯಶಸ್ವಿಯಾದ ” ಆಲೆಮನೆ ಹಬ್ಬ” ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟನೆ..

. ಪ್ರತಿಧ್ವನಿ ಯಲ್ಲಾಪುರ :  ಅಂದು ಆಲೆಮನೆ ಹೆಸರಿನಲ್ಲಿ ಅಕ್ಕಪಕ್ಕದ ಮನೆಗಳ ರೈತಾಪಿ ವರ್ಗದವರು ಒಂದೆಡೆ ಸೇರಿ ಬೆಲ್ಲ ಮಾಡುವ ಕಾಯಕದಲ್ಲಿ ಒಬ್ಬರಿಗೊಬ್ಬರು ಕೈ ಜೋಡಿಸಿ ಸಹಕರಿಸುತ್ತಾ ಕಬ್ಬಿನ ಹಾಲನ್ನು ಸವಿಯುತ್ತಿದ್ದರು. ಸಂಭ್ರಮಿಸುತ್ತಿದ್ದರು.  ಗ್ರಾಮೀಣ ಭಾಗದಲ್ಲಿ  ಹಿಂದಿನಕಾಲದ ಸಾಂಪ್ರದಾಯಿಕ ಪದ್ದತಿಗಳು ಇಂದಿಗು ಜೀವಂತವಾಗಿದೆ. ಅದರಲ್ಲಿ ಆಲೆಮನೆ ಹಬ್ಬ ಎಲ್ಲರನ್ನು ಒಂದೆಡೆಗೆ ಸೇರಿಸುತ್ತಾ ರೈತ ಬಾಂಧವ್ಯವನ್ನು ಗಟ್ಟಿಯಾಗಿಸುತ್ತಿದೆ ಇಂತಹ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ …

Read More »

ತಾಮೀರ್ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಕ್ತರ್ ಅಲಿ ಮೊಹ್ಮದ್ ಎ ಶೇಖ್ ಶಾಸಕ ಹೆಬ್ಬಾರ್ ಭೇಟಿಯಾಗಿ ಸಂತಸ ಹಂಚಿಕೊಂಡರು.

ಪ್ರತಿಧ್ವನಿ ಯಲ್ಲಾಪುರ : ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ತಾಮೀರ್-ಕೋ-ಆಪ್-ಸೊಸೈಟಿ ಚುನಾವಣೆ ನಡೆದಿದ್ದು ಫಲಿತಾಂಶ ರವಿವಾರ ಘೋಷಣೆಯಾಗಿದ್ದು ಯಲ್ಲಾಪುರ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಮಾಜ ಸೇವಕ ದಿವಂಗತ ಮೊಹ್ಮದ್ ಎ ಶೇಖ್ ಅವರ ಪುತ್ರ ಅಕ್ತರ್ ಅಲಿ ಮೊಹ್ಮದ್ ಶೇಖ್ ಪ್ರಚಂಡ ಬಹುಮತಗಳಿಂದ ಗೆಲುವು ಸಾಧಿಸಿದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಭೇಟಿಯಾಗಿ ಸಂತಸ ಹಂಚಿಕೊಂಡರು. ಈ ವೇಳೆಯಲ್ಲಿ ಸಂಸ್ಥೆಯ ಪ್ರಗತಿಗೆ ತಮ್ಮ …

Read More »

ತಾಮೀರ್ ಬ್ಯಾಂಕ್ ಚುನಾವಣೆಯಲ್ಲಿ ದಿವಂಗತ ಮಹಮ್ಮದ್ ಗೌಸ್ ಪುತ್ರ ಅಕ್ತರ್ ಅಲಿ ಜಯಭೇರಿ.

