Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಯೋಗ ಇದ್ದರೆ ರೋಗ ಇರದು – ವೇದ ಪಂಡಿತ ಗೋಪಾಲಕೃಷ್ಣ ಭಟ್ ಹಂಡ್ರಮನೆ.

ಪ್ರತಿಧ್ವನಿ ಯಲ್ಲಾಪುರ : ಇಂದ್ರಿಯಗಳು ಸದೃಢವಾದರೆ ಮನಸ್ಸು ಸದೃಢವಾಗುತ್ತದೆ. ಯೋಗಕ್ಕೆ ಭಾರತವೇ ಪ್ರಧಾನ. ಯೋಗ ಇದ್ದರೆ ರೋಗ ಇರುವುದಿಲ್ಲ , ಹಿರಿಯರನ್ನು ಗೌರವಿಸುವುದು ನಮ್ಮ ಭಾರತೀಯ ಪರಂಪರೆ. ಮಾತೃ ದೇವೋ ಭವ ಎಂದು ಹೆತ್ತ ತಾಯಿಯನ್ನು ದೇವರ ಸ್ಥಾನದಲ್ಲಿ ನೋಡುವ ಸಂಸ್ಕೃತಿ ನಮ್ಮದು. ನಾವು ತಾಯಿ ತಂದೆಗೆ ಪ್ರತಿದಿನವೂ ನಮಸ್ಕರಿಸಬೇಕು. ಗುರುಗಳನ್ನು ದೇವರ ಸ್ಥಾನದಲ್ಲಿ ನೋಡಬೇಕು. ಇದು ನಮ್ಮ ಭಾರತೀಯ ಸಂಸ್ಕೃತಿ. ಇದು ಬೆಳಕನ್ನು ಕಾಣುವ ಸಂಸ್ಕೃತಿ. ಗುರು ಹಿರಿಯರಿಗೆ …

Read More »

ಮೂಲಭೂತ ಸೌಕರ್ಯ ವಂಚಿತ  ಸಣ್ಣ ಪಾನಿಗುಂಡಿ ಗ್ರಾಮಕ್ಕೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವಕುಮಾರ್ ಭೇಟಿ ಪರಿಶೀಲನೆ.

ಪ್ರತಿಧ್ವನಿ ಯಲ್ಲಾಪುರ : ಕಳೆದ ಕೆಲವು ದಿನಗಳಿಂದ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಣ್ಣ ಪಾನಿಗುಂಡಿ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದರ ಕುರಿತು ಪ್ರತಿಧ್ವನಿ ನಿರಂತರ ಸುದ್ದಿ ಪ್ರಕಟಿಸುತ್ತಿದ್ದು ಇದೀಗ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವಕುಮಾರ್ ವಿರಕ್ತಮಠ ಮಂಗಳವಾರ ಬೇಟಿ ನೀಡಿದ್ದು ಗ್ರಾಮಸ್ಥರಲ್ಲಿ ಚರ್ಚಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ವಿಟ್ಟು ದೋಂಡು ಪಟಕಾರೆ ಸ್ಥಳದಲಿದ್ದು ಗ್ರಾಮದ ಹಿರಿಯರೊಡಗೂಡಿ ಪಿ.ಡಿ.ಒ ಅವರಿಗೆ ನೈಜ ಪರಿಸ್ಥಿತಿ ವಿವರಿಸಿ ಪ್ರತ್ಯಕ್ಷವಾಗಿ …

Read More »

