ಪ್ರತಿಧ್ವನಿ ಯಲ್ಲಾಪುರ :ದೇಹದಲ್ಲಿ ಸರ್ವ ಅಂಗಗಳು ಪ್ರಾಮುಖ್ಯವೆ ಅದರಲ್ಲೂ ಕಣ್ಣಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಜಗತ್ತನ್ನು ದರ್ಶಿಸುವುದು ಕಣ್ಣಿನಿಂದಲೆ ಅಂತಹ ಕಣ್ಣಿನ ಬಗ್ಗೆ ಪ್ರತಿಯೊಬ್ಬರು ಜಾಗ್ರತೆ ವಹಿಸಿ ಕಾಲಕಾಲಕ್ಕೆ ತಪಾಸಣೆಯೊಂದಿಗೆ ಹಾರೈಕೆ ಅತಿ ಮುಖ್ಯ ವಾಗಿದೆ ಇಂತಹ ಸಾರ್ಥಕ ಸೇವಾ ಈ ಭಾಗದ ಜನರಿಗೆ ಅನುಕೂಲ ಆಗಿದೆ,ಕಣ್ಣಿನ ಸಮಸ್ಯೆಗೆ ದೂರದ ಮಹಾನಗರ ಗಳಿಗೆ ತಲುಪುವುದು ಅಸಾಧ್ಯ ವಾಗಿತ್ತು ಊರಿನಲ್ಲಿ ಯೇ ಕಣ್ಣಿನ ತಪಾಸಣೆ ಮಾಡಿದ್ದಕ್ಕೆ ಸಂಘಟಕರಿಗೆ ಧನ್ಯವಾದ ಅರ್ಪಿಸುವೆ ಎಂದು …
Read More »ರೈತ ಮಕ್ಕಳಂತೆ ಬೆಳೆದ ಅಡಿಕೆ ಮರ ಕಡಿಯುವ ಹಕ್ಕು ಅರಣ್ಯ ಇಲಾಖೆಗಿಲ್ಲ ಇಂತಹ ನಡೆ ಖಂಡನಾರ್ಹ – ಅನಂತಮೂರ್ತಿ ಹೆಗಡೆ ಗುಡುಗು.
ಪ್ರತಿಧ್ವನಿ ಯಲ್ಲಾಪುರ – ಅಡಿಕೆ ಮರವನ್ನು ಕಡಿಯುವ ಹಕ್ಕನ್ನು ಅರಣ್ಯ ಇಲಾಖೆಗೆ ಯಾರೂ ಕೊಟ್ಟಿಲ್ಲ.ಮರಗಳನ್ನು ಕುಡಿಯಬೇಕು ಎಂದು ಅರಣ್ಯ ಇಲಾಖೆಯ ಯಾವ ನಿಯಮದಲ್ಲಿದೇ? ಮರವನ್ನು ಉಳಿಸಿ ಬೆಳೆಸುವುದು ಅರಣ್ಯ ಇಲಾಖೆ ಕರ್ತವ್ಯ ಮರಕಡಿಯುವುದಲ್ಲ. ಅರಣ್ಯ ಇಲಾಖೆಯ ಈ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅರಣ್ಯ ಇಲಾಖೆ ನಡೆಯ ವಿರುದ್ಧ ಗುಡುಗಿದರು. ಯಲ್ಲಾಪುರ ತಾಲೂಕಿನ ಕುಂದರಗಿ ಪಂಚಾಯತ್ ವ್ಯಾಪ್ತಿಯ ಬೆಳ್ಳಂಬೆಯ ಸದಾಶಿವ ನಾಯ್ಕ …
Read More »ಈದ್-ಮಿಲಾದ್ ಶಾಂತಿಯುತ ಆಚರಣೆಗೆ – ಯಲ್ಲಾಪುರ ಪೊಲೀಸರ ಬಂದೋಬಸ್ತ್ ಪಥ ಸಂಚಲನ.
