Breaking News

ಸಣ್ಣ ಪಾನಿಗುಂಡಿ ಜನರ ದಣಿವಾರಿಸಿ ಪ್ರತಿ ಮನೆಗು ಭಗೀರಥನಾದ ಕೊಡುಗೈ ದಾನಿ ಬಾಲು ನಾಯಕ್.


ಪ್ರತಿಧ್ವನಿ ಯಲ್ಲಾಪುರ : ಬಹು ದಶಕಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಇತ್ತೀಚೆಗೆ ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಹಾಗು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿ ಸುದ್ದಿಯಾದ ಸಣ್ಣ ಪಾನಿಗುಂಡಿ ಜನರ ಕುಡಿಯುವ ನೀರಿನ ಬವಣೆಗೆ ದಣಿವಾರಿಸಿ ಬರಡು ನೆಲದಲ್ಲಿ ಗಂಗೆತರಿಸಿ ಭಗೀರಥ ಎನಿಸಿಕೊಂಡ ಯಲ್ಲಾಪುರದ ಕರ್ಣನೆಂದೇ ಖ್ಯಾತಿ ಪಡೆದ ಕೊಡುಗೈ ದಾನಿ, ಉದ್ಯಮಿ, ಬಿಜೆಪಿ ಯುವ ನಾಯಕ ಬಾಲಕೃಷ್ಣ ನಾಯಕ್.


ಕಳೆದ ಕೆಲವು ದಿನಗಳ ಹಿಂದೆ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಣ್ಣ ಪಾನಿಗುಂಡಿ ಗ್ರಾಮ ಸ್ವಾತಂತ್ರ್ಯ ನಂತರ ಇಲ್ಲಿಯವರೆಗೆ ಮೂಲಭೂತ ಸೌಕರ್ಯಗಳ ವಂಚಿತ ಗ್ರಾಮವಾಗಿ ಹೊರಹೊಮ್ಮಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ವಿಠ್ಠು ದೊಂಡು ಪಟಕಾರೆ ಎಂಬುವರು ಈ ವಿಚಾರವಾಗಿ ನಿರಂತರ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದು ಅಧಿಕಾರಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುವತ್ತ ಪ್ರಯತ್ನಿಸುವ ಕಾರ್ಯಕ್ಕೆ ಬಲ ತಂದಿದ್ದರು


ಇದೇ ಪ್ರಯತ್ನದ ಜೊತೆಯಲ್ಲಿ ತಮ್ಮ ಗ್ರಾಮದ ಸಂದಿಗ್ದ ಸಂಕಷ್ಟಗಳನ್ನು ಯಲ್ಲಾಪುರದ ಕರ್ಣ ಕೊಡುಗೈ ದಾನಿ ಉದ್ಯಮಿ ಬಿಜೆಪಿ ಯುವ ನಾಯಕ ಬಾಲಕೃಷ್ಣ ನಾಯಕ್ ಅವರ ಗಮನಕ್ಕು ತಂದಿದ್ದರು.

ಅರೆ ಕ್ಷಣವು ಚಿಂತಿಸದ ಬಾಲು ನಾಯಕ್ ತಮ್ಮ ಸ್ವಂತ ಹಣದಲ್ಲಿ ಸಣ್ಣ ಪಾನಿಗುಂಡಿ ಜನರ ಕುಡಿಯುವ ನೀರಿನ ದಾಹ ನೀಗಿಸಲು ಮುಂದಾಗಿ ಏ,27 ರ ಶುಭ ಸೋಮವಾರದಂದು ತಾಯಿ ಗಂಗಾ ಮಾತೆಯನ್ನು ಸ್ಮರಿಸಿ ಯಲ್ಲಾಪುರ ಗ್ರಾಮದೇವಿಯಲ್ಲಿ ಅನುಗ್ರಹ ಬೇಡಿ ಸಣ್ಣ ಪಾನಿಗುಂಡಿ ಕ್ಷೇತ್ರ ದೇವರಿಗೆ ನಮಿಸಿ ಕೊಳವೆ ಬಾವಿ ಕೊರೆಸಿದ್ದು ಪವಾಡ ಎಂಬಂತೆ 4  ಇಂಚು  ಗಂಗಾಮಾತೆ ಜೀವ ಜಲವಾಗಿ ಚಿಮ್ಮಿದ್ದಾಳೆ.

ಸ್ಥಳೀಯ ಜನರಲ್ಲಿ ಎಲ್ಲಿಲ್ಲದ ಸಂತಸ. ಹಲವು ದಶಕಗಳ ನೀರಿನ ಬವಣೆಗೆ ಪರಿಹಾರ ದೊರಕಿದ್ದು ಬಾಲು ನಾಯಕ್ ಅವರ ಈ ಜಲಸೇವೆಗೆ ಪ್ರತಿ ಮನೆಯಲ್ಲಿ ಶ್ಲಾಘನೆ ವ್ಯಕ್ತವಾಗಿದೆ ಅಲ್ಲದೆ ಪ್ರತಿ ಮನೆಯಲ್ಲಿ ತಮ್ಮ ಮನೆ ಮಗನಂತೆ ಹರಸಿ ಹಾರೈಸಿದ್ದಾರೆ.


