


ಪ್ರತಿಧ್ವನಿ ಯಲ್ಲಾಪುರ : ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಮುಖಂಡರಾದ ವಿಜಯ ಮಿರಾಶಿ ಅವರ ನೇತೃತ್ವದಲ್ಲಿ ಹುಣಸಗೇರಿಯಿಂದ -ಯಲ್ಲಾಪುರಕ್ಕೆ ಸಾರಿಗೆ ಸೌಲಭ್ಯ ಪ್ರಾರಂಭಿಸಿದ್ದು ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ.

ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಹುಣಸಗೇರಿ ಗೌಳಿವಾಡಾ ಗ್ರಾಮದಲ್ಲಿ ದಟ್ಟವಾದ ಅರಣ್ಯ ಪ್ರದೇಶ ಹೊಂದಿದ್ದು ಅನೇಕ ಪ್ರಾಣಿಗಳ ಭಯದಿಂದ ಕೂಡಿದೆ. ಇಂತಹ ದುರ್ಗಮ ಅರಣ್ಯದನಡುವೆ ನಡೆದು ದಾಗುವುದು ದುಸ್ತರದ ಸಂಗತಿಯಾಗಿತ್ತು. ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಅಡಚಣೆಯಾಗುತ್ತಿತ್ತು. ಈ ಕುರಿತು ಸಮಸ್ಯೆಯನ್ನು ಈ ಭಾಗದ ಪ್ರಮುಖ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸಮಸ್ಯೆ ಶಾಸಕರ ಗಮನಕ್ಕೆ ತಂದು ಬಸ್ ಸೌಕರ್ಯ ಕಾಣದ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ರಾಘವೇಂದ್ರ ಗೊಂದಿ, ರೆಹಮತ್ ಅಬ್ಬಿಗೆರೆ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್, ಸ್ಥಳೀಯ ಪ್ರಮುಖರು, ಊರ ನಾಗರಿಕರು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಶ್ರೀ ರಾಮಸೇನಾ ಯುವಕರ ಸಂಘ (ರಿ )ಹುಣಸಗೇರಿ ಗೌಳಿವಾಡ ಹಾಗೂ ಸಮಸ್ತ ಊರ ನಾಗರೀಕರು ಸರ್ವರಿಗು ಕೃತಜ್ಞತೆ ಸಲ್ಲಿಸಿದ್ದಾರೆ.








Prathidvani Yellapura