ಪ್ರತಿಧ್ವನಿ ಯಲ್ಲಾಪುರ : ಬಹು ದಶಕಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಇತ್ತೀಚೆಗೆ ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಹಾಗು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿ ಸುದ್ದಿಯಾದ ಸಣ್ಣ ಪಾನಿಗುಂಡಿ ಜನರ ಕುಡಿಯುವ ನೀರಿನ ಬವಣೆಗೆ ದಣಿವಾರಿಸಿ ಬರಡು ನೆಲದಲ್ಲಿ ಗಂಗೆತರಿಸಿ ಭಗೀರಥ ಎನಿಸಿಕೊಂಡ ಯಲ್ಲಾಪುರದ ಕರ್ಣನೆಂದೇ ಖ್ಯಾತಿ ಪಡೆದ ಕೊಡುಗೈ ದಾನಿ, ಉದ್ಯಮಿ, ಬಿಜೆಪಿ ಯುವ ನಾಯಕ ಬಾಲಕೃಷ್ಣ ನಾಯಕ್. ಕಳೆದ ಕೆಲವು ದಿನಗಳ ಹಿಂದೆ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮ …
Read More »ಅತಿಥಿ ದೇವೋ ಭವ ಮಾತಿನಲ್ಲಿ ಮಾತ್ರವಲ್ಲ ಕೃತಿಯಲ್ಲು ಇರಲಿ- ನಿರಂಜನ ಭಟ್ಟ್..
ಪ್ರತಿಧ್ವನಿ ಯಲ್ಲಾಪುರ : ಇತ್ತೀಚೆಗೆ ಕೊಡಗು ಜಿಲ್ಲೆಯ ಹೋಂಸ್ಟೇಯಲ್ಲಿ ನಡೆದ ದಾರುಣ ಘಟನೆ ನಮ್ಮೆಲ್ಲರ ಮನಸ್ಸನ್ನು ಬೆಚ್ಚಿಬೀಳಿಸಿದೆ. ಇದು ಕೇವಲ ಒಂದು ವ್ಯಕ್ತಿಯ ಮೇಲಿನ ಅಪರಾಧವಲ್ಲ, ಇದು ನಮ್ಮ ದೇಶದ ಆತಿಥ್ಯ ಸಂಸ್ಕೃತಿಗೆ ಬಿದ್ದ ಒಂದು ಕಳಂಕ. ನಾವು ಹೆಮ್ಮೆಯಿಂದ ಹೇಳಿಕೊಳ್ಳುವ “ಅತಿಥಿ ದೇವೋ ಭವಃ” ಎಂಬ ಮೌಲ್ಯ ಇಂದು ಪ್ರಶ್ನಾರ್ಥಕ ಚಿಹ್ನೆಯ ಮುಂದೆ ನಿಂತಿದೆ. ಪ್ರಕೃತಿಯ ಮಡಿಲಿನಲ್ಲಿ ನೆಮ್ಮದಿಯನ್ನು ಹುಡುಕಿಕೊಂಡು ಬರುವ ಅತಿಥಿಗಳು, ತಮ್ಮ ಜೀವ ಮತ್ತು ಮಾನದ …
Read More »ಬಿಸಿಲಿನ ಝಳಕ್ಕೆ ತಂಪೆರೆವ ಸ್ವರ್ಗ ಯಲ್ಲಾಪುರದ “ಸಾತೊಡ್ಡಿ ಜಲಪಾತ” ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ.
ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಒಂದೆಡೆ ಸಾಗರ ಮತ್ತೊಂದೆಡೆ ಜಲಪಾತಗಳ ಆಗರ ಹಚ್ಚಹಸಿರಿನ ಮಡಿಲು ಉತ್ತರ ಕನ್ನಡ ಜಿಲ್ಲೆ ಅದರಲ್ಲು ಪ್ರಕೇಲೃತಿ ಮಾತೆಯ ಹಿರಿ ಮಗಳಂತೆ ಕಂಗೊಳಿಸುವ ಯಲ್ಲಾಪುರ ತಾಲೂಕಿನ ನೈಸರ್ಗಿಕ ಪ್ರಾಕೃತಿಕ ಪ್ರೇಕ್ಷಣೀಯ ತಾಣಗಳು ಪ್ರವಾಸಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ. ವಿಶೇಷವಾಗಿ ಸುಡುತ್ತಿರುವ ಸೂರ್ಯನ ತಾಪಕ್ಕೆ ತಂಪೆರೆವ ಸ್ವರ್ಗ ಸಾತೊಡ್ಡಿ ಜಲಪಾತ ಪ್ರವಾಸಿಗರ ಹಾಟ್ ಫೇವರೆಟ್ ಆಗಿದ್ದು ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚತ್ತಲೇ …
Read More »ಕಾಯಕವೇ ಕೈಲಾಸ ಬಸವಣ್ಣನವರ ಆದರ್ಶವನ್ನು ಪಾಲಿಸಿ- ಶಿವಲಿಂಗಯ್ಯ ಅಲ್ಲಯ್ಯನವರ ಮಠ..