ಕೊಳವೆ ಬಾವಿ ಕೊರೆಸುವ ಸ್ಥಳದಲ್ಲೆ ಇದ್ದು ಗಂಗಾಮಾತೆ ಭೂಮಿ ಒಡಲಿಂದ ಹೊರ ಚಿಮ್ಮಿ ಜೀವಜಲವಾಗಿ ಹರಿಯುವ ತನಕ  ಇದ್ದು ಅಲ್ಲಿಯ ಜನರ ಮುಖದಲ್ಲಿನ ಮಂದಹಾಸ ಕಂಡು ಭಾವುಕರಾಗಿ ನನ್ನ ಈ ಸೇವೆ ಭಗವಂತನಿಗೆ ಅರ್ಪಿತವಾಗಿದೆ ಎಂಬ ಸಾರ್ಥಕ ಭಾವದಲ್ಲಿ ಊರ ನಾಗರಿಕರ ಪ್ರೀತಿ,ಸತ್ಕಾರ,ಸನ್ಮಾನ, ಆದರ ,ಆತಿಥ್ಯ ಸ್ವೀಕರಿಸಿದ್ದಾರೆ ಬಾಲು ನಾಯಕ್.

ತಂದೆ ಮಾಡಿದ ಪುಣ್ಯದ ಕಾರ್ಯದಿಂದ ಮಕ್ಕಳಿಗೆ ಅದರ ಶ್ರೇಯ ಲಭಿಸುವುದು ಎಂಬ ಹಿರಿಯರ ಮಾತು ಸತ್ಯವಾಗಿದೆ. ಸಣ್ಣ ಪಾನಿಗುಂಡಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ ಬಾಲಕೃಷ್ಣ ನಾಯಕ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಜನತೆ ಜೊತೆಯಲ್ಲಿದ್ದ ಬಾಲು ನಾಯಕ್ ಎರಡನೇ ಪುತ್ರ ಭವಿಕ್ ಅವರ ಹುಟ್ಟು ಹಬ್ಬದ ಸಂಭ್ರಮವನ್ನು ಕೊಳವೆ ಬಾವಿ ಕೊರೆದ ಸ್ಥಳದಲ್ಲೇ ಊರ ನಾಗರಿಕರೆಲ್ಲಾ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು ಸಾರ್ಥಕ ಸೇವೆಗೆ ಸಾಕ್ಷಿಯಾಯಿತು

ಬಡವರ,ನೊಂದವರ ಸೇವೆ ಮಾಡುವುದು ಸಾಕ್ಷಾತ್ ಭಗವಂತ ಸೇವೆ ಮಾಡಿದಂತೆ ಎಂಬ ನನ್ನ ಪೋಷಕರು ಹೇಳಿಕೊಟ್ಟ ಸಂಸ್ಕಾರ ಇಂತಹ ಸೇವಾ ಕಾರ್ಯಕ್ಕೆ ಪ್ರೇರಣೆಯಾಗಿದೆ. ಸಣ್ಣ ಪಾನಿಗುಂಡಿ ಜನರ ದಾಹ ನೀಗಿಸುವ ಸೌಭಾಗ್ಯ ನನಗೆ ಲಭಿಸಿದ್ದು ಸಾರ್ಥಕವಾಯಿತು. ಕೊಳವೆ ಬಾವಿ ಕೊರೆಯುತ್ತ ಇದ್ದ ಯಂತ್ರ ಒಮ್ಮೆಲೆ ನೀರನ್ನು ಚಿಮ್ಮಿಸಲು ಪ್ರಾರಂಭಿಸಿದ ಕೂಡಲೆ ಸ್ಥಳದಲಿದ್ದ ಊರ ನಾಗರಿಕರ,ಪುಟ್ಟಪುಟ್ಟ ಮಕ್ಕಳ,ತಾಯಂದಿರ ಕಣ್ಣಲ್ಲಿನ ಸಂತಸ ಕಂಡಾಗ ಇಲ್ಲಿನ ವರೆಗಿನ ನನ್ನ ಸಮಾಜಸೇವೆ ಸಾರ್ಥಕ ಎನಿಸಿತು ಹಾಗು ಇಂತಹ ಸೇವೆ ಮಾಡುವ ಸಂಸ್ಕಾರ ನೀಡಿದ ನನ್ನ ತಂದೆತಾಯಿ ಮತ್ತು ಶಕ್ತಿ ತುಂಬಿದ ಭಗವಂತನಿಗೆ ವಂದಿಸುವೆನು. ಮತ್ತಷ್ಟು ದಣಿವಾರಿಸುವ ಕಾರ್ಯಕ್ಕೆ ಮುಂದಾಗುವೆನು.
ಬಾಲಕೃಷ್ಣ ನಾಯಕ್, ಉದ್ಯಮಿ,ಸಮಾಜಸೇವಕ,ಬಿಜೆಪಿ ಯುವ ನಾಯಕ. ಯಲ್ಲಾಪುರ