ಪ್ರತಿಧ್ವನಿ ಯಲ್ಲಾಪುರ : ಶಾಂತಿ ಮತ್ತು ಸೌಹಾರ್ಧತೆಗೆ ಹೆಸರಾದ ಯಲ್ಲಾಪುರ ತಾಲೂಕಿನಲ್ಲಿ ಯಾವುದೆ ಧರ್ಮದ ಹಬ್ಬದಾಚರಣೆ ವೇಳೆ ಅನಿರೀಕ್ಷಿತವಾಗಿ ಯಾವುದೆ ಅಶಾಂತಿ ತಲೆದೂರದಂತೆ ಹಾಗು ಶಾಂತಿ ಸುವ್ಯಸ್ಥೆಗೆ ನಾವಿದ್ದೇವೆ ಎಂಬ ಸಂದೇಶ ಸಾರಲು ಯಲ್ಲಾಪುರ ಪೋಲಿಸರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು. ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ,ಪಿ.ಐ ರಮೇಶ್ ಹಾನಾಪುರ,ಪಿಎಸ್ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಅವರೊಂದಿಗೆ ಡಿ.ಆರ್.ಎಫ್, ಹೋಂ ಗಾಡ್೯ ಹಾಗು ಪೊಲೀಸರು ಸೇರಿದಂತೆ 60 …
Read More »ನಿತ್ಯ ಬಳಕೆ ವಸ್ತುಗಳ ದರ ಗಗನಕ್ಕೆ – ಬರಲಿರುವ ಹಬ್ಬಗಳ ಆಚರಣೆ ಕಷ್ಟವೋ ಕಷ್ಟ…
ಪ್ರತಿಧ್ವನಿ ಯಲ್ಲಾಪುರ : ಹಬ್ಬ ಹರಿದಿನಗಳು ಹತ್ತಿರವಾದಂತೆಲ್ಲಾ ದಿನಸಿ, ತರಕಾರಿ, ಈರುಳ್ಳಿ, ಸಕ್ಕರೆ, ಹೂವು ಹಾಗೂ ಹಬ್ಬದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಈರುಳ್ಳಿ ದರ ಏರಿಕೆ: ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಕೆ.ಜಿಗೆ ₹60ರ ಗಡಿ ದಾಟಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಆತಂಕವಿದೆ.ಕಳೆದ ವರ್ಷಕ್ಕಿಂತ ಶೇಕಡ 45ರಷ್ಟು ಹೆಚ್ಚಳಗೊಂಡಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ಒಂದು ಕೆಜಿ ಈರುಳ್ಳಿಯು 45 ರಿಂದ …
Read More »ಯಲ್ಲಾಪುರ ಪಟ್ಟಣದಲ್ಲಿ ಅನಾಥವಾಗಿ ಸುತ್ತುತ್ತಿವೆ ಎರಡು ಕುದುರೆಗಳು.- ಮಾಲಿಕರ ಸುಪರ್ಧಿಗೆ ಅಥವಾ ಪ್ರಾಣಿಗಳ ಆಸರೆಗೆ ವ್ಯವಸ್ಥೆ ಮಾಡಬೇಕಿದೆ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತ, ಮುಂಡಗೋಡು ರಸ್ತೆ ಸುತ್ತ ಮುತ್ತ ಕಳೆದ ಕೆಲವು ದಿನಗಳಿಂದ ಎರಡು ಕುದುರೆಗಳು ಅನಾಥವಾಗಿ ಸುತ್ತುತ್ತಿದ್ದು ಪ್ರಾಣಿ ಪ್ರಿಯರು ಅಥವಾ ಅರಣ್ಯ ಇಲಾಖೆ ಯವರು ಅಥವಾ ಸಂಬಂಧಿಸಿದ ಇಲಾಖೆಯವರು ಈ ಮೂಕ ಪ್ರಾಣಿಗಳಿಗೆ ಆಸರೆ ಒದಗಿಸುವತ್ತ ಗಮನ ಹರಿಸಬೇಕಿದೆ ಎಂಬುದು ಸ್ಥಳೀಯ ನಾಗರಿಕರ ಅಭಿಪ್ರಾಯವಾಗಿದೆ. ಬೇರಾವುದೋ ಊರಿನಿಂದ ವಾಹನದಲ್ಲಿ ತಂದು ಯಲ್ಲಾಪುರ ಅರಣ್ಯ ಪರಿಸರದಲ್ಲಿ ಬಿಟ್ಟು ಹೋಗಿರುವ ಸಾದ್ಯತೆ ಇದೆ. ಅಥವಾ ಮಾಲಿಕರು …
Read More »25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನ ಬಂಧನ – ಯಲ್ಲಾಪುರ ಪೊಲೀಸರ ಕಾರ್ಯಕ್ಕೆ SP ಶ್ಲಾಘನೆ.