ಕೇಬಲ್ ನಾಗೇಶ್ ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಸರಕಾರ ಬಸವಣ್ಣ ನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಪ್ರತಿಯೊಂದು ಕಚೇರಿಯಲ್ಲಿ ಅವರ ಫೋಟೋ ಹಾಕುವದು ಕಡ್ಡಾಯಗೊಳಿಸಿದ್ದಾರೆ ಅದರಡಿ ಕಾರ್ಯ ನಿರ್ವಹಿಸುವಎಲ್ಲ ಅಧಿಕಾರಿಗಳು , ಸಿಬ್ಬಂದಿಗಳು ಕಾಯಕವೇ ಕೈಲಾಸ ವೆಂದು ಸಾರಿದ ಬಸವಣ್ಣನವರ ಆದರ್ಶವನ್ನು ಪಾಲಿಸುವಂತಾಗಬೇಕು ಎಂದು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಹೇಳಿದರು. ಅವರು ಮಂಗಳವಾರ ತಾಲೂಕಡಳಿತ ಸೌಧದ ಸಭಾಭವನದಲ್ಲಿ ತಾಲೂಕಡಳಿತ ಪ ಪಂ, ವೀರಶೈವ …
Read More »ಎಂ.ಎಲ್.ಸಿ ಶಾಂತಾರಾಮ್ ಸಿದ್ದಿ ಅವರಿಗೆ ಒಲಿದ ಬಿಜೆಪಿಯ ರಾಷ್ಟ್ರೀಯ ಸ್ಥಾನ.
ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಭಾರತೀಯ ಜನತಾ ಪಾರ್ಟಿಯ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ ಆಯ್ಕೆಯಾಗಿದ್ದು ಅನೇಕ ಗಣ್ಯರು ಸಂಸದರು ಶುಭ ಕೋರಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ಅದರಲ್ಲು ಕೇಂದ್ರದಲ್ಲಿ ಈಗಾಗಲೆ ಅಧಿಕಾರದಲ್ಲಿ ಮುಂದುವರೆಯುತ್ತಿರುವ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಲಭಿಸುವುದೆಂದರೆ ಹುಡುಗಾಟದ ಮಾತಲ್ಲ. ಈ ಸ್ಥಾನ ಲಭಿಸಲು ಪಕ್ಷಕ್ಕಾಗಿ ಹಗಲಿರುಳು ದುಡಿದು,ಸಂಘಟನೆಯ ಜವಾಬ್ದಾರಿ ಹೆಗಲಿಗೆ ಹೊತ್ತು ಅವಿರತವಾಗಿ …
Read More »ಮೇರು ವ್ಯಕ್ತಿತ್ವದ “ಹೃದಯವಂತ ಶಿಕ್ಷಕ” ಪ್ರಕಾಶ್ ನಾಯಕ ಇನ್ನಿಲ್ಲ.
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಜನಪ್ರಿಯ ಹಾಗು ಹೃದಯವಂತ ಶಿಕ್ಷಕ ಎನಿಸಿ ದೀರ್ಘಕಾಲ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಸೇವೆಸಲ್ಲಿಸಿದ ಎಲ್ಲರ ನೆಚ್ಚಿನ ಶಿಕ್ಷಕ ಪ್ರಕಾಶ್ ನಾಯಕ ನೇಣಿಗೆ ಶರಣಾಗಿದ್ದು ಹಿತೈಷಿ,ಬಂಧುಗಳು ಅಪಾರ ಸ್ನೇಹ ಬಳಗ ಕಂಬನಿ ಮಿಡಿದಿದೆ.ಮೂಲತಃ ಅಂಕೋಲಾ ತಾಲೂಕಿನ ಮೊಗಟಾ ಮೂಲದವರಾದ ಪ್ರಕಾಶ್ ನಾಯಕ ಕಳೆದ 30 ಕ್ಕು ಅಧಿಕ ವರ್ಷಗಳ ಯಲ್ಲಾಪುರದ ಬಾಂಧವ್ಯ ಹೊಂದಿದ್ದಾರೆ. ಶುಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ …
Read More »ಹರಳಯ್ಯಸ್ತ್ರೀ ಶಕ್ತಿ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಣೆ.
