
ಪ್ರತಿಧ್ವನಿ ಯಲ್ಲಾಪುರ : ಪ್ರಭು ಶ್ರೀ ರಾಮನ ಹಣ,ಒಡವೆ,ಬೆಳ್ಳಿ ಇಟ್ಟಿಗೆ,ಇತರೆ ಕಾಣಿಕೆಗಳನ್ನೆ ಬಿಡದೆ ಕದ್ದವರು ಸಮಸ್ತ ಹಿಂದು ಕುಲಕೋಟಿ ಬಂಧುಗಳಲ್ಲಿನ ನಂಬಿಕೆಗೆ ಗಾಯಪಡಿಸಿದ್ದಾರೆ ಅಲ್ಲದೆ ದೇವಾಲಯಗಳ ವ್ಯವಸ್ಥೆ ಮೇಲೆ ಅನುಮಾನ ಬರುವಂತೆ ಮಾಡಿರುವುದು ಅತ್ಯಂತ ಶೋಚನೀಯ ಆಗಿದೆ.


ಪ್ರಭು ಶ್ರೀ ರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ನಡೆದ ಕಾಣಿಕೆ ಕಳ್ಳತನದ ಹಗರಣ ಭೇದಿಸಲು ಅಲ್ಲಿನ ಸರ್ಕಾರ ಎಸ್‌ಐಟಿ ರಚಿಸಿದ್ದು ತನಿಖೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ದೇಶದ ಜನತೆ ಬೆಚ್ಚಿಬೀಳಿಸು ರೀತಿಯ ಅಂಶಗಳು ಬಯಲಾಗುತ್ತಲಿದೆ.ಇಂತಹ ವ್ಯವಸ್ಥೆ ಮದ್ಯೆ ದೇವರು ದೇವಸ್ಥಾನದ ಮೇಲಿನ ನಂಬಿಕೆ ಕಡಿಮೆಯಾಗುತ್ತಿರುವುದು ಆಘಾತಕಾರಿ ಅಂಶವಾಗಿದೆ ತಪ್ಪಿತಸ್ಥರಿಗೆ ಕಠಿಣಾತಿಕಠಿಣ ಶಿಕ್ಷೆ ಆಗದ ಹೊರತು ದೇಶವಾಸಿಗಳಿಗೆ ನಂಬಿಕೆ ಬರಲು ತಲೆಮಾರುಗಳೆ ಕಳೆಯಬೇಕಾದೀತು.