ಪ್ರತಿಧ್ವನಿ ಯಲ್ಲಾಪುರ : ಕಳೆದ 25 ವರ್ಷಗಳಿಂದ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದು ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೋಲಿಸ್ ಅಧೀಕ್ಷಕ ದೀಪನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಗುಜರಾತ್ ಪೋರಬಂದರ್ ಮೂಲದ ಚಾಲಕ ವೃತ್ತಿಯ ಆರೋಪಿತ ಕೇಸುಬಾಯಿ ತಂದೆ ಮಿನಂದಾಬಾಯಿ ಸಿಸೋಡಿಯಾ ಅಲಿಯಾಸ್ ಮೊದ್ವಾಡಿಯಾ ಕೇಸುಬಾಯಿ. ಪ್ರಾಯ: 58 ಎಂಬಾತನು 2001 ರಲ್ಲಿ ಯಲ್ಲಾಪುರದಲ್ಲಿ ಹಾದು ಹೋಗಿರುವ ಕಾರವಾರ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಜೋಗಿಕೋಪ್ಪ …
Read More »ಕೃಷಿ ಸಾಲ ಮಿತಿ 5 ಲಕ್ಷಕ್ಕೆ ಏರಿಕೆ: ಶೂನ್ಯ ಬಡ್ಡಿ- ಮುಖ್ಯಮಂತ್ರಿಗಳಿಂದ ಸುತ್ತೋಲೆ.
ಪ್ರತಿಧ್ವನಿ ಯಲ್ಲಾಪುರ : ರೈತರಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿರುವ ಸಾಲದ ಮಿತಿಯನ್ನು 5ಲಕ್ಷಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂದೇಶವನ್ನು ನೀಡಿದ್ದು, ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಛೇರಿಯಿಂದ ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ. 2023-24ರಲ್ಲಿ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮಿತಿಯನ್ನು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವು 3ರಿಂದ 5ಲಕ್ಷಕ್ಕೆ ಹೆಚ್ಚಿಸಿತ್ತು. ಆದರೆ ನಬಾರ್ಡ್ ಇದಕ್ಕೆ ಅಗತ್ಯವಾಗಿರುವಂತಹ ಮೊತ್ತವನ್ನು ಬಿಡುಗಡೆಗೊಳಿಸದ ಹಿನ್ನೆಲೆಯಲ್ಲಿ ಹಲವಾರು …
Read More »ಯಲ್ಲಾಪುರ ತಾಲೂಕಿನ ಖಾರೆವಾಡ ಮೂಲದ 33 ವರ್ಷದ ಚಾಂಗು ಪಟಕಾರೆಗೆ ಚಿಕಿತ್ಸೆಗೆ ಬೇಕಿದೆ ಆರ್ಥಿಕ ಸಹಾಯ.