ಪ್ರತಿಧ್ವನಿ ಯಲ್ಲಾಪುರ : 14.4.2026 ರಂದು ಶಾರದಾಗಲ್ಲಿ ಅಂಬೇಡ್ಕರ್ ಭವನದಲ್ಲಿ ಹರಳಯ್ಯಸ್ತ್ರೀ ಶಕ್ತಿ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ವಿಜೇತೆ ಸುನಂದಾ ಪಾಠಣಕರ್ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಹಾಗೂ2024-25 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮರ್ಥ್ ಪಾಠಣಕರ್, ಸಂಕೇತ್ ಪಾಲೇಕರ್, ಆದಿತ್ಯ ಇವರಿಗೆ ಅವರ ಪರವಾಗಿ ಪೋಷಕರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ …
Read More »ಸನಾತನ ಧರ್ಮದ ಸಂಸ್ಕಾರ ಮತ್ತು ಸಂಸ್ಕೃತಿ ಗಳನ್ನು ಉಳಿಸಿಕೊಂಡು ಮುಂದೆ ಸಾಗಬೇಕಿದೆ – ಹೆಬ್ಬಾರ್
ಪ್ರತಿಧ್ವನಿ ಯಲ್ಲಾಪುರ : ವೈದಿಕ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ. ವೇದ, ಉಪನಿಷತ್ತು, ಜ್ಯೋತಿಷ್ಯ, ಸಂಸ್ಕೃತ ಇವುಗಳ ಪರಿಪೂರ್ಣ ಅಧ್ಯಯನ ಮಾಡಿದವನಿಗೆ ಸಮಾಜದಲ್ಲಿ ಸದಾ ಶ್ರೇಷ್ಠರೆನಿಸಿಕೊಳ್ಳುತ್ತಾರೆ. ಅಲ್ಲದೇ ಒಬ್ಬ ಐಎಎಸ್ ಅಧಿಕಾರಿಗಿಂತಲೂ ಗೌರವ ಪಡೆಯುತ್ತಾನೆ. ಅಂತಹ ಸನಾತನ ಧರ್ಮದಲ್ಲಿ ನಾವು ಬಂದಿದ್ದೇವೆ. ಅದನ್ನು ಉಳಿಸಿಕೊಂಡು ಹೋಗುವಲ್ಲಿ ಇಂದಿನ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರು, ಮಂಗಳವಾರ ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ವೇದ, ಸಂಸ್ಕೃತ ಪಾಠಶಾಲಾ ಸಭಾಭವನದಲ್ಲಿ …
Read More »ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..
ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಮಂಡಳ ಕಾರ್ಯಲಯ ದಲ್ಲಿ ಶ್ರದ್ದೆಯ ನಮನಗಳನ್ನು ಸಲ್ಲಿಸಿ ಪುಷ್ಪ ನಮನ ,ಸಂಸ್ಮರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಮಂಡಳ ಅಧ್ಯಕ್ಷರಾದ ಪ್ರಸಾದ ಹೆಗಡೆ,ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಭಟ್ಟ,ಜಿಲ್ಲಾ ವಿಶೇಷ ಆಹ್ವಾನಿತ ಸದಸ್ಯರಾದ ರಾಮು ನಾಯ್ಕ,ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ವೆಂಕಟ್ರಮಣ ಬೆಳ್ಳಿ,ಪಕ್ಷದ SC ಮೋರ್ಚಾ …
Read More »ಯಲ್ಲಾಪುರದ ತಾಲ್ಲೂಕು ಆಡಳಿತ ಹಾಗು ಸಮಾಜಕಲ್ಯಾಣ ಇಲಾಖೆ ಅಡಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ.
ಪ್ರತಿಧ್ವನಿ ಯಲ್ಲಾಪುರ :ಭವ್ಯ ಭಾರತದ ಬೃಹತ್ ಪ್ರಜಾಪ್ರಭುತ್ವಕ್ಕೆ ಸಂವಿಧಾನ ನೀಡಿದ ಮಹಾ ಚೇತನ, ಜಗತ್ತಿನ ಎಲ್ಲಾ ದೇಶಗಳ ಒಳಿತನ್ನು ಆರಿಸಿ ಭಾರತ ನೆಲದ ಜೀವನ ಪದ್ದತಿಗೆ ಅನುಕೂಲ ಆಗುವಂತಹ ಮತ್ತು ದಮನಿತರ ಬದುಕು ಹಸನಾಗಿಸಲು ಸಂವಿಧಾನ ನೀಡಿದ ಮಹಾ ನಾಯಕ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅವರ ಜೀವನ ಶ್ರದ್ದೆ ಬದುಕಿನ ಪಥ ಅನುಕರಣೀಯ ಹಾಗು ಪ್ರಸ್ತುತ ಪೀಳಿಗೆಗೆ ಪ್ರೇರಣಾದಾಯಕ ವ್ಯಕ್ತಿತ್ವ. ಅಂತಹ ಮಹನೀಯರ ಜಯಂತಿ ಆಚರಣೆ ಅರ್ಥಪೂರ್ಣ ಎಂದು …
Read More »
Prathidvani Yellapura