ಕೊನೆಗು ವಿಶೇಷ ನ್ಯಾಯಾಲಯದ ಕದ ತಟ್ಟಿದ ಹುಟಕಮನೆ ಗುಡ್ಡ ನೆಲಸಮ – ಅರಣ್ಯ ನಾಶ – ಭೂ ಕಬಳಿಕೆ ಮಹಾ ಪ್ರಕರಣ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಕಳೆದ ವರ್ಷ ಬಾರಿ ಚರ್ಚೆಗೆ ಗ್ರಾಸವಾಗಿದ್ದ ” ಹುಟಕ ಮನೆ ” ಗುಡ್ಡ ನೆಲಸಮ, ಅರಣ್ಯ ನಾಶ,ಭೂ ಕಬಳಿಕೆ ಮಹಾ ಪ್ರಕರಣ ನಿಧಾನವಾಗಿ ತಣ್ಣಗಾಗಿತ್ತು ಆದರೆ ಸಾಮಾಜಿಕ ಹೋರಾಟಗಾರ ಮಂಜುನಾಥ ಹೆಗಡೆ ಬಿಡದ ಛಲದಿಂದ ಪ್ರಕರಣ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಂಗಳಕ್ಕೆ ಅಧಿಕೃತವಾಗಿ ತಲುಪಿಸಿದ್ದು ಸತ್ಯಾಸತ್ಯತೆ ಹೊರ ಬರಲಿದೆ ಅಲ್ಲದೆ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಲಿದೆ ಎಂಬುದು ಪ್ರಕರಣದ ಬೆನ್ನು …

Read More »

ಯಲ್ಲಾಪುರದಲ್ಲಿ ನಡೆದ ಜನ ಶಿಕ್ಷಣ ಸಂಸ್ಥಾನದ ಸಾಮರ್ಥ್ಯಭಿವೃದ್ದಿ ತರಭೇತಿ ಶಿಭಿರ.

ಪ್ರತಿಧ್ವನಿ ಯಲ್ಲಾಪುರ : ಜನ ಶಿಕ್ಷಣ ಸಂಸ್ಥಾನ, ಉತ್ತರ ಕನ್ನಡ, ಜಿಲ್ಲೆಯ ಒಂದು ವೃತ್ತಿಪರ ಸಂಸ್ಥೆ ಆಗಿ, ನೂರಾರು ಜನರ ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಟ್ಟಿದೆ ಎಂದು ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ, ಆರ್. ಡಿ ಜನಾರ್ಧನ ಅಭಿಪ್ರಾಯ ಪಟ್ಟರು. ಅವರು ಜನ ಶಿಕ್ಷಣ ಸಂಸ್ಥಾನ ಉತ್ತರ ಕನ್ನಡ ಇದರ ಆಶ್ರಯದಲ್ಲಿ  ಯಲ್ಲಾಪುರದ ಕ್ರಿಯೇಟಿವ್ ಸಂಸ್ಥೆ ಆವರಣದಲ್ಲಿ ನಡೆದ “ ತರಬೇತಿ ಸಂಪನ್ಮೂಲವ್ಯಕ್ತಿಗಳಿಗಾಗಿ ನಡೆದ ಒಂದು …

Read More »

ಸಣ್ಣ ಪಾನಿಗುಂಡಿ ಗ್ರಾಮಕ್ಕೆ ತಹಶಿಲ್ದಾರರ ಸಹಿತ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ..

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಣ್ಣ ಪಾನಿಗುಂಡಿ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಮತ್ತು ಉದಯಕಾಲ ಸುದ್ದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ತಾಲೂಕು ದಂಢಾದಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಭೇಟಿಯಾಗಿ ವಾಸ್ತವಿಕತೆ ಅರಿತರು. ತಹಶಿಲ್ದಾರ್ ಚಂದ್ರಶೇಖರ ಹೊಸಮನಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿನ ಸಮಸ್ಯೆಗಳನ್ನು ಆಲಿಸಿ ಪರಿಸ್ಥಿತಿ ಯನ್ನು ಪ್ರತ್ಯಕ್ಷವಾಗಿ ಕಂಡರು. …

Read More »

ತೃತೀಯ ಭಾಷೆ “ಹಿಂದಿ” ವಿಷಯಕ್ಕೆ ಗ್ರೇಡಿಂಗ್ ಪದ್ಧತಿ – ವಿದ್ಯಾರ್ಥಿಗಳಲ್ಲಿ ಗೊಂದಲ – ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ

ಪ್ರತಿಧ್ವನಿ ಯಲ್ಲಾಪುರ : ಎಸ್.ಎಸ್.ಎಲ್.ಸಿ ಹಿಂದಿ ಪರೀಕ್ಷೆ ಮಾರ್ಚ 31 ರ ಮಂಗಳವಾರ ಜರುಗುತ್ತಿರುವ ಸಂದರ್ಭದಲ್ಲಿ ಸರಕಾರ ಏಕಾಏಕಿಯಾಗಿ ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಾಗಿ ಗ್ರೇಡಿಂಗ್ ಪದ್ಧತಿಯನ್ನು ಜಾರಿಗೆ ತರಲು ಕೈಕೊಂಡ ನಿರ್ಧಾರ ವಿದ್ಯಾರ್ಥಿಗಳಲ್ಲಿ ಆತಂಕ ಹಾಗೂ ಗೊಂದಲಕ್ಕೆ ಕಾರಣವಾಗಿದೆ ಮತ್ತು ಇದು ದುಡಿಕಿನ ನಿರ್ಧಾರ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಏನೇ ಬದಲಾವಣೆ ತರುವದಿದ್ದರೂ ಶೈಕ್ಷಣಿಕ …

Read More »

ಯಲ್ಲಾಪುರದಲ್ಲಿ ನಡೆದ HESCOM POWER CUP -2026 ಸೌಹಾರ್ದ ಕ್ರಿಕೇಟ್ ಪಂದ್ಯಾವಳಿ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾಳಮ್ಮ ನಗರ ತಾಲೂಕು ಕ್ರೀಡಾಂಗಣದಲ್ಲಿ ಯಲ್ಲಾಪುರ ಹೆಸ್ಕಾಂ ವತಿಯಿಂದ ” ಹೆಸ್ಕಾಂ ಪವರ್ ಕಪ್ – 2026 ” ಸೌಹಾರ್ದ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯವನ್ನು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಮಾಕಾಂತ ನಾಯ್ಕಉದ್ಘಾಟಿಸಿದರು. ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಛಾಯಪ್ಪ ಮುರಡಿ ಆಟಗಾರರನ್ನುಪರಿಚಯಿಸಿದರು.ಸಹಾಯಕ ಲೆಕ್ಕಾಧಿಕಾರಿ ವಿನಯ್ ಶೇಟ್ ಆಟಗಾರರನ್ನು ಅಭಿನಂದಿಸಿದರು ಈ ಸಂದರ್ಭದಲ್ಲಿ ನೌಕರರ ಸಂಘದ …

Read More »

ಯಡಳ್ಳಿ ಶ್ರೀ ರಾಮನಾಥೇಶ್ವರ ದೇವಸ್ಥಾನ ಶಿಲಾಮಯ ದೇಗುಲ ಏ,26,27,28 ರಂದು ಪುನರ್ ಪ್ರತಿಷ್ಟಾಪನೆ.

ಪ್ರತಿಧ್ವನಿ ಯಲ್ಲಾಪುರ : ಇದೇ ಬರುವ ಏಪ್ರಿಲ್ ತಿಂಗಳಿನ 26 ,27 ,28, /2026ರಂದು ಯಡಳ್ಳಿ ಯಲ್ಲಿ ನಡೆಯುವ ಶ್ರೀ ರಾಮನಾಥೇಶ್ವರ ದೇವಸ್ಥಾನದ ಶಿಲಾಮಯ, ನೂತನ ಕಟ್ಟಡದ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆಮಂತ್ರಣ ಪತ್ರಿಕೆಯನ್ನ ಊರಿನ ಹಿರಿಯರೆಲ್ಲ ಸೇರಿ ವಿದ್ಯುಕ್ತವಾಗಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ,ಎಂ ಕೆ ಭಟ್ ಯಡಳ್ಳಿ, ಶಿವಕುಮಾರ್ ಭಟ್, ಯಡಳ್ಳಿ, ರಾಮಕೃಷ್ಣ ಭಟ್ , ಬಿ ಕೆ ಭಟ್ ಯಡಳ್ಳಿ ಮಂಜುನಾಥ್ ಗೌಡ ಕೃಷ್ಣಮೂರ್ತಿ …