ಪ್ರತಿಧ್ವನಿ ಯಲ್ಲಾಪುರ : ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ತಾಮಿರ_ ಕೊ_ ಆಪ್ ಸೊಸೈಟಿ ಅಂಕೋಲಾ ಇದರ ಆಢಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ  ಅಕ್ತರ್ ಅಲಿ ಮಹಮ್ಮದ್ ಗೌಸ್ ಎ ಶೇಖ್ ಪ್ರಚಂಡ ಗೆಲುವು ದಾಖಲಿಸುವ ಮೂಲಕ ಜಯಭೇರಿ ಭಾರಿಸಿದ್ದಾರೆ. ಕಳೆದ 16/02/2025 ರಂದು ಅಂಕೋಲಾದಲ್ಲಿ ಚುನಾವಣೆ ನಡೆಸಲಾಗಿತ್ತು. ಕೆಲವು ಶಾಖೆಗಳ ಪಲಿತಾಂಶದ ಬಗ್ಗೆ ಮಾನ್ಯ ಉಚ್ಛ ನ್ಯಾಯಾಲಯ ಧಾರವಾಡ ಪೀಠದಲ್ಲಿ ಪ್ರಕರಣ ನಡೆಯುತ್ತಿದ್ದುದರಿಂದ …

Read More »

ಜೋಡುಕೆರೆಯಲ್ಲಿನ ಮೊಸಳೆ ರಾತ್ರಿ ವೇಳೆಯಲ್ಲಿ ದಡಕ್ಕೆ ಬರುತ್ತಿರುವುದು ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಜೋಡುಕೆರೆಯಲ್ಲಿ ಕೆಲವು ತಿಂಗಳ ಹಿಂದೆ ಮೊಸಳೆಯೊಂದು ಕಾಣಿಸಿದ್ದು ನಂತರ ಅರಣ್ಯ ಇಲಾಖೆಯ ಗಮನಕ್ಕೆ ತಂದು ದಾಂಡೇಲಿಗೆ ಸಾಗಿಸುವ ಪ್ರಯತ್ನ ಸಾಗಿತ್ತು. ಆದರೆ ಸಾದ್ಯವಾಗಿರಲಿಲ್ಲ ಜಾತ್ರೆ ಸಂದರ್ಭದಲ್ಲಿ ಬೋನ್ ಇರಿಸಿ ಮೊಸಳೆ ಹಿಡಿಯುವ ಪ್ರಯತ್ನ ಸಾಗಿತ್ತು ಆದರೆ ಅದುಕೂಡ ವಿಫಲವಾಯಿತು ಇದೀಗ ರಾತ್ರಿ ವೇಳೆಯಲ್ಲಿ ದಡದ ಮೇಲೆ ಬಂದಿರುವ ಮೊಸಳೆಯ ವಿಡಿಯೋ ಸ್ಥಳೀಯ ಒಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ. ಮೊಸಳೆ ವಿಡಿಯೋ ಕ್ಲಿಪ್ …

Read More »

ಶ್ರೀ ಸತ್ಯಸಾಯಿ ಪ್ರೇಮ ವಾಹಿನಿ ರಥಯಾತ್ರೆಗೆ ಅದ್ದೂರಿ ಸ್ವಾಗತ: ಛತ್ರಕೂರ್ವೆಯಲ್ಲಿ ಭಕ್ತಿ-ಭಾವದ ಮಹೋತ್ಸವ

ಪ್ರತಿಧ್ವನಿ ಯಲ್ಲಾಪುರ : ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಶ್ರೀ ಸತ್ಯಸಾಯಿ ಪ್ರೇಮಪ್ರವಾಹಿನಿ ರಥಯಾತ್ರೆ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಪುಟ್ಟಪರ್ತಿಯ ಪ್ರಶಾಂತಿ ನಿಲಯಂನಿಂದ ಹೊರಟ ಐದು ಪ್ರೇಮಪ್ರವಾಹಿನಿ ರಥಗಳು ದೇಶದಾದ್ಯಂತ ಸಂಚರಿಸುತ್ತಿದ್ದು ನಮ್ಮ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಂಚರಿಸಿ ಕುಮಟಾ ತಾಲೂಕಿಗೆ ಆಗಮಿಸಿದ ರಥವು ಛತ್ರಕೂರ್ವೆ ಗ್ರಾಮದಲ್ಲಿ ವಾಸ್ತವ್ಯ ಮಾಡುವುದರೊಂದಿಗೆ ಗ್ರಾಮದ ಜನತೆ ಪುನೀತರಾದದ್ದಲ್ಲದೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದ ವಾತಾವರಣವನ್ನು ಮೂಡಿಸಿತು. ಮಾರ್ಚ್ 19 …

Read More »

ಬಿಲ್ಲಿಗದ್ದೆ ಅರಣ್ಯ ಒತ್ತುವರಿ ಪ್ರಕರಣ ದಿನದಿಂದ ದಿನಕ್ಕೆ ಜಟಿಲ ಆರೋಪ-ಪ್ರತ್ಯಾರೋಪ.

