
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಜನಪ್ರಿಯ ಹಾಗು ಹೃದಯವಂತ ಶಿಕ್ಷಕ ಎನಿಸಿ ದೀರ್ಘಕಾಲ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಸೇವೆಸಲ್ಲಿಸಿದ ಎಲ್ಲರ ನೆಚ್ಚಿನ ಶಿಕ್ಷಕ ಪ್ರಕಾಶ್ ನಾಯಕ ನೇಣಿಗೆ ಶರಣಾಗಿದ್ದು ಹಿತೈಷಿ,ಬಂಧುಗಳು ಅಪಾರ ಸ್ನೇಹ ಬಳಗ ಕಂಬನಿ ಮಿಡಿದಿದೆ.
ಮೂಲತಃ ಅಂಕೋಲಾ ತಾಲೂಕಿನ ಮೊಗಟಾ ಮೂಲದವರಾದ ಪ್ರಕಾಶ್ ನಾಯಕ ಕಳೆದ 30 ಕ್ಕು ಅಧಿಕ ವರ್ಷಗಳ ಯಲ್ಲಾಪುರದ ಬಾಂಧವ್ಯ ಹೊಂದಿದ್ದಾರೆ. ಶುಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಇತ್ತೀಚಿನ ಕೆಲ ವರ್ಷಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ವೃತ್ತಿಗೆ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿ ಸೈ ಎನಿಸಿಕೊಂಡಿದ್ದರು. ಶಾಸಕರು,ಸಂಸದರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಸರ್ಕಾರ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಸರ್ಕಾರಿ ನೌಕರರಿಗೆ ಯಾವುದೆ ಸಮಸ್ಯೆಗಳು ಸಂಭವಿಸಿದರು ಕ್ಷಣಮಾತ್ರದಲ್ಲಿ ಸ್ಥಳದಲಿದ್ದು ಅವರ ಬೆನ್ನಿಗೆ ನಿಂತು ದೈರ್ಯ ತುಂಬುತ್ತಿದ್ದರು.
ತಾವು ಒಬ್ಬ ಶಿಕ್ಷಕನಾಗಿದ್ದು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಸಹಾಯ ಹಸ್ತ ಚಾಚುತ್ತಿದ್ದರು. ದಾನಧರ್ಮದಲ್ಲಿ ಶಿಕ್ಷಕ ವಲಯದಲ್ಲೆ ಪ್ರಕಾಶ್ ನಾಯಕ ಒಂದು ಕೈ ಮುಂದೆ ಎನ್ನಬಹುದಯ ಆದರೆ ಎಲ್ಲಿಯು ತೋರಿಸಿಕೊಳ್ಳುತ್ತಿರಲಿಲ್ಲ. ದಿವಂಗತ ನಾರಾಯಣ ನಾಯ್ಕ್ ಮತ್ತು ಪ್ರಕಾಶ್ ನಾಯಕ ಶಿಕ್ಷಕರ ವಲಯದಲ್ಲಿ ಜುಗಲ್ ಬಂದಿಯಂತಿದ್ದರು. ಅಲ್ಲದೆ ಸಾರ್ವಜನಿಕ ವಲಯದಲ್ಲಿಯು ಪ್ರಕಾಶ್ ನಾಯಕ ಸ್ನೇಹ ಬಳಗ ಅಪಾರ ಪ್ರಮಾಣದಲಿತ್ತು.
ಪ್ರಕಾಶ್ ನಾಯಕ ಧರ್ಮಪತ್ನಿ ಭಾರತಿನಾಯಕ ಕೂಡ ಉತ್ತಮ ಶಿಕ್ಷಕಿಯಾಗಿ ಪತಿಗೆ ಉತ್ತಮ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹಿಸುತ್ತಿದ್ದರು.
ಸದ್ಯ ಬುಧವಾರ ನೇಣಿಗೆ ಶರಾಣಾಗಿದ್ದು ಕಾರಣ ಏನೆಂಬುದು ಇನ್ನಷ್ಟೆ ತಿಳಿಯಬೇಕಿದೆ. ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು ಮುಂದಿನ ಕ್ರಮ. ಕೈಗೊಂಡಿದ್ದಾರೆ.
ಶಿಕ್ಷಕ ವಲಯಕ್ಕೆ ಆಘಾತ ತಂದ ವಿಚಾರವಾಗಿದೆ ಇತ್ತೀಚೆಗೆ ನಮ್ಮೆಲ್ಲರನೆಚ್ಚಿನ ನಾರಾಯಣ ನಾಯಕ ಅವರನ್ನು ಕಳೆದುಕೊಂಡ ನೋವು ಆರುವ ಮೊದಲೆ ಮತ್ತೊಬ್ಬ ಸ್ನೇಹಿತ ಪ್ರಕಾಶನಾಯಕ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ಶಿಕ್ಷಕರ ವಲಯಕ್ಕೆ ಭರಿಸಲಾಗದಷ್ಡು ದುಖಃವಾಗಿದೆ. ಸದಾ ನಮ್ಮೊಂದಿಗೆ ಬೆರೆತು ಎಲ್ಲಾ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಪ್ರಕಾಶ ನಾಯಕ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ.
ಆರ್.ಆರ್.ಭಟ್,ಅಧ್ಯಕ್ಷ
ತಾಲ್ಲೂಕು ಪ್ರಾಥಮಿಕ ಶಾ,ಶಿ,ಸಂ
ಪ್ರಕಾಶ್ ನಾಯಕ ಸಾವು ಆಘಾತ ತಂದಿದೆ ಇತ್ತೀಚೆಗೆ ಆರೋಗ್ಯ ಸರಿ ಇರದಿರುವುದು ತಿಳಿದಿತ್ತು. ವಿಧಿ ಈ ರೀತಿ ಬಂದೆರಗುವುದೆಂದು ಭಾವಿಸಿರಲಿಲ್ಲ. ಎಲ್ಲರ ನೆಚ್ಚಿನ ಸ್ನೇಹಿತರಾಗಿದ್ದ ಪ್ರಕಾಶ್ ನಾಯ್ಕ್ ಸ್ನೇಹ ಜೀವಿಏಲಾಗಿ ಹೃದಯವಂತ. ಆತನ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ.
ವಿಜಯ್ ಕುಮಾರ್, ನಿವೃತ್ತ ಶಿಕ್ಷಕ ಮತ್ತು ಸ್ನೇಹಿತ.
ಶಿಕ್ಷಕರ ವಲಯದಲ್ಲಿ ಮಿಂಚಿ ಮರೆಯಾದ ನಕ್ಷತ್ರದಂತೆ ಪ್ರಕಾಶ್ ನಾಯಕ ವ್ಯಕ್ತಿತ್ವ. ಸದಾ ಹಸನ್ಮುಖಿ ಪರರ ಬಗ್ಗೆ ಒಳಿತನ್ನೆ ಬಯಸುವ ಸಹೃದಯಿ. ಇದ್ದಕ್ಕಿದ್ದಂತೆ ಇಂತಹ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು ನಮಗೆಲ್ಲಾ ಆಘಾತ ತಂದಿದೆ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ಭಗವಂತ ನೀಡಲಿ.
ಹರೀಶ್ ನಾಯ್ಕ್, ಶಿಕ್ಷಕರು ಮತ್ತು ಸ್ನೇಹಿತರು
Prathidvani Yellapura