
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಬಸ್ ನಿಲುಗಡೆ ಸಮೀಪದಲ್ಲೇ ಅಪಾಯಕಾರಿಯಾದ ಸ್ಥಿತಿಯಲಿದ್ದ ವಿದ್ಯುತ್ ಟ್ರಾನ್ಸಫಾರ್ಮರ್ ಕುರಿತು ” ಪ್ರತಿಧ್ವನಿ ಯಲ್ಲಾಪುರ ” ವೆಬ್ ನ್ಯೂಸ್ ಎಚ್ಚರಿಸಿ ಸುದ್ದಿ ಪ್ರಕಟಮಾಡಲಾಗಿತ್ತು ವಸ್ತು ಸ್ಥಿತಿಯ ಗಂಭೀರತೆ ಅರಿತ ಹೆಸ್ಕಾಂ ಇಲಾಖೆ ಶನಿವಾರ ಟ್ರಾನ್ಸಫಾರ್ಮರ್ ಸ್ಥಳ ಬದಲಿಸಿ ಮುಂದೆ ಆಗಬಹುದಾಗಿದ್ದ ಅನಾಹುತ ತಪ್ಪಿಸಿದೆ.

ಹುಣಶೆಟ್ಟಿಕೊಪ್ಪದಲ್ಲಿ ಬಸ್ ನಿಲುಗಡೆ ಸಮೀಪದಲ್ಲೇ ಟ್ರಾನ್ಸಫಾರ್ಮರ್ ಇದ್ದು ಮಹಿಳೆಯರು ಮಕ್ಕಳು ಹಿರಿಯರು ಬಸ್ ಹತ್ತುವ ಮತ್ತು ಇಳಿಯುವ ಧಾವಂತದಲ್ಲಿ ವಿದ್ಯುತ್ ಪ್ರವಹಿಸುವ ಟ್ರಾನ್ಸಫಾರ್ಮರ್ ತಾಕಿ ಏನಾದರು ಅಪಾಯ ಸಂಭವಿಸುವ ಸಾದ್ಯತೆ ಇತ್ತು. ಈ ವಿಷಯವನ್ನು ಸ್ಥಳೀಯ ಪ್ರಮುಖ ಸಮಾಜ ಸೇವಕ ವಿನಾಯಕ ತಿನೇಕರ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಗಮನಕ್ಕೆ ತಂದರು. ಸಾಮಾಜಿಕ ಬದ್ದತೆಯ ಹಿನ್ನೆಲೆಯಲ್ಲಿ ಪ್ರತಿಧ್ವನಿ ಹೆಸ್ಕಾಂ ಇಲಾಖೆಗೆ ಎಚ್ಚರಿಸಿ ಸುದ್ದಿ ಪ್ರಕಟಿಸಿತ್ತು ಇದೀಗ ಸುದ್ದಿಗೆ ಸ್ಪಂದಿಸಿ ಟ್ರಾನ್ಸಫಾರ್ಮರ್ ಸ್ಥಳಾಂತರಿಸಿದ್ದು ಹೆಸ್ಕಾಂ ಇಲಾಖೆಯ ಸರ್ವರಿಗು ಪ್ರತಿಧ್ವನಿ ವಂಧಿಸುತ್ತದೆ.

ಅಪಾಯಕಾರಿ ಸ್ಥಿತಿಯಲಿದ್ದ ವಿದ್ಯುತ್ ಟ್ರಾನ್ಸಫಾರ್ಮರ್ ಸ್ಥಳ ಬದಲಿಸಿ ಅನಾಹುತ ತಪ್ಪಿಸಿದ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಸ್ಥಳಾಂತರಕಾರ್ಯಕ್ಕೆ ವೇಗ ನೀಡಿದ ಸ್ಥಳೀಯ ಪ್ರಮುಖ ವಿದ್ಯುತ್ ಗುತ್ತಿಗೆದಾರ, ಆತ್ಮೀಯ ರೀಗನ್ ಡಿಸೋಜ ಅವರಿಗು ವಿಶೇಷವಾಗಿ ಇಲಾಖೆಯ ಗಮನಕ್ಕೆ ತರುವಲ್ಲಿ ಸಹಕಾರಿಯಾದ ಪ್ರತಿಧ್ವನಿ ವೆಬ್ ನ್ಯೂಸ್ ಸಂಪಾದಕರಿಗೆ ಸಮಸ್ತ ಹುಣಶೆಟ್ಟಿಕೊಪ್ಪ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಿನಾಯಕ ತಿನೇಕರ್, ಸ್ಥಳೀಯ ಪ್ರಮುಖ ಹಾಗು ಸಾಮಾಜಿಕ ಕಾರ್ಯಕರ್ತ,ಹುಣಶೆಟ್ಟಿಕೊಪ್ಪ, ಯಲ್ಲಾಪುರ.












Prathidvani Yellapura