Breaking News

ಕಾಯಕವೇ ಕೈಲಾಸ  ಬಸವಣ್ಣನವರ ಆದರ್ಶವನ್ನು ಪಾಲಿಸಿ- ಶಿವಲಿಂಗಯ್ಯ ಅಲ್ಲಯ್ಯನವರ ಮಠ..

ಕೇಬಲ್ ನಾಗೇಶ್ ಯಲ್ಲಾಪುರ..🖋

ಪ್ರತಿಧ್ವನಿ ಯಲ್ಲಾಪುರ : ಸರಕಾರ ಬಸವಣ್ಣ ನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಪ್ರತಿಯೊಂದು ಕಚೇರಿಯಲ್ಲಿ ಅವರ ಫೋಟೋ ಹಾಕುವದು ಕಡ್ಡಾಯಗೊಳಿಸಿದ್ದಾರೆ ಅದರಡಿ ಕಾರ್ಯ ನಿರ್ವಹಿಸುವ
ಎಲ್ಲ ಅಧಿಕಾರಿಗಳು , ಸಿಬ್ಬಂದಿಗಳು ಕಾಯಕವೇ ಕೈಲಾಸ ವೆಂದು ಸಾರಿದ ಬಸವಣ್ಣನವರ ಆದರ್ಶವನ್ನು ಪಾಲಿಸುವಂತಾಗಬೇಕು ಎಂದು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಹೇಳಿದರು.

ಅವರು ಮಂಗಳವಾರ ತಾಲೂಕಡಳಿತ ಸೌಧದ ಸಭಾಭವನದಲ್ಲಿ ತಾಲೂಕಡಳಿತ ಪ ಪಂ, ವೀರಶೈವ ಲಿಂಗಾಯತ ಸಂಘಟನೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರ ಕ್ಕೆ ಪೂಜೆ, ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.


ತಾಲೂಕು ಆಡಳಿತದಿಂದ ಪತ್ರಕರ್ತೆ ಪ್ರಭಾವತಿ ಗೋವಿಯವರನ್ನು ಸನ್ಮಾನಿ ಗೌರವಿಸಲಾಯಿತು. ನಂತರ ಮಾತನಾಡಿ  ಇಂದು ಸಂಸತ್ ನಲ್ಲಿ ಮಹಿಳಾ ಮೀಸಲಾತಿ ನೀಡಲು ಮೀನ ಮೇಷ ಎನಿಸುತ್ತಿರುವದನ್ನು ನಾವು ಕಾಣಬಹುದಾಗಿದೆ. ಆದರೆ ಬಸವಣ್ಣ ನವರು ಹನ್ನೆರಡನೇ ಶತಮಾನದಲ್ಲಿಯೇ  ಮಹಿಳೆಯರಿಗೆ ಅಭಿಪ್ರಾಯ ವ್ಯಕ್ತ ಪಡಿಸಲು ಅವಕಾಶ ನೀಡಿ ಸಮಾನತೆಯಿಂದ ಕಾಣುವ ಮೂಲಕ ಮಹಿಳೆಯರ ಕೀರ್ತಿ ಗೌರವ ಹೆಚ್ಚಿಸಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.


ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ಆದರ್ಶ ಮತ್ತು ವಚನಗಳು ಹೇಗೆ ಪ್ರಸ್ತುತ ಎಂಬುದನ್ನು ವಿವರಿಸಿ ಸಮುದಾಯದ ಪ್ರಮುಖ ಸಿದ್ಧಾರ್ಥ ನಂದೊಳ್ಳಿ ಮಠ ಶ್ರೀ ಬಸವೇಶ್ವರ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಕೆ ಎಚ್ ಫರ್ನಾಂಡಿಸ್, ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ,ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಂಜೀವ ಕುಮಾರ ಹೊಸ್ಕೆರಿ,ಅ ಭಾ ವೀ ಮಹಾಸಭಾ ದ ಪ್ರಮುಖರಾದ ಮಹೇಶಗೌಳಿ, ಗುರುಪಾದಯ್ಯ ನಂದೊಳ್ಳಿಮಠ, ಜಯರಾಜ್, ಅಧಿಕಾರಿಗಳಾದ ಗೀತಾ ಜಾಧವ, ನಾಗೇಶ ಮಲಮೇತ್ರಿ, ಎಫ್ ಎಚ್ ಬಾಸುರ, ಇತರರು ಇದ್ದರು.
ಲೆಕ್ಕಧಿಕಾರಿ ಶ್ರೀಧರ ಮಡಿವಾಳ ನಿರ್ವಹಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಸನಾತನ ಧರ್ಮದ ಸಂಸ್ಕಾರ ಮತ್ತು ಸಂಸ್ಕೃತಿ ಗಳನ್ನು ಉಳಿಸಿಕೊಂಡು ಮುಂದೆ ಸಾಗಬೇಕಿದೆ – ಹೆಬ್ಬಾರ್

ಪ್ರತಿಧ್ವನಿ ಯಲ್ಲಾಪುರ : ವೈದಿಕ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ. ವೇದ, ಉಪನಿಷತ್ತು, ಜ್ಯೋತಿಷ್ಯ, ಸಂಸ್ಕೃತ ಇವುಗಳ ಪರಿಪೂರ್ಣ ಅಧ್ಯಯನ ಮಾಡಿದವನಿಗೆ …

Leave a Reply

Your email address will not be published. Required fields are marked *