ಇಂತಹ ಕಾಣಿಕೆ ಕಳ್ಳತನ ಪ್ರಕರಣಗಳು ನಮ್ಮ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿಯು ನಡೆಯುತ್ತಿರುತ್ತದೆ ಆದರೆ ಅದನ್ನು ಯಾರು ಪ್ರಶ್ನಿಸುವುದಿಲ್ಲ. ಅದನ್ನೆ ಬಂಡವಾಳ ಮಾಡಿಕೊಂಡ ಕೆಲವು ಮಹನಿಯರು ದೇವರ ದುಡ್ಡಲ್ಲೆ ಬದುಕಿಬಿಡುತ್ತಾರೆ. ಆ ಹಣದಲ್ಲಿ ಒರ್ವ ಬಿಕ್ಷುಕ ಬಿಕ್ಷೆ ಬೇಡಿ ತಂದ ಹಣವು ಸೇರಿರುತ್ತದೆ ಅದನ್ನು ತಿಂದು ತೇಗುವ ಕೆಲವು ಮಹನಿಯರಿಗೆ ನಾಚಿಕೆಯಾಗಬೇಕು, ಅದು ಭಕ್ತರ ಭಾವನೆಯೊಂದಿಗೆ ಆಟವಾಡಿದಂತೆ. ಮತ್ತು ಕೆಲವೆಡೆ ದೇವರಿಗೆ ನೀಡಿದ ಉಡಿಕಾಣಿಕೆ,ಹೊರೆ ಕಾಣಿಕೆಯ ಬೆಲೆಬಾಳುವ ವಸ್ತುಗಳು ಕೆಲವು ಮಹನಿಯರ ಮನೆ ಸೇರಿವೆ ಎಂಬ ಮಾತು ಕೇಳಿ ಬರುತ್ತಿರುತ್ತದೆ. ನಾಚಿಕೆ ಇಲ್ಲದಂತೆ ಉಡಿ ಸೀರೆಗಳನ್ನು ಕದ್ದೊಯ್ದಿದ್ದಾರೆ ಎಂಬ ಮಾತು ಹಲವು ಊರುಗಳಲ್ಲಿ ಕೇಳಿ ಬರುತ್ತಿರುತ್ತದೆ ಚೀ….ಇನ್ನಾದರು ಬುದ್ದಿ ಕಲಿತು ಭಕ್ತರ ನಂಬಿಕೆ ಉಳಿಸಿಕೊಳ್ಳುವ ಕೆಲಸವಾಗಬೇಕಿದೆ.
ಪ್ರತಿ ಸಂದರ್ಭದಲ್ಲಿ ಅನ್ಯ ಧರ್ಮದ ಕಡೆಗೆ ಬೆರಳು ತೋರಿಸಿ ತಮ್ಮತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಾಲ ದೂರಾಗಿ ಜನತೆ ಎಲ್ಲವನ್ನು ಪರಾಮರ್ಶಿಸಿ ತಪ್ಪಿತಸ್ಥರಿಗೆ ಪಾಠ ಮಾಡಲು ಶುರು ಮಾಡಿದ್ದಾರೆ. ಮತ್ತೆಮತ್ತೆ ಜನ ಮರುಳಾಗುವುದನ್ನು ಬಿಟ್ಡಿದ್ದಾರೆ.
ಯಾವುದೆ ಊರಿನ ಹಿಂದು ಬಂಧುಗಳು ದೇವರ ಮೇಲಿನ ಭಯಭಕ್ತಿ ಮತ್ತು ಧರ್ಮದ ಮೇಲಿನ ಕಾಳಜಿಯಿಂದ ಸಮೀಪದ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದು ಭಕ್ತಿ ಸಮರ್ಪಿಸಿ ಹಾಗೇನಾದರು ಹಣ,ಒಡವೆ,ಇತರೆ ಕಾಣಿಕೆ ಸಾಮಾಗ್ರಿಗಳನ್ನು ನೀಡಿದರೆ ಅದು ಸಮರ್ಪಕವಾಗಿ ದೇವರ ಕಾರ್ಯಕ್ಕೆ ತಲುಪುತ್ತದೆಯ ತಿಳಿದುಕೊಳ್ಳಿ ಇಲ್ಲವಾದಲ್ಲಿ ನಿಮ್ಮ ಅಮಾಯಕ ಭಕ್ತಿಯನ್ನೆ ಬಂಡವಾಳ ಮಾಡಿಕೊಂಡ ಮಹನೀಯರೆನಿಸಿಕೊಂಡ ಕಳ್ಳರ ತಂಡ ಕೊಳ್ಳೆ ಹೊಡೆಯೋದರಲ್ಲಿ ಯಾವುದೆ ಅನುಮಾನವಿಲ್ಲ.
ಪ್ರತಿ ದೇವಾಲಯದ ಜವಾಬ್ದಾರಿ ಹೊತ್ತು ನಿರ್ವಹಿಸುವವರು ಸಹ ಭಕ್ತರು ನೀಡಿದ ಕಾಣಿಕೆ ಖರ್ಚುವೆಚ್ಚಗಳನ್ನು ಮಾದ್ಯಮದ ಮೂಲಕ ಪ್ರತಿ ತಿಂಗಳು ಬಹಿರಂಗ ಪಡಿಸಿದರೆ ಸಾರ್ವಜನಿಕ ಭಕ್ತರಿಗೆ ನಿಮ್ಮ ವ್ಯವಸ್ಥೆ ಮೇಲೆ ಮತ್ತು ದೇವಸ್ಥಾನದ ಮೇಲೆ ನಂಬಿಕೆ ಮತ್ತಷ್ಟು ಗಟ್ಟಿಗೊಳ್ಳುತ್ತದೆ ಇಲ್ಲವಾದಲ್ಲಿ ತಾಳ್ಮೆ ಮೀರಿ ಒಂದು ದಿನ ನಿಮ್ಮನ್ನೆಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕಂಬಕ್ಕೆ ಕಟ್ಟಿಹಾಕಿ ಸತ್ಯ ಕಕ್ಕಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ ಎಂಬುದು ಪ್ರಜ್ಞಾವಂತ ಭಕ್ತ ಸಮೂಹದ ಒಟ್ಟಾರೆ ಅಭಿಪ್ರಾಯವಾಗಿದೆ.













Prathidvani Yellapura