Breaking News

ಶತಮಾನ ಕಂಡ ಶಾಲೆಗೆ 1 ಲಕ್ಷ ದೇಣಿಗೆ ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ,ಡಿ.ವೀರೇಂದ್ರ ಹೆಗ್ಗಡೆ.

ಪ್ರತಿಧ್ವನಿ ಯಾಲ್ಲಾಪುರ :  ತಾಲೂಕಿನ ಸವಣಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಿಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು ನೂತನ ಕಟ್ಟಡ ನಿರ್ಮಿಸಲು ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಖಾವಂದರಾದ ಡಾ,ಡಿ.ವೀರೇಂದ್ರ ಹೆಗ್ಗಡೆಯವರು 1ಲಕ್ಷ ದೇಣಿಗೆ ನೀಡಿದ್ದಾರೆ.


ಇತ್ತೀಚಿನ ದಿನಗಳಲ್ಲಿ ಶಾಲೆಯ ಮೇಲ್ಚಾವಣಿ ಸಂಪೂರ್ಣ ದುರಸ್ತಿಗೊಂಡಿತ್ತು, ಮಕ್ಕಳಿಗೆ ಸುಸಜ್ಜಿತವಾಗಿ ಕಲಿಕೆಗೆ ಸಹಾಯವಾಗಲು ಹೊಸ ಕಟ್ಟಡದ ನಿರ್ಮಾಣ ಪ್ರಾರಂಭಿಸಿದ ಮಾಹಿತಿಯನ್ನು ಶ್ರೀ ಕ್ಷೇತ್ರಧರ್ಮಸ್ಥಳ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ SDMC ಅಧ್ಯಕ್ಷರು ಹಾಗೂ ಶಾಲೆಮುಖ್ಯೋಪಾಧ್ಯಾಯರು ಮತ್ತು.ರವಿ ನಾಯ್ಕ್ ರವರು ಕಟ್ಟಡ ನಿರ್ಮಾಣ ವೆಚ್ಚದ ಅಂದಾಜೂ ಪಟ್ಟಿ ಮತ್ತು ಸಹಾಯ ಧನ ಬೇಡಿಕೆ ಮನವಿ ನೀಡಿದ್ದರು.

ಪೂಜ್ಯರು ಇದನ್ನು ಅತ್ಯಂತ ಪ್ರೀತಿಯಿಂದ ಪರಿಗಣಿಸಿ ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಗಳನ್ನು ಉಳಿವು ಮತ್ತು ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಅತ್ಯಂತ ವ್ಯವಸ್ಥಿತವಾದ ಕಟ್ಟಡದ ನಿರ್ಮಾಣಕೆ ಸಹಾಯವಾಗಿ
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1.00.000. ಮೊತ್ತದ ಸಹಾಯಧನವನ್ನು ಬಿಡುಗಡೆ ಮಾಡಿದ್ದು ಸಾರ್ವಜನಿಕರಲ್ಲಿ ಸಂತಸ ತಂದಿದೆ.

ಈ ಮಾದರಿಯಲ್ಲಿ ಸರಕಾರಿ ಶಾಲ ಕಟ್ಟಡ ನಿರ್ಮಾಣಕ್ಕೆ ಪೂಜ್ಯರು ನೀಡಿರುವ 1,00.000 ಮೊತ್ತದ ಮಂಜೂರಾತಿ ಪತ್ರವನ್ನು ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ರೇಖಾ ನಾಯಕ್ ಅವರ ಉಪಸ್ಥಿತಿಯಲ್ಲಿ ಶಾಲೆಯ ಮುಖ್ಯಸ್ಥರು ಮತ್ತು ಅಧ್ಯಕ್ಷರಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಾಲೂಕು ಯೋಜನಾಧಿಕಾರಿ ಸಂತೋಷ್ ಎ ಎಸ್ ನೀಡಿದರು.


ಜ್ಞಾನದೀಪ ಶಿಕ್ಷಕರ ಆಯೋಜನೆ .
ಸುಜ್ಞಾನ ನಿಧಿ ಶಿಷ್ಯ ವೇತನ. ಕ್ರೀಡಾಂಗಣ ದುರಸ್ತಿ.ರಂಗಮಂದಿರ ನಿರ್ಮಾಣ. ಹೀಗೆ ಹಲವಾರು ಮಾದರಿಯಲ್ಲಿ ಪೂಜ್ಯರ ಆಶಯಗಳು ಮತ್ತು ಧರ್ಮಸ್ಥಳದ ದಾನ ಧರ್ಮಗಳ ಬಗ್ಗೆ ಯೋಜನಾಧಿಕಾರಿ ಸಂತೋಷ್  ಮಾಹಿತಿ ನೀಡಿದರು.
ಕ್ಷೇತ್ರ ಧರ್ಮಸ್ಥಳ ಪೂಜ್ಯರ ಸಮಾಜದ ಒಳಿತಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ರಾಜ್ಯದ ಮೂಲೆ ಮೂಲೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಶಿಕ್ಷಕರ ಕೊರತೆ ಇದ್ದಲ್ಲಿ ಜ್ಞಾನ ದೀಪ ಎಂಬ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಕರ ನಿಯೋಜನೆ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ಕಾರ್ಯವಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಸಂದರ್ಭದಲ್ಲಿ ಶಾಲೆಯ SDMC ಅಧ್ಯಕ್ಷರಾದ ಗೋಪಾಲಕೃಷ್ಣ . ಮುಖ್ಯೋಪಾಧ್ಯಾಯರು ಸಂಜೀವ್ ಕುಮಾರ. ಶಿಕ್ಷಣ ಸಮನ್ವದಿಕಾರಿಗಳಾದ. ಸಂತೋಷ್ .ಸುಧಾಕರ್ ನಾಯ್ಕ್,
ರವಿ ನಾಯ್ಕ್.. ಮಾಂತಯ್ಯ. ಮಂಜುನಾಥ್ ಭಟ್. ಪವಿತ್ರ. ಗೀತಾ ಶಿಕ್ಷಕರು ಉಪಸ್ಥಿತರಿದ್ದರು….

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವಜ್ರಳ್ಳಿಯಲ್ಲಿ ಭಾಗ್ಯಶ್ರೀ ಸಂಜೀವಿನಿ ಒಕ್ಕೂಟದ ವಾರ್ಷಿಕೋತ್ಸವ…

ಪ್ರತಿಧ್ವನಿ ಯಲ್ಲಾಪುರ : ನಿತ್ಯ ಬದುಕಿನ ಒತ್ತಡದ ನಡುವೆಯೂಸಾಮಾಜಿಕ ಚಟುವಟಿಕೆಗಳಲ್ಲಿ ಮಹಿಳೆಯರು ಭಾಗವಹಿಸುವ‌ ಮೂಲಕ ಉತ್ತಮ ಕೊಡುಗೆ ನೀಡಲು ಸಶಕ್ತವಾಗಬೇಕಾದರೆ …

Leave a Reply

Your email address will not be published. Required fields are marked *