Breaking News

ಯಲ್ಲಾಪುರ ಸೈಹ್ಯಾದ್ರಿ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶಗಳ ಸಹಕಾರಿ ಸಂಘದ  ಸಾಮಾನ್ಯ ಸಭೆನಡೆಸದಿರುವುದು ಅನುಮಾನಕ್ಕೆ ಕಾರಣವಾಗಿದೆ ತನಿಖೆಯಾಗಲಿ.


ಪ್ರತಿಧ್ವನಿ ಯಲ್ಲಾಪುರ : ಬುಡಕಟ್ಟು ಸಿದ್ದಿ ಸಮುದಾಯದ ಆರ್ಥಿಕವಾಗಿ ಸದೃಡವಾಗಲು ಸ್ಥಾಪಿತವಾದ ಸೈಹ್ಯಾದ್ರಿ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶಗಳ ಸಹಕಾರಿ ಸಂಘದಲ್ಲಿ ಇತ್ತೀಚಿನ ಬೆಳವಣಿಗೆ ಸರಿ ಇಲ್ಲ ಎಂಬ ಅನುಮಾನ ಕಾಡಲು ಪ್ರಾರಂಭವಾಗಿದೆ.
ವಾರ್ಷಿಕವಾಗಿ ಸರ್ಕಾರಿ ನಿಯಮಾವಳಿಯಂತೆ ನಡೆಸಲೇಬೇಕಾದ ಸರ್ವ ಸಾದಾರಣ ಸಭೆಯು ನಡೆಸದಿರುವುದು ಈ ಎಲ್ಲಾ ಅನುಮಾನಗಳಿಗೆ ಪುಷ್ಟಿ ನೀಡುತ್ತದೆ.


ಸಂಘವೆ ನಿರ್ಣಯಿಸಿ ಸರ್ವ ಸಾದಾರಣ ಸಭೆಯ ಕರೆಯೋಲೆ ಎಲ್ಲಾ ಸದಸ್ಯರಿಗು ನೀಡಿದ್ದು ಯಲ್ಲಾಪುರದ ವೆಂಕಟರಮಣ ಮಠದಲ್ಲಿ ದಿನಾಂಕ 24-9-26 ರಂದು ನಡೆಸಬೇಕಿತ್ತು ಆದರೆ ಸಭೆಗೆ ಹೋದವರಿಗೆ ಅಲ್ಲಿ ಶಾಕ್ ಕಾದಿತ್ತು ಕಾರಣ ಸಭೆ ನಡೆಸುವ ಆಡಳಿತ ಮಂಡಳಿ ಸದಸ್ಯರೆ ಅಲ್ಲಿರಲಿಲ್ಲ ಸಭೆ ನಡೆಯಲಿಲ್ಲ ಈ ಮಾಹಿತಿಯನ್ನು ಸಹ ಸದಸ್ಯರಿಗೆ ಪೂರ್ವದಲ್ಲಿ ತಿಳಿಸುವ ಸೌಜನ್ಯವನ್ನು ತೋರದ ಆಡಳಿತ ಮಂಡಳಿ ಪುನಃ ಸಭೆ ನಡೆಸದೆ ಸರ್ಕಾರಿ ಕಾನೂನು ಗಾಳಿಗೆ ತೂರಿದ್ದು. ಆಡಳಿತ ಮಂಡಳಿ ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆಯನ್ನು ಉಳಿಸಿಕೊಂಡಿಲ್ಲ.


ಇಷ್ಟೆಲ್ಲಾ ಅವಾಂತರಗಳು ಸಂಘದಲ್ಲಿ ನಡೆಯುತ್ತಿರುವುದು ಕಂಡರೆ ಎಲ್ಲೋ ಏನೋ ಸಮಸ್ಯೆ ಇದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದ್ದು ಸಂಬಂಧಿಸಿದ ಸಹಕಾರಿ ಇಲಾಖೆ ಅಧಿಕಾರಿಗಳು ತನಿಖೆ ಮಾಡಿ ಒಮ್ಮೆ ಸಂಘದ ಆರ್ಥಿಕ ಪರಿಸ್ಥಿತಿ ಸದಸ್ಯರಿಗೆ ತಿಳಿಸಬೇಕಿದೆ ಎಂಬುದು ಶೇರುದಾರ ಸದಸ್ಯರಾದ ನಮೆಲ್ಲರ ಕೋರಿಕೆಯಾಗಿದೆ ಎಂದು ಸಂಘದ ಸದಸ್ಯರುಗಳಾದ ಗೋಪಾಲ ರಾಮ ಸಿದ್ದಿ, ಲಾರೆನ್ಸ್‌ ಕೈತಾನ್ ಸಿದ್ದಿ, ಜೊನ್ ಕೋಸ್ತಾ ಸಿದ್ದಿ, ಗಣಪತಿ ಆರ್ ಸಿದ್ದಿ, ಶಂಕರ್ ಎನ್ ಸಿದ್ದಿ ಸೇರಿದಂತೆ ಹಲವರು ಸಂಘದ ನಡೆಯ ವಿರುದ್ದ ಅಸಮದಾನ ಹೊರಹಾಕಿ ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *