
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಬಸ್ ನಿಲುಗಡೆ ಮಾಡುವ ಸ್ಥಳದಲ್ಲಿ ಹೆಸ್ಕಾಂ ಸಂಬಂಧಿಸಿದ ಟ್ರಾನ್ಸಫಾರ್ಮರ್ ಇದ್ದು ಮಹಿಳೆಯರು ಮಕ್ಕಳು ವಯೋವೃದ್ದರು ಇದೇ ಸ್ಥಳದಲ್ಲಿ ಜಮಾಯಿಸಿ ಬಸ್ ಹತ್ತವುದರಿಂದ ಕೊ.ಚ ನಿರ್ಲಕ್ಷ್ಯ ತೋರಿದರು ವಿದ್ಯುತ್ ಅವಘಡಕ್ಕೆ ಜೀವ ಬಲಿಯಾಗುವುದು ಖಂಡಿತವಾಗಿದ್ದು ಅಧಿಕಾರಿಗಳು ಗಂಭೀರವಾಗಿ ಗಮನಹರಿಸಿ ಭವಿಷ್ಯದಲ್ಲಿ ಆಗಬಹುದಾದ ಅನಾಹುತ ತಪ್ಪಿಸಬೇಕಿದೆ ಎಂಬುದು ಸ್ಥಳೀಯ ನಾಗರಿಕರ ಅಭಿಪ್ರಾಯವಾಗಿದೆ.

ಸುರಿಯುತ್ತಿರುವ ಮಳೆಯ ನಡುವೆ ಜನರು ವಿದ್ಯುತ್ ಎಚ್ಚರಿಕೆ ಯನ್ನು ಗಮನಿಸದೆ ಬಸ್ ಹತ್ತುವ ಬರದಲ್ಲಿ ಅವಘಡ ಸಂಭವಿಸುವ ಸಾದ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ಟ್ರಾನ್ಸಫಾರ್ಮರ್ ಸ್ಥಳ ಬದಲಿಸಿ ಅಪಾಯ ತಪ್ಪಿಸಬೇಕಿದೆ.

ಇಂತಹ ಅಪಾಯ ಕಣ್ಣೆದುರಿಗಿದ್ದರು ಬಸ್ ಚಾಲಕರು ಸಹಿತ ಇದೇ ಸ್ಥಳದಲ್ಲಿ ಬಸ್ ನಿಲುಗಡೆ ಮಾಡುತ್ತಿರುವುದು ತಪ್ಪಾಗಲಿದ್ದು ಬದಲಿ ವ್ಯವಸ್ಥೆ ಆಗುವ ತನಕ ಕೊಂಚ ದೂರದಲ್ಲೆ ಬಸ್ ನಿಲುಗಡೆ ಸೂಕ್ತ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಇದು ಅತ್ಯಂತ ಅಪಾಯಕಾರಿಯಾಗಲಿದ್ದು ಸಂಬಂಧಿಸಿದ ಹೆಸ್ಕಾಂ ಅಧಿಕಾರಿಗಳು ತ್ವರಿತವಾಗಿ ಟ್ರಾನ್ಸಫಾರ್ಮರ್ ಸ್ಥಳ ಬದಲಿಸಬೇಕಿದೆ. ಕಣ್ಣ ಮುಂದೆಯೆ ಅಪಾಯ ಇಟ್ಟುಕೊಂಡು ನಿರ್ಲಕ್ಷ್ಯ ತೋರಿದರೆ ಮುಂದೆ ಬಾರಿ ಅವಘಡ ಸಂಭವಿಸಲಿದೆ. ಬಸ್ ಚಾಲಕರು ಸಹಿತ ಅಪಾಯಕಾರಿ ಸ್ಥಳಗಳಲ್ಲಿ ಕೊಂಚ ಎಚ್ಚರಿಕೆ ವಹಿಸಿ ಬಸ್ ನಿಲುಗಡೆ ಮಾಡುವುದು ಸೂಕ್ತ. ಸಾರ್ವಜನಿಕರು ಸಹ ಇಂತಹ ಅಪಾಯಕಾರಿ ಸ್ಥಳಗಳಲ್ಲಿ ಜಾಗ್ರತೆ ವಹಿಸಬೇಕಿದೆ. ವಿನಾಯಕ ತಿನೇಕರ್, ಸ್ಥಳೀಯ ಪ್ರಮುಖರು









Prathidvani Yellapura