ಪ್ರತಿಧ್ವನಿ ಯಲ್ಲಾಪುರ : ಕೆಲ ದಿನಗಳ ಹಿಂದೆ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಿಲ್ಲಿಗದ್ದೆ ಪರಿಸರದಲ್ಲಿ ಅರಣ್ಯ ಒತ್ತುವರಿಯಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ – ಪ್ರತ್ಯಾರೋಪ ಕೇಳಿ ಬಂದಿದ್ದವು ಅದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಬೆಳವಣಿಗೆಗಳು ನಡೆಯುತ್ತಿದ್ದು ಓದುಗರಿಗೆ ತಿಳಿಸಲೇ ಬೇಕಿದೆ.ನಮ್ಮ ಕಣ್ಣ ಮುಂದೆ ನಿಧಾನವಾಗಿ ಹಂತಹಂತದಲ್ಲಿ ಸ್ಥಳಿಯರೊಬ್ಬರು ಅರಣ್ಯ ಒತ್ತುವರಿ ಮಾಡುತ್ತ ಅನಧಿಕೃತ ರಸ್ತೆ ನಿರ್ಮಿಸಿ ಅಕ್ರಮ ಎಸಗಲು ಪ್ರಯತ್ನಿಸುತ್ತಿರುವುದನ್ನು ಕಂಡರು ನಮಗೇಕೆ ಉಸಾಬರಿ ಎಂದು ಸುಮ್ಮನಿದ್ದೆವು ಸದ್ಯ …

Read More »

ಯಾರು ಆ ಸಾಮಾನ್ಯ ಕಾರ್ಯಕರ್ತ ಯಲ್ಲಾಪುರ ಕ್ಷೇತ್ರದ ಬಿಜೆಪಿ ಚುಕ್ಕಾಣಿ ಹಿಡಿಯೋ ನಾಯಕ.??

ಕೇಬಲ್ ನಾಗೇಶ್, ಯಲ್ಲಾಪುರ..🖋ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಶೀಘ್ರವಾಗಿ ಬರಲಿದೆ ಸಾಲು ಸಾಲು ಚುನಾವಣೆಗಳ ಪರ್ವ. ರಾಜಕೀಯ ಪಕ್ಷಗಳ ತಯಾರಿ ಒಳಗಿಂದೊಳಗೆ ಸಾಗುತ್ತಿದ್ದು ತೆರೆ ಮರೆಯಲ್ಲಿ ಬಾರಿ ಆಟಗಳೆ ನಡೆಯುತ್ತಿದೆ. ಅವುಗಳಲ್ಲಿ ಬಾರಿ ಸ್ವಾರಸ್ಯಕರವಾದ ಚರ್ಚೆಗೆ ಗುರಿಯಾಗುತ್ತಿರುವುದು ಮಾತ್ರ ಬರಲಿರುವ ಚುನಾವಣೆಗಳನ್ನು ಎದುರಿಸುವ ಬಿಜೆಪಿ ಪಾಳಯಕ್ಕೆ ರಣಧೀರನಾರು.??? ಎಂಬುದಾಗಿದೆ. ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಯುತ್ತಿರುವ ಕಾಲಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವವರೆಗೆ ಯಲ್ಲಾಪುರ …

Read More »

ಆಧುನಿಕ ಭಗೀರಥ ಶಾಸಕ ಹೆಬ್ಬಾರ್ ಬೊಮ್ಮನಳ್ಳಿ ನೀರು ತರುವ ಪ್ರಯತ್ನ – ನಿರಂತರ ಪೈಪ್ ಲೈನ್ ಕಾಮಗಾರಿ..