ಅನೇಕ ದಶಕಗಳ ಕನಸು ಇಂದು ನನಸಾಯಿತು. ಸಣ್ಣ ಪಾನಿಗುಂಡಿ ಜನರ ದಣಿವು ಆರಿದಂತಾಗಿದೆ. ದೂರದಿಂದ ಪೈಪ್ ಗಳ ಮೂಲಕ ನೀರು ತರಲಾಗಿತ್ತು. ಇದು ಸದಾ ಸಮಸ್ಯೆ ಆಗುತ್ತಲೆ ಇತ್ತು. ಸದ್ಯ ನಮ್ಮ ಗ್ರಾಮದಲ್ಲೆ ಕೊಳವೆ ಬಾವಿ ಹಾಕಿಸಿ ಕುಡಿಯುವ ನೀರಿನ ವ್ಯವಸ್ಥೆ ತಮ್ಮ ಸ್ವಂತ ಹಣದಲ್ಲಿ ಕಲ್ಪಿಸಿದ್ದಾರೆ ನಮ್ಮ ಗ್ರಾಮದ ಪ್ರತಿ ಮನೆಯ ಆಶಿರ್ವಾದ ಆತ್ಮಿಯರಾದ ಬಾಲು ನಾಯಕ್ ಅವರ ಮೇಲಿದೆ. ಊರಿಗೆ ಊರೆ ಋಣಿಯಾಗಿದೆ. ಮತ್ತಷ್ಟು ಜನೋಪಯೋಗಿ ಕಾರ್ಯಕ್ಕೆ ಭಗವಂತ ಬಾಲು ನಾಯಕ್ ಅವರಿಗೆ ಶಕ್ತಿ ನೀಡಲಿ ಅವರಿಗೆ ಹೃದಯ ತುಂಬಿದ ಕೃತಜ್ಞತೆ ಊರ ಜನರ ಪರವಾಗಿ ಸಲ್ಲಿಸುತ್ತೇನೆ.
ವಿಠ್ಠು ದೊಂಡು ಪಟಕಾರೆ
ಸಾಮಾಜಿಕ ಹೋರಾಟಗಾರ, ಸಣ್ಣ ಪಾನಿಗುಂಡಿ.

ಜನರ ಮನದಾಳದಲ್ಲಿ ಸದಾ ಉಳಿಯುವಂತಹ ಸೇವೆ ಎಂದರೆ ಹಸಿದವರಿಗೆ ಅನ್ನ ನೀಡುವುದು ಬಾಯಾರಿದವರ ದಾಹ ನೀಗಿಸುವುದು. ಕೊಡುಗೈ ದಾನಿಗಳು ಯುವ ನಾಯಕರು ಬಾಲಕೃಷ್ಣ ನಾಯಕ್ ಅವರ ಸಮಾಜ ಸೇವಾ ಕಾರ್ಯ ಅದ್ಬುತವಾದದ್ದು. ಸಣ್ಣ ಪಾನಿಗುಂಡಿ ಪ್ರತಿ ಮನೆಯ ಮಗನಂತೆ ಎಲ್ಲರ ಪ್ರೀತಿಯ ಆಶಿರ್ವಾದ ಬಾಲು ನಾಯಕ್ ಅವರಿಗೆ ಲಭಿಸಿದೆ. ಇನ್ನು ಸೇವಾ ಕಾರ್ಯ ಹೆಚ್ಚೆಚ್ಚು ಮಾಡುವಂತಾಗಲಿ ಅವರ ಜಲಯಜ್ಞ ಫಲಿಸಿದ್ದು ಸಣ್ಣ ಪಾನಿಗುಂಡಿ ಯಲ್ಲಿ ಗಂಗಾ ಮಾತೆ ಜೀವಜಲವಾಗಿ ಹರಿಸಿದ್ದಾರೆ.
ಅರ್ಜುನ್ ಬೆಂಗೇರಿ,ದಲಿತ ಮುಖಂಡರು,ಕಿರವತ್ತಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಅಂಬೇಡ್ಕರ್ ಕೇವಲ ಭಾರತಕ್ಕೆ ಸೀಮಿತರಲ್ಲ ಅವರು ಜಗತ್ಪುರುಷ ಮನುಕುಲದ ಘನತೆ – ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ – ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಯುಗ ಒಂದು ಸಾಲದು ಅವರೊಂದು ವಿಶ್ವಕೋಶ. ಅವರು ಕೇವಲ ಭಾರತಕ್ಕೆ …

Leave a Reply

Your email address will not be published. Required fields are marked *