Read More »

ಒಲ್ಲದ ಮದುವೆಗೆ ಮನೆ ಬಿಟ್ಟ ಅಣ್ಣ – ಹುಡುಕಿ ಕೊಡುವಂತೆ ಕಂಪ್ಲೇಂಟ್ ಕೊಟ್ಟ ತಮ್ಮ!!.

ಪ್ರತಿಧ್ವನಿ ಯಲ್ಲಾಪುರ : ಅವನದು ಕಾರ್ಪೆಂಟರ್ ವೃತ್ತಿ ತಾಲ್ಲೂಕಿನ ವಡೇಹುಕ್ಕಳಿ ಸಮೀಪ ಕನ್ನಡಗಲ್ ಚಿನ್ನೆಹುಕ್ಕಳ್ಳಿ ಗ್ರಾಮದವನು ಮದುವೆ ಒಲ್ಲೆ ಎಂದು ಮನೆಯಿಂದ ಕಾಲ್ಕಿತ್ತಿದ್ದಾನೆ ಅಣ್ಣನನ್ನು ಹುಡುಕಿಕೊಡಿ ಎಂದು ಕಾಣೆಯಾದವನ ತಮ್ಮ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಸತೀಶ ರಮೇಶ ಮಳಿಕ (26) ಎಂಬ ಯುವಕನೆ ಕಾಣೆಯಾದವನಾಗಿದ್ದು ತನ್ನ ತಮ್ಮವಿಷ್ಣು ಮಳಿಕನ ಮೊಬೈಲ್ ಗೆ ನನಗೆ ಮದುವೆ ಇಷ್ಟವಿಲ್ಲ ಎಂಬ ಮೆಸೇಜ್ ಒಂದನ್ನು ಮಾ,28 ರಂದು ಕಳಿಸಿ ಮನೆಯಿಂದ ಹೊರ ನಡೆದವನು …

Read More »

ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಸುದ್ದಿಗೆ ದಲಿತ ಸಂಘಟನೆ-ಜಯ ಕರ್ನಾಟಕ ಸಂಘಟನೆ ಸ್ಪಂಧನೆ – ಸಣ್ಣ ಪಾನಿಗುಂಡಿಗೆ ಭೇಟಿ.

ಪ್ರತಿಧ್ವನಿ ಯಲ್ಲಾಪುರ – ಕಳೆದೆರಡು ದಿನಗಳ ಹಿಂದೆ ಮೂಲಭೂತ ಸೌಕರ್ಯ ವಂಚಿತ ಸಣ್ಣ ಪಾನಿಗುಂಡಿ ಗ್ರಾಮದ ಕುರಿತು ” ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ” ವಿಸ್ತೃತ ವರದಿ ಪ್ರಕಟಿಸಿತ್ತು. ಅಧಿಕಾರಿಗಳು ಗಮನಿಸಿದ್ದಾರೊ ಇಲ್ಲವೊ ಆದರೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಯುವ ಕರ್ನಾಟಕ ರಕ್ಷಣಾ ವೇದಿಕೆ ಹಾಗು ಜಯಕರ್ನಾಟಕ ಸಂಘಟನೆಗಳು ರವಿವಾರ ಸಣ್ಣ ಪಾನಿಗುಂಡಿ ಗ್ರಾಮಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ಅರಿತು ಗ್ರಾಮಸ್ಥರೊಂದಿಗೆ . ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಮತ್ತು …

Read More »