ಕೇಬಲ್‌ ನಾಗೇಶ್..🖋 ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಆಧುನಿಕ ಭಗೀರಥ ಎಂದೇ ಕರೆಯಬೇಕಿದೆ. ಕಾರಣ ಹಿಡಿದ ಪಟ್ಟು ಸಡಿಲಿಸದೆ ಸರ್ಕಾರ ಮಟ್ಟದಲ್ಲಿ ನಿರಂತರ ಪ್ರಯತ್ನಸಿ ಕೋಟ್ಯಾಂತರ ಹಣ ತಂದು ಕೆರೆಗಳಿಗೆ ನೀರು ತುಂಬುವ ಯೋಜನೆ ಅನುಷ್ಟಾನಗೊಳಿಸಿ ಬಯಲು ಸೀಮೆ ಪ್ರದೇಶವೆಲ್ಲಾ ಹಸಿರಾಗಿ ಕಂಗೊಳಿಸುವಂತೆ ಮಾಡಿದ್ದಾಗಿದೆ.   ಇದೀಗ ಯಲ್ಲಾಪುರ ಪಟ್ಟಣದ ಭವಿಷ್ಯದ ಚಿಂತನೆಯಲ್ಲಿ ದೂರದ ಬೊಮ್ಮನಹಳ್ಳಿ ವಾಟರ್ ಪ್ರಾಜೆಕ್ಟ್ ಅನುಷ್ಠಾನ ಗೊಳಿಸುತ್ತಿದ್ದು …

Read More »

ಭರಣಿ ಕಾಶಿ ವಿಶ್ವನಾಥ ಮಂದಿರಕ್ಕೆ ಸಂಸದ ಕಾಗೇರಿ ಭೇಟಿ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಶಕ್ತಿಶಾಲಿ ಶೈವ ಕ್ಷೇತ್ರ ಭರಣಿ ಶ್ರೀ ಕಾಶಿ ವಿಶ್ವನಾಥ ಮಂದಿರಕ್ಕೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಟಿ ನೀಡಿ ಕಾಶಿ ವಿಶ್ವನಾಥನ ದರ್ಶನ ಪಡೆದರು . ದೇವಸ್ಥಾನಕ್ಕೆ ಸರಕಾರದಿಂದ ಅನುದಾನ ನೀಡುವ ಭರವಸೆ ನೀಡಿದರು ಮತ್ತು ಧರ್ಮದರ್ಶಿಗಳಾದ  ಎ .ಜಿ .ನಾಯ್ಕ ಭರಣಿ ಯವರ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಈ ಸಂಧರ್ಭದಲ್ಲಿ ಯಲ್ಲಾಪುರ ತಾಲೂಕ ಪಂಚಾಯತ …

Read More »

ಓದಿನಷ್ಟೇ ಕ್ರೀಡೆಗೂ ಮಹತ್ವ ನೀಡಬೇಕು – ಹರಿಪ್ರಕಾಶ್ ಕೋಣೆಮನೆ

ಪ್ರತಿಧ್ವನಿ ಯಲ್ಲಾಪುರ: ಓದಿನಷ್ಟೇ ಕ್ರೀಡಗೂ ಮಹತ್ವ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿದ್ದ ಪ್ರತಿಭೆಯನ್ನು ಗುರುತಿಸಬೇಕು ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು. ವಿಶ್ವದರ್ಶನ ಬಿಸಿಎ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದರೂ ಅದನ್ನು ಚೆನ್ನಾಗಿ ಮಾಡುವ ತಂಡ ವಿಶ್ವದರ್ಶನದಲ್ಲಿ ಇರುವುದರಿಂದ ನಾವು ಯಶಸ್ವಿಯಾಗುತ್ತಿದ್ದೇವೆ . ಕ್ರೀಡಾ ಮನೋಭಾವದಿಂದ ಆಟವಾಡಬೇಕು ಕ್ರೀಡೆಯ ಮೂಲಕ ವಿದ್ಯಾರ್ಥಿಗಳು …

Read More »