ಪ್ರತಿಧ್ವನಿ ಯಲ್ಲಾಪುರ :ತಾಲೂಕಿನ ಖಾರೆವಾಡ ನಿವಾಸಿ ಅತ್ಯಂತ ಹಿಂದುಳಿದ ಧನಗರ ಗೌಳಿ ಸಮುದಾಯದ ಕಡುಬಡವನಾಗಿರುವ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ, ಚಾಂಗು ಪಟಗಾರೆ ವಯಸ್ಸು 33 ವರ್ಷ ಎಂಬಾತ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈಗಾಗಲೇ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಿ ಸುಮಾರು 10 ರಿಂದ 12 ಲಕ್ಷ ರೂಪಾಯಿ ಖರ್ಚು ಆಗಿರುತ್ತದೆ.ಹಾಗೆಯೇ,ಈಗ ಈ ಕ್ಯಾನ್ಸರ್ ರೋಗವು 3 ನೇ ಹಂತಕ್ಕೆ (Third Stage* ) ತಲುಪಿದೆ.ಈಗ ಮತ್ತೆ ಶಸ್ತ್ರಚಿಕಿತ್ಸೆ …
Read More »ಯಲ್ಲಾಪುರದಲ್ಲಿ 84 ಹಳ್ಳಿ ಸೂಕ್ಷ್ಮ ಪ್ರದೇಶ: ಶಿರಸಿಯಲ್ಲಿ ಸೆ.5 ರಂದು ಸಲ್ಲಿಸುವ ಆಕ್ಷೇಪ ಪತ್ರಕ್ಕೆ ಯಲ್ಲಾಪುರದಿಂದ ಸಂಪೂರ್ಣ ಬೆಂಬಲ : ರವೀಂದ್ರ ನಾಯ್ಕ್..
ಪ್ರತಿಧ್ವನಿ ಯಲ್ಲಾಪುರ : ಕಸ್ತೂರಿ ರಂಗನ್ 7 ನೇ ಅಧಿಸೂಚನೆ ಗೆ ಆಕ್ಷೇಪ ಪತ್ರ ಸಲ್ಲಿಸಲು ಯಲ್ಲಾಪುರದಿಂದ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಕಸ್ತೂರಿ ರಂಗನ್ ವಿರೋಧಿ ರ‍್ಯಾಲಿಯಲ್ಲಿಆಕ್ಷೇಪ ಪತ್ರ ಸಲ್ಲಿಸುವುದರೊಂದಿಗೆ ಹೋರಾಟಕ್ಕೆ ಬೆಂಬಲಿಸಲು ತೀರ್ಮಾನಿಸಲಾಯಿತು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಅವರು ಸೋಮವಾರ ಪಟ್ಟಣದ ವೆಂಕಟರಮಣ ಸಭಾಂಗಣದಲ್ಲಿ ಜರುಗಿದ ಕಸ್ತೂರಿ ರಂಗನ್ ವಿರೋಧಿ ರ‍್ಯಾಲಿ ಪೂರ್ವಬಾವಿ ಸಭೆಯಲ್ಲಿನ ಮಾಹಿತಿ ಮಾದ್ಯಮಕ್ಕೆ ತಿಳಿಸಿದರು. ಯಲ್ಲಾಪುರ …
Read More »ತಾಲೂಕು ಮಟ್ಟದ ಕಾಲೇಜು ಕ್ರೀಡಾಕೂಟದಲ್ಲಿ ಯಲ್ಲಾಪುರದ ವೈ.ಟಿ.ಎಸ್.ಎಸ್ ಗೆ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ,
ಪ್ರತಿಧ್ವನಿ ಯಲ್ಲಾಪುರ : ತಾಲೂಕಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 36 ಪ್ರಥಮ, 18 ದ್ವಿತೀಯ ಹಾಗೂ 11 ಕ್ರೀಡೆಗಳಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ಶಿಕ್ಷಣಕ್ಕು ಸೈ ಕ್ರೀಡೆಗಳಲ್ಲು ಜೈ ಎನಿಸಿಕೊಂಡಿದೆ. ವಿಶೇಷವಾಗಿ ವೈ.ಟಿ.ಎಸ್.ಎಸ್ ಪದವಿಪೂರ್ವ ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡದ್ದಲ್ಲದೆ ಕಾಲೇಜಿನ ಶ್ರೀದೇವಿ ಗಂಗಾನಾಯ್ಕ ಹಾಗೂ ನಾದಶ್ರೀ ರಾಮಚಂದ್ರ ಭಟ್ಟ ವೈಯಕ್ತಿಕ ವೀರಾಗ್ರಣಿ …
Read More »
Prathidvani Yellapura