


ಪ್ರತಿಧ್ವನಿ ಯಲ್ಲಾಪುರ : ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೆ ಜಯಂತಿ ಆಚರಣೆ ಹಾಗು ಡಾ,.ಬಿ.ಆರ್.ಅಂಬೇಡ್ಕರ್ ಮೆಮೊರಿಯಲ್ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮವನ್ನು ಜಿಲ್ಲಾ ಸಂಘಟನಾ ಸಂಚಾಲಕ ಮಾರುತಿ ಎಂ.ಬೋವಿವಡ್ಡರ ನೇತೃತ್ವದಲ್ಲಿ ರಾಜ್ಯ ಸಂಘಟನೆ ಹಾಗು ಜಿಲ್ಲಾ ಪ್ರಮುಖರ ಮಾರ್ಗದರ್ಶನದಲ್ಲಿ ಏ,29 ರ ಬುಧವಾರದಂದು ಪಟ್ಟಣದ ಅಡಿಕೆ ಭವನದಲ್ಲಿ ನೆರವೇರುತ್ತಿದ್ದು ಸಮಸ್ತರು ಆಗಮಿಸಬೇಕೆಂದು ಸಂಘಟನೆ ಪ್ರಮುಖರು ಕರೆ ನೀಡಿದ್ದಾರೆ.

ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರು ಶಿವರಾಮ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸುತ್ತಿದ್ದು, ಸಂಘಟನೆಯ ಜಿಲ್ಲಾಧ್ಯಕ್ಷ ಈರಣ್ಣ ಬಿ ವಡ್ಡರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದರು,ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು,ವಿಧಾನ ಪರಿಷತ್ ಸದಸ್ಯರು ಹಾಗು ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದು ಅನೇಕ ಗಣ್ಯರು ಸಮಾಜ ಸೇವಕರು,ಸಂಘ ಸಂಸ್ಥೆಗಳು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮಕ್ಕೆ ಸಂಸ್ಥಾಪಕ ರಾಜ್ಯಧ್ಯಕ್ಷರಾದ ಗಿರೀಶ್ ಎನ್.ಎಸ್, ಗುಂದಾ,ಜೋಯಿಡ , ಜಿಲ್ಲಾಧ್ಯಕ್ಷ ಈರಣ್ಣ ಬಿ ವಡ್ಡರ್,ಕೆರವಾಡ,ಹಳಿಯಾಳ ಹಾಗು ಜಿಲ್ಲಾ ಸಂಘಟನ ಸಂಚಾಲಕ ಮಾರುತಿ ಎಂ ಬೋವಿ ವಡ್ಡರ್ ಯಲ್ಲಾಪುರ ಅವರು ಸಂಘಟನೆಯ ಸಮಸ್ತರ ಪರವಾಗಿ ಕಾರ್ಯಕ್ರಮಕ್ಕೆ ಆಗಮಿಸುಂತೆ ಕರೆನೀಡಿದ್ದಾರೆ.

ಕಾರ್ಯಕ್ರಮ ಯಲ್ಲಾಪುರದ ಎಪಿಎಂಸಿ ಆವಾರದಲ್ಲಿನ ಅಡಿಕೆ ಭವನದಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಪ್ರಾರಂಭಿಸುತ್ತಿದ್ದು ಸಮಯಕ್ಕೆ ಮುಂಚಿತವಾಗಿ ಹಾಜರಿರುವಂತೆ ಕೋರಲಾಗಿದೆ.




Prathidvani Yellapura