
ಕೇಬಲ್ ನಾಗೇಶ್, ಯಲ್ಲಾಪುರ..🖋
ಪ್ರತಿಧ್ವನಿ ಯಲ್ಲಾಪುರ : ಒಂದೆಡೆ ಸಾಗರ ಮತ್ತೊಂದೆಡೆ ಜಲಪಾತಗಳ ಆಗರ ಹಚ್ಚಹಸಿರಿನ ಮಡಿಲು ಉತ್ತರ ಕನ್ನಡ ಜಿಲ್ಲೆ ಅದರಲ್ಲು ಪ್ರಕೇಲೃತಿ ಮಾತೆಯ ಹಿರಿ ಮಗಳಂತೆ ಕಂಗೊಳಿಸುವ ಯಲ್ಲಾಪುರ ತಾಲೂಕಿನ ನೈಸರ್ಗಿಕ ಪ್ರಾಕೃತಿಕ ಪ್ರೇಕ್ಷಣೀಯ ತಾಣಗಳು ಪ್ರವಾಸಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ. ವಿಶೇಷವಾಗಿ ಸುಡುತ್ತಿರುವ ಸೂರ್ಯನ ತಾಪಕ್ಕೆ ತಂಪೆರೆವ ಸ್ವರ್ಗ ಸಾತೊಡ್ಡಿ ಜಲಪಾತ ಪ್ರವಾಸಿಗರ ಹಾಟ್ ಫೇವರೆಟ್ ಆಗಿದ್ದು ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚತ್ತಲೇ ಇದೆ.

ತಾಲೂಕಿನಲ್ಲಿ ಹಲವಾರು ಜಲಪಾತಗಳಿದ್ದರು ಸಾತೊಡ್ಡಿ ಜಲಪಾತ ನೋಡುಗರ ಕಣ್ ಸೆಳೆಯುವುದಲ್ಲದೆ ನೀರಿನಲ್ಲಿ ಆಡುತ್ತ ಜಲಪಾತದ ಸೌಂದರ್ಯ ಸವಿಯುವ ಅವಕಾಶ ಕಲ್ಪಿಸಿದೆ. ಅಪಾಯದ ಸಂದರ್ಭ ಕಡಿಮೆ ಇದ್ದು ನಿರ್ಭೀತಿಯಿಂದ ನೀರಿನ ಆಟದ ಆನಂದ ಸವಿಯಬಹುದಾಗಿದೆ.

ಉತ್ತರ ಕನ್ನಡಕ್ಕೆ ಪ್ರವಾಸಕ್ಕೆಂದು ಯಾರೆ ಬಂದರು ಪ್ರವಾಸದ ಪಯಣ ಸಂಪೂರ್ಣ ಆಗುವುದು ಯಲ್ಲಾಪುರದ ಸಾತೊಡಿ ಜಲಪಾತಕ್ಕೆ ಭೇಟಿ ನೀಡಿದಮೇಲೆ. ಹಸಿರು ಸಸ್ಯಕಾಶಿಯ ನಡುವೆ ದುಮ್ಮಿಕ್ಕಿ ಬೀಳುವ ಜಲ್ಅರೆಗೆ ಮೈ ಒಡ್ಡಿ ನಿಂತರೆ ಬದುಕಿನ ಎಲ್ಲಾ ನಿರುತ್ಸಹಗಳಿಗು ಜೀವ ಕಳೆ ತುಂಬಿ ಮನಸ್ಸು ಪ್ರಪುಲ್ಲಗೊಳ್ಳುವುದು ನಿಶ್ಚಿತ ಅಂತಹ ಪ್ರಾಕೃತಿಕ ಶಕ್ತಿ ಸಾತೋಡ್ಡಿ ಜಲಪಾತಕ್ಕಿದೆ.

ದಶಕಗಳಿಂದ ಹೆಳುತ್ತಲೆ ಬರುತ್ತಿರುವುದು ಒಂದೆ ವಿಷಯ ಪ್ರವಾಸಿತಾಣಗಳ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ. ಸಮುದ್ರ ತೀರ ಒಂದಷ್ಟು ಕೃತಕ ಸೃಷ್ಟಿ ಹೊಂದಿರುವ ಗೊವಾ ಪ್ರವಾಸಿಗರ ಸ್ವರ್ಗ ಎನ್ನುವುದಾದರೆ ನೈಸರ್ಗಿಕ ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ನಮ್ಮ ಉತ್ತರ ಕನ್ನಡ ಯಾವುದಕ್ಕು ಕಡಿಮೆ ಇಲ್ಲ ಆದರೆ ಪ್ರವಾಸೋದ್ಯಮ ಅಭಿವೃದ್ಧಿ ವಿಚಾರ ಪತ್ರಿಕೆ ಮತ್ತು ವೇದಿಕೆ ಮೇಲಿನ ಭಾಷಣದ ಸರಕಾಗುತ್ತ ಸಾಗಿದೆಯೆ ಹೊರತು ಕ್ರಿಯೆಯಾಗಿ ಜಾರಿಗೊಳ್ಳದಿರುವುದು ದುರಂತವಾಗಿದೆ.

ಸಾತೊಡಿ ಜಲಪಾತವು 25 ಕಿಲೋಮೀಟರ್ ಅಂತರದಲಿದ್ದು ರಸ್ತೆ ವ್ಯವಸ್ಥೆ ಹಿಂದಿಗಿಂತ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ. ಹೊರತು ಪಡಿಸಿ ಜಲಪಾತದ ಪರಿಸರದಲ್ಲಿ ಬಹಳಷ್ಟು ವ್ಯವಸ್ಥೆ ಕಲ್ಪಿಸಬೇಕಿದೆ. ನೀರಿನಲ್ಲಿ ಆಟವಾಡಿದ ನಂತರ ಮಹಿಳೆಯರು ಉಡುಪು ಬದಲಿಸಲು ಕೋಣೆ ವ್ಯವಸ್ಥೆ, ಮಕ್ಕಳ ಆಟಕ್ಕೆ ಪ್ರತ್ಯೇಕ ನೀರಿನ ವ್ಯವಸ್ಥೆ, ವಿವಿಧ ಆಟಗಳು, ಸುಸಜ್ಜಿತ ಕ್ಯಾಂಟೀನ್ ದೂರದ ಊರುಗಳಿಂದ ಅಥವ ಹೊರರಾಜ್ಯ, ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಪ್ರಕೃತಿ ಮಡಿಲಲ್ಲಿ ತಂಗುವ ವ್ಯವಸ್ಥೆ ಕಲ್ಪಿಸಬೇಕಿದೆ. ಪ್ರವಾಸೋದ್ಯಮ ಅಭಿವೃದ್ಧಿ ಮಾತಿನಲ್ಲಿ ಆಗುವುದಲ್ಲ ಮಾಡಿ ತೋರಿಸಬೇಕಿದೆ.
ಗ್ರಾಮಾರಣ್ಯ ಸಮಿತಿ ವತಿಯಿಂದ ನಮ್ಮ ಕೈಲಾದ ವ್ಯವಸ್ಥೆ ಕಲ್ಪಿಸುತ್ತಾ ಬಂದಿದ್ದು ಪ್ರವಾಸಿಗರು ಸಹ ನಮ್ಮ ನಿಯಮಗಳನ್ನು ಪಾಲಿಸಿ ಜಲಪಾತದಲ್ಲಿ ವಿಹರಿಸುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಅದಕ್ಕಾಗಿ ಪ್ಲಾಸ್ಟಿಕ್ ಮುಕ್ತ ಪರಿಸರ, ಆಹಾರ ಪದಾರ್ಥ ಕೊಂಡೊಯ್ದು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿ ಮಾಡಿ ಸ್ವಚ್ಚತೆಗೆ ಭಂಗ ತರುವುದನ್ನು ನಿಷೇದಿಸಿದ್ದೇವೆ, ಹುಚ್ಚು ಸಾಹಸ ಮಾಡುವ ಭರದಲ್ಲಿ ಜಲಪಾತವನ್ನೇರುವವರಿಗೆ ಕಡಿವಾಣ ಹಾಕಿದ್ದು ಸನಿಹಕ್ಕೆ ತೆರಳದಂತೆ ಬಲೆ ಕಟ್ಟಿದ್ದೇವೆ. ಇರುವ ವ್ಯವಸ್ಥೆಯಲ್ಲೆ ಸಮಿತಿಯು ಪ್ರವಾಸಿಗರಿಗೆ ಕೈಲಾದಷ್ಟು ಸೇವೆ ನೀಡಿ ಸಹಕಾರಿಯಾಗಿದೆ. ಶ್ರೀಪತಿ ಕುಂಬ್ರಾಳ್,ಗ್ರಾಮ ಅರಣ್ಯ ಸಮಿತಿ ಸಾತೊಡ್ಡಿ.
ಕಳೆದ ಹಲವು ವರ್ಷಗಳಿಂದ ಇಲ್ಲಿಗೆ ಪ್ರವಾಸಿಯಾಗಿ ಬರುತ್ತಲಿದ್ದೇನೆ ಆದರೆ ಅಂದು ಹೇಗೆ ಇತ್ತೊ ಇಂದು ಹಾಗೆ ಇದೆ. ಯಾವುದೆ ಸಮರ್ಪಕ ವ್ಯವಸ್ಥೆ ಮಾಡದಿರುವುದು ವ್ಯವಸ್ಥೆಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಇಷ್ಟೊಂದು ಸುಂದರವಾದ ಪರಿಸರ ತಾಣ ಬೇರೆ ದೇಶಗಳಲ್ಲಿ ಅಥವ ಹೊರ ರಾಜ್ಯಗಳಲ್ಲಿ ಇದ್ದರು ಈಗಾಗಲೆ ರಾಷ್ಟ್ರ ಖ್ಯಾತಿ ಪಡೆಯುತ್ತಿತ್ತು. ಇನ್ನಾದರು ಬಾಯಿ ಮಾತು ಬಿಟ್ಟು ಅಭಿವೃದ್ಧಿಯನ್ನು ಕೃತಿಯಲ್ಲಿ ತೋರಿಸಿ. ಚಂದ್ರಶೇಖರ್ ಮಹಾಮನಿ,ಹಾವೇರಿ ಪ್ರವಾಸಿಗ.








Prathidvani Yellapura