
ಪ್ರತಿಧ್ವನಿ ಯಲ್ಲಾಪುರ : 14.4.2026 ರಂದು ಶಾರದಾಗಲ್ಲಿ ಅಂಬೇಡ್ಕರ್ ಭವನದಲ್ಲಿ ಹರಳಯ್ಯಸ್ತ್ರೀ ಶಕ್ತಿ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ವಿಜೇತೆ ಸುನಂದಾ ಪಾಠಣಕರ್ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಹಾಗೂ2024-25 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮರ್ಥ್ ಪಾಠಣಕರ್, ಸಂಕೇತ್ ಪಾಲೇಕರ್, ಆದಿತ್ಯ ಇವರಿಗೆ ಅವರ ಪರವಾಗಿ ಪೋಷಕರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಲೋಕೇಶ್ ಪಾಠಣಕರ್ ತೊಗಲು ಹರಳಯ್ಯ್ ಅಧ್ಯಕ್ಷ ಜಗನಾಥ್ ರೇವಣಕರ್, ಯಲ್ಲಾಪುರದ ಮಾನವಹಕ್ಕೂ ಆಯೋಗದ ಅಧ್ಯಕ್ಷ ರವಿ ಪಾಠಣಕರ್ ಸುನಂದಾ ಪಾಠಣಕರ್ ಅನಿಲ್ ಮರಾಟೆ ಸಂತೋಷ್ ಪಾಠಣಕರ್ ಶಾಮಿಲಿ ಪಾಠಣಕರ್ ಶಾರದಾಗಲ್ಲಿ ಅಂಗನವಾಡಿ ಶಿಕ್ಷಕಿ ನೇತ್ರಾವತಿ ಲಯನ್ಸ್ ಪ್ರಮುಖ ಸುರೇಶ ಬೋರಕರ್ ಸಂಘದ ಅಧ್ಯಕ್ಷೆ ಪೂರ್ಣಿಮಾ ಪಾವಸ್ಕರ್ ಉಪಸ್ಥಿತರಿದ್ದರು
ಶ್ರೀನಿಧಿ ಮೋರಸ್ಕರ್. ಕಾರ್ಯಕ್ರಮ ನಿರ್ವಹಿಸಿದರು ಪುಷ್ಪಾoಜಲಿ ಸ್ವಾಗತಿಸಿದರು ವರಮಹಾಲಕ್ಷ್ಮಿ ವಂದಿಸಿದರು ವಕ್ತಾರರಾಗಿ ಶಿಕ್ಷಕ ಡಾ,ನವೀನ್ ಕುಮಾರ್ ಕಾರ್ಯ ನಿರ್ವಹಿಸಿದರು.









Prathidvani Yellapura